ಐತಿಹಾಸಿಕ ಐಟಿಐ ಕಾರ್ಖಾನೆ ಉಳಿಸಲು ನಮ್ಮ ಹೋರಾಟ: ಕಾಂಗ್ರೇಸ್ ಮುಖಂಡ ಡಿ.ಕೆ.ಮೋಹನ್ ಬಾಬು

 ಬೆಂಗಳೂರು ಪೂರ್ವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಿ.ಕೆ.ಮೋಹನ್ ಬಾಬು ನೇತೃತ್ವದಲ್ಲಿ ನಡೆದ ಪೂರ್ವಭಾವಿಯಲ್ಲಿ  ಬಂಡೆ ರಾಜು, ಡಿ.ಕೆ.ದೇವೇಂದ್ರ, ಅಗರ ಪ್ರಕಾಶ್, ವೆಂಕಟೇಶ್, ಮೇಡಹಳ್ಳಿ ರಾಖಿ, ಅರುಳಪ್ಪ, ಕೋದಂಡರಾಮ, ಜಯರಾಮ್, ಆನಂದ ಪ್ರಸಾದ್, ಬಿಜಯ್ ಜಾನ್ ಮತ್ತಿತರರು ಭಾಗಿ.
ಬೆಂಗಳೂರು ಪೂರ್ವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಿ.ಕೆ.ಮೋಹನ್ ಬಾಬು ನೇತೃತ್ವದಲ್ಲಿ ನಡೆದ ಪೂರ್ವಭಾವಿಯಲ್ಲಿ ಬಂಡೆ ರಾಜು, ಡಿ.ಕೆ.ದೇವೇಂದ್ರ, ಅಗರ ಪ್ರಕಾಶ್, ವೆಂಕಟೇಶ್, ಮೇಡಹಳ್ಳಿ ರಾಖಿ, ಅರುಳಪ್ಪ, ಕೋದಂಡರಾಮ, ಜಯರಾಮ್, ಆನಂದ ಪ್ರಸಾದ್, ಬಿಜಯ್ ಜಾನ್ ಮತ್ತಿತರರು ಭಾಗಿ.
Published on
ಬೆಂಗಳೂರು: ಐತಿಹಾಸಿಕ ಹಿನ್ನೆಲೆಯುಳ್ಳ ಸರ್ಕಾರಿ ಸ್ವಾಮ್ಯದ ಐಟಿಐ ಕಾರ್ಖಾನೆಯ ಆಸ್ತಿಯ ಉಳಿವಿಗಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬೆಂಗಳೂರು ಪೂರ್ವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಿ.ಕೆ.ಮೋಹನ್ ಬಾಬು ತಿಳಿಸಿದ್ದಾರೆ.
ಕೆ.ಆರ್.ಪುರ ಸಮೀಪದ ದೇವಸಂದ್ರ ದಲ್ಲಿ ನಡೆದ ಪೂರ್ವಭಾವಿ ಸಭೆ ಹಾಗೂ  ಬಿಜೆಪಿ ತೊರೆದು  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ  ಮಾತನಾಡಿದರು.
ರಾಷ್ಟ್ರದ ಇತಿಹಾಸದಲ್ಲೇ ವಿಶೇಷ ಸ್ಥಾನಮಾನ ಹೊಂದಿರುವ ಕೆ.ಆರ್.ಪುರದ  ಐತಿಹಾಸಿಕ  ಐಟಿಐ ಕಾರ್ಖಾನೆ ನಷ್ಟದ ಸುಳಿಗೆ ಸಿಲುಕಿದೆ ಎಂಬ ನೆಪವೊಡ್ಡಿ ಕೇಂದ್ರ ಸರ್ಕಾರ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಐಟಿಐ ಕಾರ್ಖಾನೆಯ 91 ಎಕರೆ ಆಸ್ತಿಯನ್ನು  ನಗದೀಕರಣಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ನಷ್ಟದ ಸುಳಿಯಲ್ಲಿ ಸಿಲುಕಿದ ಐಟಿಐ ಸಂಸ್ಥೆ ಬಲಪಡಿಸಲು ಹಾಗೂ  ಈ ಭಾಗದಲ್ಲಿ ಶಾಶ್ವತವಾಗಿ ಉಳಿಯಬೇಕು ಎಂಬ ದೂರದೃಷ್ಟಿಯಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನಾಲ್ಕೂವರೆ ಸಾವಿರ ಕೋಟಿ ಹಣಕಾಸಿನ ನೆರವು ನೀಡಿತ್ತು. ನಂತರ ಕೇಂದ್ರದಲ್ಲಿ ಅಧಿಕಾರ ಬಂದ ಬಿಜೆಪಿ ಸರ್ಕಾರ ಸುಮಾರು ಹತ್ತು ವರ್ಷಗಳಿಂದ ಉದ್ದೇಶಪೂರ್ವಕವಾಗಿ ಕಾರ್ಖಾನೆಯನ್ನು ನಷ್ಟದಲ್ಲಿ ಸಿಲುಕುವಂತೆ ಮಾಡಿದೆ ಎಂದು ಆರೋಪಿಸಿದರು. 
ಸಂಸ್ಥೆ  3700 ಕೋಟಿ ಸಾಲದಲ್ಲಿದೆ   ಈ ಸಾಲದ ಮೊತ್ತ ತೀರಿಸಲು ಕೇಂದ್ರ ಸರ್ಕಾರಕ್ಕೆ ದೊಡ್ಡದಲ್ಲ, ಸಂಸ್ಥೆ ಉಳಿಸುವ ಇಚ್ಛಾಶಕ್ತಿ ಕೇಂದ್ರ ಸರ್ಕಾರಕ್ಕಿಲ್ಲ, ಈ ಭಾಗದ ಜನರು ಸಂಸ್ಥೆಯೊಂದಿಗೆ ಅವಿನಾಭಾವ ಸಂಬಂಧವಿದೆ, ಐಟಿಐ ಕಾರ್ಖಾನೆಯಲ್ಲಿ ಎ.ಕೃಷ್ಣಪ್ಪ, ಮೈಕಲ್ ಫರ್ನಾಂಡೀಸ್ ,ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರ ತಂದೆ, ನಮ್ಮ ತಂದೆ ಸೇರಿದಂತೆ ಅನೇಕ ಜನರು ಐಟಿಐ ಸಂಸ್ಥೆ ನೌಕರರಾಗಿ ಕೆಲಸಕ್ಕೆ ಸೇರಿ ರಾಷ್ಟ್ರ ಸೇವೆ ಮಾಡಿದ್ದಾರೆ,ಸಾವಿರಾರು ಜನರು ಸಂಸ್ಥೆಯ ಸೌಲಭ್ಯದಿಂದ ಬೆಳದು ದೊಡ್ಡವರಾಗಿದ್ದಾರೆ,ಇಂತಹ ಸಂಸ್ಥೆಯು ಕೆಆರ್ ಪುರ ಭಾಗದಲ್ಲೇ  ಉಳಿಯಬೇಕು ಎಂಬುದು  ಈ ಭಾಗದ ಜನರ ಮಹದಾಸೆಯಾಗಿದೆ.ಆದರೆ.ಕೇಂದ್ರ ಸರ್ಕಾರ ದುರುದ್ದೇಶದಿಂದ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಸಿದರು. 
ಐಟಿಐ ಸಂಸ್ಥೆ ಉಳಿವಿಗಾಗಿ ಹೋರಾಟದ ಅಗತ್ಯವಿದೆ, ಇದಕ್ಕಾಗಿ ಕಾರ್ಮಿಕರು ಕೈಜೋಡಿಸಬೇಕು, ನಮ್ಮ ಪಕ್ಷದ ಹಿರಿಯ  ನಾಯಕರು ಅನುಮತಿ ಪಡೆದು ಹೋರಾಟದ ರೂಪುರೇಷೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದ ಅವರು,ಕಾಂಗ್ರೆಸ್ ಪಕ್ಷದ ಸಿದ್ದಾಂತ ಮೆಚ್ಚಿ ಅನ್ಯಪಕ್ಷದ ಕಾರ್ಯಕರ್ತರು ಪಕ್ಷಕ್ಕೆ ಬರುತ್ತಿದ್ದಾರೆ,  ಕೌದೇನಹಳ್ಳಿ ನಾರಾಯಸ್ವಾಮಿ ಹಾಗೂ ಸಂಗಡಿಗರು ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಸಂತೋಷದ ವಿಚಾರ, ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು,ಪಕ್ಷದ ಬಲವರ್ಧನೆ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net