ಇಂತಹ ಹಲವು ಸಾಮಾಜಿಕ ಸಮಸ್ಯೆ ಮತ್ತು ಅವುಗಳ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಮಕ್ಕಳು ದೇಶದ ಆಶಾಕಿರಣ. ಅವರಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಉತ್ತಮ ಪರಿಸರ, ಆರೋಗ್ಯ, ರಕ್ಷಣೆ ನೀಡಿದಲ್ಲಿ ಅವರ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಅದರಿಂದ ದೇಶದಲ್ಲಿ ಪ್ರಗತಿಯನ್ನು ಸಾಽಸಬಹುದು ಎಂದರು.