ಗುಣಮಟ್ಟದ ಕಾಮಗಾರಿ ಮಾಡಿ : ಈ ಕಾಮಗಾರಿಯಲ್ಲಿ ಬಳಸಲಾಗುತ್ತಿರುವ ವಸ್ತುಗಳು ಕಳಪೆಯಾಗಿದ್ದು, ಪ್ರತಿನಿತ್ಯ ಮಾರುಕಟ್ಟೆಯಲ್ಲಿ 40 ಟನ್ಗಳ ಭಾರ ಹೊಂದಿರುವ ವಾಹನಗಳು ಸಂಚರಿಸುತ್ತವೆ, ರಸ್ತೆಯ ಮೇಲ್ಭಾಗದಲ್ಲಿಯೇ ಪೈಪ್ಲೈನ್ ಅಳವಡಿಸಲಾಗಿದೆ, ಒಂದು ಅಡಿ ಮೇಲಕ್ಕೆ ಹಾಕಲಾಗಿದ್ದು, ವಾಹನಗಳ ಓಡಾಟದಿಂದ ಪೈಪ್ಗಳು ಹಾಳಾಗುತ್ತವೆ, ಜನರ ತೆರಿಗೆ ದುಡ್ಡನ್ನು ವಿನಾ ಕಾರಣ ಪೋಲು ಮಾಡುತ್ತಿದ್ದಾರೆ. ಈ ಕುರಿತು ಎಪಿಎಂಸಿ ಮಾರುಕಟ್ಟೆಯ ಅಧಿಕಾರಿಗಳು ಗಮನ ಹರಿಸಬೇಕು, ಗುಣಮಟ್ಟದ ಕಾಮಗಾರಿ ಮಾಡುವಂತೆ ಕ್ರಮ ತೆಗೆದುಕೊಳ್ಳ ಬೇಕು ಎಂದು ವರ್ತಕ ಅಶ್ವತ್ಥ್ರೆಡ್ಡಿ ಆಗ್ರಹಿಸಿದರು.