ಫುಟ್​ಬಾಲ್​ ಮೈದಾನದಲ್ಲಿ ಓವರ್​ಹೆಡ್​ ಟ್ಯಾಂಕ್​ ನಿಮಾರ್ಣ / ANELA

ಆನೇಕಲ್​ ಫುಟ್​ಬಾಲ್ ಕ್ರೀಡಾಂಗಣದಲ್ಲಿ ಓವರ್​ಹೆಡ್​ ಟ್ಯಾಂಕ್​ ನಿರ್ಮಾಣ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದ್ದ ಸ್ಥಳಿಯರೊಂದಿಗೆ ಬಿಇಒ ಗುರುಮೂರ್ತಿ ಸ್ಥಳ ಪರಿಶೀಲನೆ ನಡೆಸಿದರು.
ಆನೇಕಲ್​ ಫುಟ್​ಬಾಲ್ ಕ್ರೀಡಾಂಗಣದಲ್ಲಿ ಓವರ್​ಹೆಡ್​ ಟ್ಯಾಂಕ್​ ನಿರ್ಮಾಣ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದ್ದ ಸ್ಥಳಿಯರೊಂದಿಗೆ ಬಿಇಒ ಗುರುಮೂರ್ತಿ ಸ್ಥಳ ಪರಿಶೀಲನೆ ನಡೆಸಿದರು.
Published on

ಆನೇಕಲ್​ :

ರಾಷ್ಟ್ರೀಯ ಹಬ್ಬಗಳ ಆಚರಣೆ, ತಾಲೂಕುಮಟ್ಟದ ಕ್ರೀಡಾಕೂಟಗಳು ಸೇರಿ ಸಾರ್ವಜನಿಕರ ವಿಹಾರಕ್ಕೂ ಬಳಕೆಯಾಗುತ್ತಿರುವ ಪಟ್ಟಣದ ುಟ್​ಬಾಲ್​ ಮೈದಾನದಲ್ಲಿ ಓವರ್​ಹೆಡ್​ ಟ್ಯಾಂಕ್​ ನಿಮಾರ್ಣದ ವಿಚಾರ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಮೈದಾನದಲ್ಲಿನ ಮರಗಳ ಮಾರಣಹೋಮಕ್ಕೆ ಕನ್ನಡಪರ ಸಂಟನೆಗಳು ಹಾಗೂ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೈದಾನದ ಎಡಭಾಗದಲ್ಲಿ ಓವರ್​ಹೆಡ್​ ಟ್ಯಾಂಕ್​ ಶಿಥಿಲಗೊಂಡ ಕಾರಣ ಹೊಸ ಟ್ಯಾಂಕ್​ ನಿರ್ಮಾಣಕ್ಕೆ ಮತ್ತೆ ಮೈದಾನದಲ್ಲೇ ಮಂಗಳವಾರ ಸ್ಥಳ ಗುರುತಿಸುವ ವೇಳೆ ಕ್ರೀಡಾಂಗಣದಲ್ಲಿದ್ದ ಮರಗಳನ್ನು ತೆರವುಗೊಳಿಸಲು ಮುಂದಾಗಿದ್ದರು. ವಕೀಲರಾದ ಪುರುಷೋತ್ತಮ್​, ಏರ್​ಟೆಲ್​ ಸುರೇಶ್​ ಸೇರಿ ಕನ್ನಡಪರ ಹೋರಾಟಗಾರರು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ, ಕಾಮಗಾರಿ ಕುರಿತು ಪ್ರಶ್ನಿಸಿದರು. ಮರಗಳನ್ನು ಕಡಿದಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅಧಿಕಾರಿಗಳು ಸ್ಥಳಕ್ಕಾಗಮಿಸಿ ಆಗಲೇ ಕಡಿದ ಮರದ ದಿಮ್ಮಿಗಳನ್ನು ಟ್ರಾ$್ಯಕ್ಟರ್​ ಮೂಲಕ ತುಂಬಿಕೊಂಡು ಹೋದರು. ಈ ಬೆಳವಣಿಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮರಗಳನ್ನು ತೆರವುಗೊಳಿಸುವ ಮುನ್ನ ಸಂಬಂಧಿತ ಇಲಾಖೆಯಿಂದ ಅನುಮತಿ ಪಡೆಯಲೇಬೇಕು. ಮರ ತೆರವುಗೊಳಿಸಲು ಅನುಮತಿ ನೀಡಲಾಗಿದೆಯೇ? ನೀಡಿದ್ದರೆ ಯಾವ ಉದ್ದೇಶಕ್ಕಾಗಿ ಅನುಮತಿ ಪಡೆಯಲಾಗಿದೆ? ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

"ಮೈದಾನ ಉಳಿಸಿ' ಕೂಗು ಜೋರು :

ಕ್ರೀಡಾಂಗಣವೆಂದರೆ ಕೇವಲ ಆಟವಾಡುವ ಜಾಗವಲ್ಲ. ಅದು ಯುವಕರ ಪ್ರತಿಭೆ ಬೆಳೆಸುವ ಸ್ಥಳ. ಮಕ್ಕಳಿಗೆ ಕ್ರೀಡೆಯತ್ತ ಆಸಕ್ತಿ ಮೂಡಿಸುವ ವೇದಿಕೆ ಹಾಗೂ ಸಾರ್ವಜನಿಕರಿಗೆ ಆರೋಗ್ಯಕರ ವಾತಾವರಣ ಒದಗಿಸುವ ಪ್ರದೇಶ. ಇಂತಹ ಜಾಗದಲ್ಲಿ ಶಾಶ್ವತ ನಿಮಾರ್ಣ ಕೈಗೊಳ್ಳುವ ಮುನ್ನ ಭವಿಷ್ಯದ ಪರಿಣಾಮಗಳ ಬಗ್ಗೆ ಪರಿಶೀಲಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ. ಮೈದಾನದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಸೀಮಿತ ಸ್ಥಳಾವಕಾಶವಿದ್ದು, ಅದರ ಒಂದು ಭಾಗವನ್ನು ಓವರ್​ಹೆಡ್​ ಟ್ಯಾಂಕ್​ ನಿಮಾರ್ಣಕ್ಕೆ ಬಳಸಿಕೊಂಡರೆ ಮುಂದಿನ ದಿನಗಳಲ್ಲಿ ತಾಲೂಕುಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸುವುದಕ್ಕೂ ಸಮಸ್ಯೆಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂಬುದು ಸಾರ್ವಜನಿಕರ ಆರೋಪ.

ಆನೇಕಲ್​ನಲ್ಲಿ ಚಿಕ್ಕಕೆರೆ ಮುಚ್ಚಿ ಕೋಟ್ಯಂತರ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲಾಗಿದೆ. ಆದರೆ, ಮಳೆಗಾಲದಲ್ಲಿ ಕ್ರೀಡಾಂಗಣದ ಆವರಣದಲ್ಲೇ ನೀರು ನಿಲ್ಲುತ್ತದೆ. ನಿರೀಕ್ಷಿತ ರೀತಿಯಲ್ಲಿ ವಿವಿಧ ಕ್ರೀಡೆಗಳಿಗೆ ಬಳಕೆಯಾಗದ ಪರಿಸ್ಥಿತಿ ನಿಮಾರ್ಣವಾಗಿದೆ ಎಂಬ ಆರೋಪ ಸ್ಥಳಿಯರದು. ಕೆರೆ ಮುಚ್ಚಿ ಕ್ರೀಡಾಂಗಣ ನಿರ್ಮಿಸಿದರೂ ಅದು ಪ್ರಯೋಜನಕ್ಕೆ ಬಾರದಂತಾಗಿದೆ. ಇದೀಗ ಸಾರ್ವಜನಿಕರು ಕ್ರೀಡೆ ಹಾಗೂ ವಾಯುವಿಹಾರಕ್ಕಾಗಿ ಬಳಸುತ್ತಿರುವ ುಟ್​ಬಾಲ್​ ಮೈದಾನದಲ್ಲೂ ಶಾಶ್ವತ ನಿಮಾರ್ಣ ಕಾಮಗಾರಿ ಕೈಗೊಂಡರೆ, ಮುಂದಿನ ದಿನಗಳಲ್ಲಿ ಈ ಮೈದಾನದ ಪರಿಸ್ಥಿತಿಯೂ ಚಿಕ್ಕಕೆರೆ ಕ್ರೀಡಾಂಗಣದಂತಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.

ಕ್ರೀಡಾಂಗಣದ ಜಾಗ ಬಲಿಕೊಡಬೇಡಿ :

ಕುಡಿಯುವ ನೀರಿನ ವ್ಯವಸ್ಥೆ ಸುಧಾರಿಸುವ ಉದ್ದೇಶದಿಂದ ಓವರ್​ಹೆಡ್​ ಟ್ಯಾಂಕ್​ ನಿರ್ಮಿಸುವುದಕ್ಕೆ ಸ್ಥಳಿಯರ ವಿರೋಧವಿಲ್ಲ. ಆದರೆ, ಅದಕ್ಕಾಗಿ ಕ್ರೀಡಾಂಗಣದ ಜಾಗ ಬಳಸಿಕೊಳ್ಳಬಾರದು ಎಂಬುದು ಸ್ಥಳಿಯರ ನಿಲುವು. ಪಟ್ಟಣದಲ್ಲಿ ಲಭ್ಯವಿರುವ ಸರ್ಕಾರಿ ಜಾಗ ಗುರುತಿಸಿ, ಹೊಸ ಟ್ಯಾಂಕ್​ ನಿರ್ಮಿಸಿದರೆ ನೀರಿನ ಯೋಜನೆಯೂ ಮುಂದುವರಿಯುತ್ತದೆ ಹಾಗೂ ಕ್ರೀಡಾಂಗಣವೂ ಉಳಿಯುತ್ತದೆ. ಹೀಗಾಗಿ ಪರ್ಯಾಯ ಜಾಗ ಗುರುತಿಸುವಂತೆ ಸ್ಥಳಿಯರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಕ್ರೀಡಾಂಗಣದಲ್ಲಿ ವಕೀಲರು ಹಾಗೂ ಜನಪ್ರತಿನಿಧಿಗಳು ಸೇರಿ ಪ್ರತಿಭಟನೆ ನಡೆಸಲು ಮುಂದಾದ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಆನೇಕಲ್​ ೇತ್ರ ಶಿಣಾಧಿಕಾರಿ ಗುರುಮೂರ್ತಿ ಪ್ರತಿಭಟನಾಕಾರರು, ವಕೀಲರು ಹಾಗೂ ಸ್ಥಳಿಯರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಬಿಇಒ ಗುರುಮೂರ್ತಿ ಅವರು, ಪುರಸಭೆಗೆ ಯಾವ ರೀತಿ ಕ್ರೀಡಾಂಗಣವನ್ನು ಸುಪರ್ದಿಗೆ ತೆಗೆದುಕೊಂಡಿದ್ದಾರೆ ಎಂಬಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಕ್ರೀಡಾಂಗಣವನ್ನು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಪುರಸಭಾ ಅಧಿಕಾರಿಗಳ ಜತೆ ಮಾತನಾಡುವೆ ಎಂದರು. ರಾಷ್ಟ್ರೀಯ ಯುವ ಪ್ರಶಸ್ತಿ ಪುರಸತಡಾ.ವೈ.ಚಿನ್ನಪ್ಪ ಚಿಕ್ಕಹಾಗಡೆ, ವಕೀಲ ಪುರುಷೋತ್ತಮ್​, ಏರ್​ಟೆಲ್​ ಸುರೇಶ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net