

ಹೊಸೂರು :
ಸಮೀಪದ ಪ್ಯಾರೆಂಡಿಪಳ್ಳಿ ಬಳಿ ಎಸ್ಟಿಆರ್ಆರ್ (ಸೆಟಲೈಟ್ ರಿಂಗ್ ರೋಡ್) ರಸ್ತೆ ನಿರ್ಮಾಣ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿ ತಮಿಳುನಾಡು ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ಬೆಂಗಳೂರು ನಗರದ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಎರಡು ದಶಕಗಳ ಹಿಂದೆ ಆರಂಭಗೊಂಡಿರುವ ಸೆಟಲೈಟ್ ರಿಂಗ್ ರೋಡ್ ಯೋಜನೆಯು ಹೊಸೂರು ಸುತ್ತಮುತ್ತಲೂ 43 ಕಿ.ಮೀ. ವ್ಯಾಪಿಸುತ್ತಿದೆ. ಈ ಯೋಜನೆಯಿಂದ ಬೆಂಗಳೂರು ನಗರಕ್ಕೆ ಪ್ರವೇಶಿಸುವ ವಾಹನಗಳು ಹೊರವಲಯದ ಮೂಲಕ ಸಂಚರಿಸಲಿದ್ದು, ನಗರದಲ್ಲಿನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂಬುದು ಸರ್ಕಾರದ ಉದ್ದೇಶ. ಆದರೆ, ತಮಿಳುನಾಡಿನಲ್ಲಿ ಯೋಜನೆಗಾಗಿ ರೈತರಿಂದ ಭೂಮಿ ಪಡೆಯಲು ನೀಡಲಾಗುತ್ತಿರುವ ಪರಿಹಾರ ಮೊತ್ತ ತೀರಾ ಕಡಿಮೆಯಾಗಿದೆ. ಎಕರೆಗೆ ಎರಡ್ಮೂರು ಲ ರೂ. ಮಾತ್ರ ಪರಿಹಾರ ನೀಡಲಾಗುತ್ತಿದೆ ಎಂದು ಆರೋಪಿಸಿದ ರೈತರು, ಜಮೀನುಗಳಿಗೆ ಸೂಕ್ತ ಪರಿಹಾರ ನೀಡಿ, ಹಿತಾಸಕ್ತಿಯನ್ನು ರಸಬೇಕು ಎಂದು ಆಗ್ರಹಿಸಿದರು.
ಸಂಸದ ತಂಬಿದೊರೈ ಅವರ ನೇತೃತ್ವದಲ್ಲಿ ರೈತರ ಬೇಡಿಕೆಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತರಲಾಗಿತ್ತು. ರೈತರ ಅನುಕೂಲಕ್ಕಾಗಿ ಸುಮಾರು 43 ಕಿ.ಮೀ. ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಸರ್ವೀಸ್ ರಸ್ತೆ ಕಾಮಗಾರಿ ಸಹ ಅರ್ಧದಲ್ಲೆ ನಿಂತಿದೆ ಎಂದು ರೈತರು ಆರೋಪಿಸಿದರು.
ಎಸ್ಟಿಆರ್ಆರ್ ಕಾಮಗಾರಿ ವೇಗವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಇದರಿಂದ ರೈತರು ತಮ್ಮ ಜಮೀನಿಗೆ ತೆರಳಲು ಆಗುತ್ತಿಲ್ಲ. ಜಮೀನಿನಲ್ಲಿನ ತರಕಾರಿ, ಇತರ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ರೈತರು ಮಲ್ಲಸಂದ್ರದಿಂದ ಪ್ಯಾರೆಂಡಿಪಳ್ಳಿವರೆಗೆ ದ್ವಿಚಕ್ರ ವಾಹನಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಸ್ಥಳದಲ್ಲಿ ೂಷಣೆಗಳನ್ನು ಕೂಗಿದರು. ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಮುಂದೆ ಸಾಗದಂತೆ ಮನವಿ ಮಾಡಿದ ಸಂದರ್ಭದಲ್ಲಿ ರೈತರು ಮತ್ತು ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಪೊಲೀಸರ ಅನುಮತಿಯೊಂದಿಗೆ ರೈತ ಸಂದ ಮುಖಂಡರಾದ ಮುನಿವೆಂಕಟಪ್ಪ, ಅರುಣ್, ರವೀಂದ್ರನ್, ಬಾಬು, ಹರೀಶ್, ಸರ್ವೇಶ್ ರೆಡ್ಡಿ ಸೇರಿ ಕೆಲ ರೈತರು ಉಪ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.