ಸರ್ಜಾಪುರ : ಸರ್ಜಾಪುರ ಸಮೀಪದ ದೊಮ್ಮಸಂದ್ರದಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಶಂಕೆ ಹಿನ್ನೆಲೆಯಲ್ಲಿ ವರ್ತೂರು ಪೊಲೀಸರು ಶೋಧ ಕಾರ್ಯ ನಡೆಸಿದರು.
45 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ದೊಮ್ಮಸಂದ್ರದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಕಾರ್ಮಿಕರು ಹೆಚ್ಚಾಗಿ ವಾಸಿಸುತ್ತಿದ್ದು, ಕಂಪನಿ ಮತ್ತು ಕೂಲಿ ಕಾರ್ಮಿಕರ ಶೆಡ್ಗಳಲ್ಲಿರುವ ಕಾರ್ಮಿಕರ ವಿವರಗಳನ್ನು ಇನ್ಸ್ಪೆಕ್ಟರ್ ಯೋಗಾನಂದ ಸೋನಾಲ್ ನೇತೃತ್ವದಲ್ಲಿ ಪರಿಶೀಲಿಸಲಾಯಿತು.
ಕೆಲವು ಕಾರ್ಖಾನೆಗಳಲ್ಲಿ ಗಾಂಜಾ ಸೇರಿ ಅನಧಿಕೃತ ಮಾದಕ ವಸ್ತುಗಳು, ಬಣ್ಣದ ರಾಸಾಯನಿಕ ಹಾಗೂ ಸ್ಫೋಟಕಗಳಿಗೆ ಸಂಬಂಧಿಸಿದ ಕೆಮಿಕಲ್ ತಯಾರಿಕೆ ನಡೆಯುತ್ತಿದೆಯೇ ಎಂಬ ಅನುಮಾನದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಯಿತು.