ವರ್ಷದ ಆಧ್ಯಾತ್ಮಿಕ ಪಯಣಕ್ಕೆ ತೆರೆ / ANEKAL

-ಬೊಮ್ಮಂಡಹಳ್ಳಿಯಲ್ಲಿರುವ ಶಕ್ತೀಪಿಠದ ಶ್ರೀವಿದ್ಯಾಸಾಧನೆಯ ಕ್ಷೇತ್ರದಲ್ಲಿ ವರ್ಷದ ಆಧ್ಯಾತ್ಮಿಕ ಪಯಣ ಸಂಪನ್ನಗೊಂಡಿತು.
-ಬೊಮ್ಮಂಡಹಳ್ಳಿಯಲ್ಲಿರುವ ಶಕ್ತೀಪಿಠದ ಶ್ರೀವಿದ್ಯಾಸಾಧನೆಯ ಕ್ಷೇತ್ರದಲ್ಲಿ ವರ್ಷದ ಆಧ್ಯಾತ್ಮಿಕ ಪಯಣ ಸಂಪನ್ನಗೊಂಡಿತು.
Published on

ಆನೇಕಲ್​ :

ಬೊಮ್ಮಂಡಹಳ್ಳಿ ಶಕ್ತೀಪಿಠದ ಶ್ರೀವಿದ್ಯಾ ಸಾಧನೆಯ ಕ್ಷೇತ್ರದಲ್ಲಿ ವರ್ಷದ ಆಧ್ಯಾತ್ಮಿಕ ಪಯಣಕ್ಕೆ ತೆರೆ ಬಿದ್ದಿದೆ. ವರ್ಷದಿಂದ ನಿರಂತರವಾಗಿ ನಡೆದ 8760 ಗಂಟೆಗಳ ಶ್ರೀವಿದ್ಯಾ ಮಹಾಯಾಗವು ಆ.15ರ ಬೆಳಗ್ಗೆ 5:30ಕ್ಕೆ ಸಂಪನ್ನಗೊಂಡಿತು.

ಮಹಾಯಾಗವು 2025ರ ಆ.15ರಂದು ಆರಂಭಗೊಂಡು ನಿರಂತರವಾಗಿ ಸಾಗಿದ್ದು, ಯಾಗ, ಮಂತ್ರಸಾಧನೆ, ಉಪಾಸನೆ, ಧ್ಯಾನ, ಪ್ರಾರ್ಥನೆ ಹಾಗೂ ಸಂಪೂರ್ಣ ಸಮರ್ಪಣೆಯ ಮೂಲಕ ಮುಂದುವರಿಯಿತು.

ಕಾರ್ಯಕ್ರಮ ಆಯೋಜಕಿ ಮಾತಾ ಡಾ.ಶ್ರೀ ಪ್ರಿಯಾ ಮಾತನಾಡಿ, ಇದು ಕೇವಲ ಧಾರ್ಮಿಕ ಆಚರಣೆಯಲ್ಲ. ಸಂಕಲ್ಪ, ಶಿಸ್ತು, ಭಕ್ತಿ, ಸಮರ್ಪಣೆ ಮತ್ತು ಆಂತರಿಕ ಅನುಭವದ ಮೂಲಕ ಸಾಗಿದ ಆಧ್ಯಾತ್ಮಿಕ ಪಯಣ. ವರ್ಷದ ನಿರಂತರ ಸಾಧನೆಯ ಅನುಭವದ ಹಿನ್ನೆಲೆ "ಶ್ರೀವಿದ್ಯಾ ಅನುಭವ ಆಗಮ' ಎಂಬ ಪರಿಕಲ್ಪನೆ ಮುಂದಿಡಲಾಗಿದೆ ಎಂದರು.

8760 ಗಂಟೆಗಳ ಮಹಾಯಾಗದ ಪೂರ್ಣತೆ ಅಂತ್ಯವಲ್ಲ, ಬದಲಾಗಿ ಹೊಸ ಆಧ್ಯಾತ್ಮಿಕ ಅಧ್ಯಾಯದ ಆರಂಭ ಎಂಬ ದೃಷ್ಟಿಕೋನ ಹೊಂದಲಾಗಿದೆ. ಒಂದು ವರ್ಷದ ಸಾಧನೆಯಿಂದ ದೊರೆತ ಅನುಭವ, ಆಚರಣೆ ಮತ್ತು ಅಧ್ಯಯನದ ಅಂಶಗಳನ್ನು ದಾಖಲಿಸಿ, ಮುಂದಿನ ಪೀಳಿಗೆಗಳಿಗೆ ಸಂರಕ್ಷಿಸುವ ಹಾಗೂ ಜವಾಬ್ದಾರಿಯಿಂದ ಹಂಚಿಕೊಳ್ಳುವ ಉದ್ದೇಶವಿದೆ. ಶ್ರೀವಿದ್ಯಾ ಸಾಧನೆ ಆಧ್ಯಾತ್ಮಿಕ ಅನುಸಂಧಾನ, ಆಂತರಿಕ ಪರಿವರ್ತನೆ, ಯೋಗ, ಚಿಕಿತ್ಸೆ ಮತ್ತು ಸಂಶೋಧನೆಗಳನ್ನು ಪರಸ್ಪರ ಸಂಪರ್ಕಿಸುವ, ಸಂಪೂರ್ಣ ವೇದಿಕೆ ರೂಪಿಸುವುದು ಮುಂದಿನ ದೃಷ್ಟಿಕೋನವಾಗಿದೆ ಎಂದರು.

ನೋಬಲ್​ ಕಾಲೇಜು ಪ್ರಾಂಶುಪಾಲ ಪ್ರಮೋದ್​, ಡಿ.ಕೆ.ಶ್ರೀನಾಥ್​, ಡಾ.ಅರುಣ್​ ಕುಮಾರ್​, ್ರಾನ್ಸ್​ ಮೂಲದ ಆಧ್ಯಾತ್ಮಿಕ ಚಿಂತಕಿ ಕೊರೀನ್​, ಬಾಲಾಜಿ ಗೋಪಾಲನ್​, ಕುಶಾಲ್​ ಗೌಡ, ಪ್ರೊ.ಎಂ.ಶಾಜಿ, ಡಾ.ಐಶ್ವರ್ಯ, ಡೈರೆಕ್ಟರ್​ ಶಶಿಕಾಂತ್​, ವಾಸ್ತು ತಜ್ಞ ವಿಶಾಲ್​, ಪವನ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net