ಈ ಪಾದರಕ್ಷೆಗಳನ್ನು ಮಕ್ಕಳಿಗೆ ವಿತರಿಸುವ ಹೊಣೆ ಜಿಲ್ಲಾ ಹಂತದಲ್ಲಿ ಜಿಲ್ಲಾ ಉಪನಿರ್ದೇಶಕರು (ಆಡಳಿತ), ತಾಲೂಕು ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಹಂತದಲ್ಲಿ ಶಾಲಾ ಮುಖ್ಯೋಪಾಧ್ಯಾಯರ ನೇತೃತ್ವದ ಸಮಿತಿಗೆ ಒಂದು ವೇಳೆ ವಿತರಣೆಯ ಸಂದರ್ಭದಲ್ಲಿ ಅಳತೆಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ, ವಿದ್ಯಾರ್ಥಿಗಳಿಗೆ ಸೂಕ್ತವಾದ ಅಳತೆಯನ್ನು ಪಡೆಯಲು ಮತ್ತು ಬದಲಾವಣೆ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅಳತೆಯಲ್ಲಿ ವ್ಯತ್ಯಾಸ ಅಗತ್ಯ ಇರುವ ಶೂವನ್ನು ಮಕ್ಕಳಿಗೆ ವಿತರಿಸದೇ ವಾಪಸ್ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಲುಪಿಸಬೇಕು ಮತ್ತು ಅಗತ್ಯವಾದ ಶೂ ನಂಬರ್‌ನ ಮಾಹಿತಿಯನ್ನು ನೀಡಬೇಕು ಎಂದು ಶಾಲಾ ಮುಖ್ಯೋಪಾಧ್ಯಯರಿಗೆ ಸೂಚಿಸಲಾಗಿದೆ.