ಮಹಿಳಾ ನೌಕರರ ಮೇಲೆ ಹಲ್ಲೆಗೆ ಆಕ್ರೋಶ

ಸೇಡಂ ರೈಲ್ವೆ ನಿಲ್ದಾಣದ ಆವರಣದಲ್ಲಿರುವ ರೈಲ್ವೆ ಇಂಜಿನಿಯರಿಂಗ್​ ಕಚೇರಿ ಮುಂಭಾಗದಲ್ಲಿ ಎಸ್​ಸಿಆರ್​ಎಂ ಯೂನಿಯನ್​ ನೇತೃತ್ವದಲ್ಲಿ ನೌಕರರು ಪ್ರತಿಭಟನೆ ನಡೆಸಿ ಹಿರಿಯ ಶಾಖಾಧಿಕಾರಿ ಉಪೇಂದ್ರ ಪಟೇಲ್​ ಅವರಿಗೆ ಮನವಿಪತ್ರ ಸಲ್ಲಿಸಿದರು. ಶಾಮ ಚವ್ಹಾಣ್​, ವೆಂಕಟಪ್ಪ, ಮನೋಜಕುಮಾರ ಜಾಧವ್​, ಆಜೋಯಕುಮಾರ ಇತರರಿದ್ದರು.
ಸೇಡಂ ರೈಲ್ವೆ ನಿಲ್ದಾಣದ ಆವರಣದಲ್ಲಿರುವ ರೈಲ್ವೆ ಇಂಜಿನಿಯರಿಂಗ್​ ಕಚೇರಿ ಮುಂಭಾಗದಲ್ಲಿ ಎಸ್​ಸಿಆರ್​ಎಂ ಯೂನಿಯನ್​ ನೇತೃತ್ವದಲ್ಲಿ ನೌಕರರು ಪ್ರತಿಭಟನೆ ನಡೆಸಿ ಹಿರಿಯ ಶಾಖಾಧಿಕಾರಿ ಉಪೇಂದ್ರ ಪಟೇಲ್​ ಅವರಿಗೆ ಮನವಿಪತ್ರ ಸಲ್ಲಿಸಿದರು. ಶಾಮ ಚವ್ಹಾಣ್​, ವೆಂಕಟಪ್ಪ, ಮನೋಜಕುಮಾರ ಜಾಧವ್​, ಆಜೋಯಕುಮಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸೇಡಂನಲ್ಲಿ ಎಸ್​ಸಿಆರ್​ಎಂ ನೇತೃತ್ವದಲ್ಲಿ ರೈಲ್ವೆ ನೌಕರರಿಂದ ಪ್ರತಿಭಟನೆ
ಸೇಡಂ : ನಗರದ ರೈಲ್ವೆ ನಿಲ್ದಾಣದ ಇಂಜಿನಿಯರಿಂಗ್​ ವಿಭಾಗದಲ್ಲಿ ಪಾಯಿಂಟ್​ ವುಮೆನ್​ ಆಗಿ ಕರ್ತವ್ಯ ನಿರ್ವಹಿಸುವ ಪಶ್ಚಿಮ ಬಂಗಾಳ ಮೂಲದ ಪ್ರಿಯಾಂಕಾ ಎನ್ನುವ ಮಹಿಳಾ ನೌಕರರ ಮೇಲೆ ಅಪರಿತರು ಹಲ್ಲೆ ನಡೆಸಿದ್ದು ಖಂಡನೀಯ, ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಎಸ್​ಸಿಆರ್​ಎಂ ಯೂನಿಯನ್​ ಚೇರ್ಮನ್​ ಶಾಮ ಚವ್ಹಾಣ್​ ಒತ್ತಾಯಿಸಿದರು.
ರೈಲ್ವೆ ನಿಲ್ದಾಣದ ಆವರಣದಲ್ಲಿರುವ ಇಂಜಿನಿಯರಿಂಗ್​ ವಿಭಾಗದ ಕಚೇರಿ ಮುಂಭಾಗದಲ್ಲಿ ಗುರುವಾರ ನೌಕರರೊಂದಿಗೆ ಪ್ರತಿಭಟನೆ ನಡೆಸಿ, ಬುಧುವಾರ ಮಧ್ಯಾಹ್ನದ ಸಮಯದಲ್ಲಿ ನಿಲ್ದಾಣದಿಂದ ದೂರದಲ್ಲಿರುವ ರೈಲ್ವೆ ಹಳಿಯಲ್ಲಿ ಕೆಲಸದಲ್ಲಿದ್ದ ಮಹಿಳಾ ನೌಕರರ ಮೇಲೆ ಅಪರಿಚಿತ ವ್ಯಕ್ತಿ ಏಕಾಏಕಿ ಹಲ್ಲೆಗೆ ಮುಂದಾಗಿ, ಕಲ್ಲು ಸೇರಿ ಕೈಗೆ ಸಿಕ್ಕ ವಸ್ತುಗಳಿಂದ ಮನಸೋ ಇಚ್ಛೆ ಥಳಿಸಿದ್ದಾನೆ. ಅಲ್ಲದೆ ಆಕೆಯ ಬಳಿಯ ಮೊಬೈಲ್​ ಸೇರಿ ಬೆಲೆ ಬಾಳುವ ವಸ್ತುಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಇದೀಗ ಮಹಿಳೆ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆ ಕರೆದುಕೊಂಡು ಹೋಗಲಾಗಿದೆ ಎಂದರು.
ಮಹಿಳಾ ಸಿಬ್ಬಂದಿಯನ್ನು ಏಕಾಂಗಿಯಾಗಿ ದೂರದ ಸ್ಥಳಕ್ಕೆ ಕಳುಹಿಸಿದ್ದು ದೊಡ್ಡ ತಪ್ಪಾಗಿದೆ. ಹೀಗಾಗಿ ನಿಯೋಜನೆ ಮಾಡಿದ ಮೇಲಾಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಬೇಕು. ಜತೆಗೆ ಕರ್ತವ್ಯ ನಿರತ ನೌಕರರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಯೂನಿಯನ್​ನಿಂದ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹಿರಿಯ ಶಾಖಾಧಿಕಾರಿ ಉಪೇಂದ್ರ ಪಟೇಲ್​ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಯೂನಿಯನ್​ ಸಹ ಕಾರ್ಯದರ್ಶಿ ವೆಂಕಟಪ್ಪ, ಸದಸ್ಯ ಮನೋಜಕುಮಾರ ಜಾಧವ್​, ಪ್ರಮುಖರಾದ ಅಜೋಯಕುಮಾರ, ರಿಷಿ ಯಾದವ್​, ಭಾನುಪ್ರಕಾಶ, ಪ್ರಭಾಕರ, ಸಾನುಕಾಲಿಯಾ, ಮಿಥಿಲೇಶ, ಮಿಲನ್​, ಸೋಮನಾಥ, ಸುನೀಲ್​, ಪ್ರವಾಸ, ಪ್ರೇಮ ರಾಠೋಡ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net