ರಜೆ ಆದೇಶ ನಕಲಿ! FAKE

FAKE ORDER
FAKE ORDER
Published on
ಬೆಂಗಳೂರು: ವೃಕ್ಷಮಾತೆ ನಾಡೋಜ ಸಾಲುಮರದ ತಿಮ್ಮಕ್ಕ ನಿಧನದ ಹಿನ್ನೆಲೆಯಲ್ಲಿ ಶನಿವಾರ ಸರ್ಕಾರಿ ರಜೆ ನೀಡಲಾಗಿದೆ ಎಂದು ಪತ್ರ ಸಿದ್ಧಪಡಿಸಿದ್ದ ಕಿಡಿಗೇಡಿಗಳು, ಜಾಲತಾಣದಲ್ಲಿ ಹರಿಬಿಟ್ಟು ರಾಜ್ಯದ ಉದ್ದಗಲಕ್ಕೂ ಗೊಂದಲ ಸೃಷ್ಟಿಸಿದ್ದಾರೆ.
ಆ ನಕಲಿ ಆದೇಶದಲ್ಅಲಿ ಶಾಲಾ ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ ಎಂದು ಉಲ್ಲೇಖವಿದೆ. ಇದರಿಂದ ಗೊಂದಲ ಉಂಟಾಗಿತ್ತು. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರಂತರ ದೂರವಾಣಿ ಕರೆಗಳು ಬಂದಿದ್ದು, ರಜೆ ಬಗ್ಗೆ ಸ್ಪಷ್ಟನೆ ಬಯಸಿದ್ದರು. ಅಂತಿಮವಾಗಿ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದು ಮುಖ್ಯಮಂತ್ರಿಯವರ ಕಚೇರಿ ಸ್ಪಷ್ಟಪಡಿಸಿತು. 
ಶನಿವಾರ ಎಂದಿನಂತೆ ಶಾಲಾ, ಕಾಲೇಜು ಮತ್ತು ಸರ್ಕಾರಿ ಕಚೇರಿಗಳು ಕೆಲಸ ಕಾರ್ಯ ನಿರ್ವಹಿಸಲಿವೆ ಎಂದು ಸಿಎಂ ಕಚೇರಿ ತಿಳಿಸಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net