ನಮ್ಮ ಅಭಿವೃದ್ಧಿ ಕೆಲಸಗಳೇ ಉತ್ತರ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗಡ್ಡೆಸೂಗೂರಿನಲ್ಲಿ ಮಂಗಳವಾರ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಶಂಕುಸ್ಥಾಪನೆ ನೆರವೇರಿಸಿದರು. ಡಾ.ಅಮರಣ್ಣಗೌಡ ಗಡ್ಡೆಸೂಗೂರ, ಮಂಜುನಾಥ ಸಜ್ಜನ್​, ಶಶೀಧರ, ಶರಣಪ್ಪಗೌಡ ಕೌಳೂರ, ಮರೆಪ್ಪ ಬಿಳ್ಹಾರ, ನರಸಪ್ಪ ನಾಯಕ, ಶರಣಪ್ಪ ಗಿರಣಿ, ಬಸವರಾಜಪ್ಪ ಸಾಹುಕಾರ, ಶರಣಗೌಡ ಬಲಕಲ್​ ಇತರರಿದ್ದರು.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗಡ್ಡೆಸೂಗೂರಿನಲ್ಲಿ ಮಂಗಳವಾರ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಶಂಕುಸ್ಥಾಪನೆ ನೆರವೇರಿಸಿದರು. ಡಾ.ಅಮರಣ್ಣಗೌಡ ಗಡ್ಡೆಸೂಗೂರ, ಮಂಜುನಾಥ ಸಜ್ಜನ್​, ಶಶೀಧರ, ಶರಣಪ್ಪಗೌಡ ಕೌಳೂರ, ಮರೆಪ್ಪ ಬಿಳ್ಹಾರ, ನರಸಪ್ಪ ನಾಯಕ, ಶರಣಪ್ಪ ಗಿರಣಿ, ಬಸವರಾಜಪ್ಪ ಸಾಹುಕಾರ, ಶರಣಗೌಡ ಬಲಕಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿರೋಧಿಗಳಿಗೆ ಶಾಸಕ ಚನ್ನಾರಡ್ಡಿ ಪಾಟೀಲ್​ ಹೇಳಿಕೆ
  • ಗಡ್ಡೆಸೂಗೂರನಲ್ಲಿ ಸಿಸಿ ರಸ್ತೆಗೆ ಶಂಕುಸ್ಥಾಪನೆ
ಯಾದಗಿರಿ: ನನ್ನನ್ನು ಟೀಕಿಸುವ ವಿರೋಧಿಗಳಿಗೆ ನಾನು ಮಾಡಿರುವ ಅಬಿವೃದ್ಧಿ ಕಾರ್ಯಗಳೇ ಉತ್ತರ ನೀಡುತ್ತವೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರು ಹೇಳಿದರು.
ವಡಗೇರಾ ತಾಲೂಕಿನ ಗಡ್ಡೆಸೂಗೂರ ಗ್ರಾಮದಲ್ಲಿ ನಿರ್ಮಿತಿ ಕೇಂದ್ರದಿಂದ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಸಿಸಿ ರಸ್ತೆ ಕಾಮಗಾರಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಶಾಸಕನಾಗಿ ಮೂರು ವರ್ಷಗಳಾಗಿವೆ. ಒಂದೇ ಒಂದು ದಿನವೂ ನಾನು ಸಮಯ ಹಾಳು ಮಾಡದೆ ಕ್ಷೇತ್ರದ ಅಭಿವೃದ್ಧಿಗಾಗಿ ಹಗಳಿರುಳು ಶ್ರಮಿಸುತ್ತಿದ್ದೇನೆ. ಇದಕ್ಕೇ ಕ್ಷೇತ್ರದಲ್ಲಿ ನಡೆದಿರುವ ಮತ್ತು ಮುಗಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಾಕ್ಷಿ ಎಂದು ತಮ್ಮ ರಾಜಕೀಯ ವಿರೋಧಿಗಳಿಗೆ ಶಾಸಕರು ಟಾಂಗ್​ ನೀಡಿದರು.
ವಡಗೇರಾ, ಶಹಾಪುರ ಮತ್ತು ಯಾದಗಿರಿ ಹೀಗೆ ಮೂರು ತಾಲೂಕುಗಳಲ್ಲಿ ಹರಿದು ಹಂಚಿಹೋಗಿರುವ ತಮ್ಮ ವಿಧಾನಸಭಾ ಮತಕ್ಷೇತ್ರದ ಗ್ರಾಮೀಣ ಪ್ರದೇಶ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗ್ರಾಮಗಳ ಜನರ ಬೇಡಿಕೆಯಂತೆ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಅಭಿವೃದ್ದಿಗೆ ಜನರು ಅಗತ್ಯ ಸಹಕಾರ ನೀಡಬೇಕು. ಅಧಿಕಾರಿಗಳು ಕೂಡ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಅಲ್ಲದೆ ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಬೇಕು. ಸರ್ಕಾರದಿಂದ ವಿವಿಧ ಯೋಜನೆಗಳಡಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುವ ಕಾರ್ಯದಲ್ಲಿ ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದರು.
ಕಾಂಗ್ರೆಸ್​ ಪದ ಹಿರಿಯ ಮುಖಂಡ ಡಾ.ಅಮರಣ್ಣಗೌಡ ಗಡ್ಡೆಸೂಗೂರ ಮಾತನಾಡಿದರು.ನಿರ್ಮಿತಿ ಕೇಂದ್ರ ಅಭಿಯಂತರ ಮಂಜುನಾಥ ಸಜ್ಜನ್​, ವಡಗೇರಾ ತಾಪಂ ಇಒ ಶಶೀಧರ, ಕಾಂಗ್ರೆಸ್​ ಪಕ್ಷದ ಮುಖಂಡರಾದ ಶರಣಪ್ಪಗೌಡ ಕೌಳೂರ, ಮರೆಪ್ಪ ಬಿಳ್ಹಾರ, ನರಸಪ್ಪ ನಾಯಕ, ಶರಣಪ್ಪ ಗಿರಣಿ, ಬಸವರಾಜಪ್ಪ ಸಾಹುಕಾರ, ಶರಣಗೌಡ ಬಲಕಲ್​, ವೆಂಕಟರಡ್ಡಿ ಹತ್ತಿಕುಣಿ, ಅಯ್ಯಣ್ಣ ಬೀರನಾಳ, ಪಿಡಿಒ ಶಿವರಾಜ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net