ಯರಗಟ್ಟಿ ಉಪವಿಭಾಗ ರಚನೆಗೆ ಆದೇಶ

ಶಾಸಕ ವಿಶ್ವಾಸ ವೈದ್ಯ
ಶಾಸಕ ವಿಶ್ವಾಸ ವೈದ್ಯ
Published on
ಸವದತ್ತಿ: ಹುಬ್ಬಳ್ಳಿ ವಿದ್ಯುತ್​ ಸರಬರಾಜು ಕಂಪನಿ ಸವದತ್ತಿ ಉಪವಿಭಾಗದ ವ್ಯಾಪ್ತಿಯಲ್ಲಿದ್ದ ಯರಗಟ್ಟಿ ಲೆಕ್ಕ ಶಾಖೆಯನ್ನು ಉನ್ನತಿಕರಿಸಿ ಹೊಸದಾಗಿ ಯರಗಟ್ಟಿ ಉಪವಿಭಾಗ ರಚಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಸವದತ್ತಿಗೆ ಪ್ರತ್ಯೇಕ ವಿಭಾಗ ಕಚೇರಿ ಸ್ಥಾಪನೆಗೆ ಒತ್ತಾಯ ಮತ್ತಷ್ಟು ಬಲಗೊಂಡಿದೆ. ಹುವಿಸಕಂನಿಯ 124ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಈ ಕುರಿತು ಪ್ರಸ್ತಾವನೆ ಮಂಡನೆಯಾಗಿ ಅನುಮೋದನೆ ದೊರೆತಿದ್ದು, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಹಾಲಿ ಮಂಜೂರಾಗಿರುವ ಹುದ್ದೆಗಳ ಮರು ಹೊಂದಾಣಿಕೆ ಮೂಲಕ ಯರಗಟ್ಟಿ ಉಪವಿಭಾಗ ರಚಿಸಲಾಗಿದೆ. ಈ ಆದೇಶದಂತೆ ಹಾಲಿ ಯರಗಟ್ಟಿ ಲೆಕ್ಕ ಶಾಖೆಯನ್ನು ಉಪವಿಭಾಗ ಕಚೇರಿಯನ್ನಾಗಿ ಉನ್ನತಿಕರಿಸಲಾಗಿದ್ದು, ಯರಗಟ್ಟಿ ಲೆಕ್ಕ ರಹಿತ ಶಾಖೆಯಾಗಿ ಪರಿವರ್ತನೆಗೊಂಡಿದೆ. ಜತೆಗೆ ಕೋ.ಶಿವಾಪುರ ಹಾಗೂ ಸತ್ತಿಗೇರಿ ಲೆಕ್ಕ ರಹಿತ ಶಾಖೆಗಳನ್ನು ಹೊಸದಾಗಿ ಸೃಜಿಸಲಾಗಿದೆ. ಸವದತ್ತಿ ಹಾಗೂ ಯರಗಟ್ಟಿ ತಾಲೂಕುಗಳನ್ನು ಒಳಗೊಂಡಂತೆ ಸವದತ್ತಿಯಲ್ಲಿ ಹೊಸ ವಿಭಾಗ ಕಚೇರಿ ಸ್ಥಾಪಿಸಬೇಕೆಂಬ ಬೇಡಿಕೆ ಮುಂದುವರಿದಿದೆ. ಈ ಕುರಿತು ಶಾಸಕ ವಿಶ್ವಾಸ ವೈದ್ಯ ನಿರಂತರವಾಗಿ ಸರ್ಕಾರ ಹಾಗೂ ಹುವಿಸಕಂನಿ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಯರಗಟ್ಟಿ ಉಪವಿಭಾಗ ರಚನೆಯಿಂದ ಗ್ರಾಮೀಣ ಭಾಗದ ಜನರಿಗೆ ತ್ವರಿತ ವಿದ್ಯುತ್​ ಸೇವೆ ದೊರೆಯಲಿದ್ದು, ಮುಂದಿನ ದಿನಗಳಲ್ಲಿ ಸವದತ್ತಿಗೆ ಪ್ರತ್ಯೇಕ ವಿಭಾಗ ಕಚೇರಿ ಮಂಜೂರಾಗುವ ನಿರೀೆ ವ್ಯಕ್ತವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net