ಮುದಗಲ್: ಗಂಡು-ಹೆಣ್ಣು ಎಂದು ತಾರತಮ್ಯ ಮಾಡದೆ ಸಮಾನತೆಯ ಪ್ರೋತ್ಸಾಹವಿರಬೇಕು ಎಂದು ಸಿಡಿಪಿಒ ಅಂಗನವಾಡಿ ಮೇಲ್ವಿಚಾರಕಿ ಹೇಮಾ ಹೇಳಿದರು.
ಸಮೀಪದ ಹಡಗಲಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಾಲೂಕಾಡಳಿತ ಮತ್ತು ತಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಿಂದ ಮಂಗಳವಾರ ಹಮ್ಮಿಕೊಂಡಿದ್ದ ಬೇಟಿ ಬಚಾವೋ ಬೇಟಿ ಪಢಾವೋ ಕಾರ್ಯಕ್ರಮದಲ್ಲಿ ಮಾತನಾಡಿದರು.
ವರದಕ್ಷಿಣೆ, ಬಾಲ್ಯವಿವಾಹ ವಿರೋಧಿಸಿ ನಿಗದಿತ ವಯಸ್ಸಿನ ನಂತರ ಸರಳ ಮದುವೆಗೆ ಪಾಲಕರು ಪ್ರೋತ್ಸಾಹಿಸಬೇಕಿದೆ ಎಂದರು. ಗ್ರಾಪಂ ಸದಸ್ಯರಾದ ದುರುಗಪ್ಪ ಕಟ್ಟಿಮನಿ, ಮಲ್ಲಮ್ಮ ಶರಣಪ್ಪ ತುಗ್ಗಲಿ, ಆರೋಗ್ಯ ಇಲಾಖೆ ಆಧಿಕಾರಿ ಲೋಕೇಶ, ಕಿರಿಯ ಸಹಾಯಕಿ ಶಾಂತಾ ಇತರರಿದ್ದರು. .