ಶೀಘ್ರ ಭತ್ತ ಖರೀದಿ ಕೇಂದ್ರ ತೆರೆಯಿರಿ

 ಶ್ರೀರಂಗಪಟ್ಟಣದ ತಾಲೂಕು ಕಚೇರಿಗೆ ಮಂಗಳವಾರ ಭೇಟಿ ನೀಡಿದ ಕರ್ನಾಟಕ ರಾಜ್ಯ ರೈತ ಭತ್ತ ಬೆಳೆಗಾರರ ಸಂಘ ಸದಸ್ಯರು ಶೀಘ್ರ ಭತ್ತ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ತಹಸೀಲ್ದಾರ್ ಚೇತನಾ ಯಾದವ್ ಅವರಿಗೆ ಮನವಿ ಸಲ್ಲಿಸಿದರು.
ಶ್ರೀರಂಗಪಟ್ಟಣದ ತಾಲೂಕು ಕಚೇರಿಗೆ ಮಂಗಳವಾರ ಭೇಟಿ ನೀಡಿದ ಕರ್ನಾಟಕ ರಾಜ್ಯ ರೈತ ಭತ್ತ ಬೆಳೆಗಾರರ ಸಂಘ ಸದಸ್ಯರು ಶೀಘ್ರ ಭತ್ತ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ತಹಸೀಲ್ದಾರ್ ಚೇತನಾ ಯಾದವ್ ಅವರಿಗೆ ಮನವಿ ಸಲ್ಲಿಸಿದರು.
Published on
ಶ್ರೀರಂಗಪಟ್ಟಣ: ತಾಲೂಕಿನಲ್ಲಿ ಶೀಘ್ರ ಭತ್ತ ಖರೀದಿ ಕೇಂದ್ರ ತೆರೆಯಬೇಕು ಹಾಗೂ ಭತ್ತಕ್ಕೆ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ತಾಲೂಕು ಆಡಳಿದ ಮೂಲಕ ರಾಜ್ಯ ಸರ್ಕಾರವನ್ನು ಕರ್ನಾಟಕ ರಾಜ್ಯ ರೈತ ಭತ್ತ ಬೆಳೆಗಾರರ ಸಂಘ ಒತ್ತಾಯಿಸಿತು.
ಪಟ್ಟಣದ ತಾಲೂಕು ಕಚೇರಿಗೆ ಮಂಗಳವಾರ ಆಗಮಿಸಿದ ಸಂಘದ ಸದಸ್ಯರು ತಹಸೀಲ್ದಾರ್ ಚೇತನಾ ಯಾದವ್ ಅವರಿಗೆ ಮನವಿ ಸಲ್ಲಿಸಿ ಭತ್ತದ ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸಿದರು.
ಬಳಿಕ ಸಂಘದ ಮುಖ್ಯಸ್ಥ ಡಿ.ಎಂ.ರವಿ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ ಭಾಗಶಃ ಭತ್ತ ಕಟಾವು ಹಂತಕ್ಕೆ ಬಂದಿದ್ದು, ಎಲ್ಲೆಡೆ ಕುಯ್ಲು ಆರಂಭವಾಗಿದೆ. ವಾತಾವರಣದಲ್ಲಿ ಶೀತಗಾಳಿ ಮತ್ತು ಮಳೆಯ ವಾತಾವರಣ ಇರುವ ಕಾರಣ ರೈತರು ಕಟಾವು ಮಾಡಿದ ಭತ್ತವನ್ನು ಶೇಖರಿಸಿ, ಸಂರಕ್ಷಿಸಲು ಸರಿಯಾದ ವ್ಯವಸ್ಥೆ ಇಲ್ಲ. ಜತೆಗೆ ಸರ್ಕಾರ ಖರೀದಿ ಕೇಂದ್ರ ತೆರೆಯುವುದನ್ನು ವರವಾಗಿಸಿಕೊಳ್ಳುವ ಮಧ್ಯವರ್ತಿಗಳು ಬೆಳೆ ಬೆಳೆದ ರೈತರಿಂದ ಅತ್ಯಂತ ಕಡಿಮೆ ಬೆಲೆಗೆ ಖರಿದೀಸಿ ಅವರು ದುಪ್ಪಟ್ಟು ದರಕ್ಕೆ ಮಾರಿಕೊಂಡು ಅನೂಕೂಲತೆ ಪಡೆಯುತ್ತಾರೆ. ಹೀಗಾಗಿ ಆಯಾ ಅಗತ್ಯಾನುಸಾರ ಖರೀದಿ ಕೇಂದ್ರ ತೆರೆದಲ್ಲಿ ಇದು ಶ್ರಮಿಕ ರೈತರಿಗೆ ನೆರವಾಗುತ್ತದೆ. ಜತೆಗೆ ದಳ್ಳಾಳಿಗಳ ಹಾವಳಿಗೂ ಕಡಿವಾಣ ಹಾಕಿದಂತಾಗುತ್ತದೆ ಎಂದರು.
ಸಾಧ್ಯವಾದರೆ ಹಿಂದೆ ರೈತರಿಗೆ ಅನೂಕೂಲವಾಗುತ್ತಿದ್ದ ರೈಸ್‌ಮಿಲ್‌ಗಳಲ್ಲಿ ಕನಿಷ್ಠ ಬೆಲೆಗೆ ಕೊಳ್ಳುವ ವ್ಯವಸ್ಥೆಗೆ ಮರು ಚಾಲನೆ ನೀಡಿದರೆ ಸಹಕಾರಿಯಾಗಬಹುದು. ಜತೆಗೆ ರಾಜ್ಯ ಸರ್ಕಾರ ಭತ್ತದ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಿ ಬೆಳೆಗಾರರ ಹಿತಕಾಯಬೇಕು ಎಂದು ಒತ್ತಾಯಿಸಿದರು. ತಹಸೀಲ್ದಾರ್ ಚೇತನಾ ಯಾದವ್ ಮನವಿ ಸ್ವೀಕರಿಸಿ ಮಾತನಾಡಿ, ತಕ್ಷಣ ಈ ಬಗ್ಗೆ ಕ್ರಮವಹಿಸುವ ಭರವಸೆ ನೀಡಿದರು.
ರೈತ ಮುಖಂಡರಾದ ಅರಕೆರೆ ಕೃಷ್ಣೇಗೌಡ, ಚಿಕ್ಕಪಾಳ್ಯ ಪುರುಷೋತ್ತಮ್, ದೊಡ್ಡಪಾಳ್ಯ ಮರೀಗೌಡ, ಡಿ.ಕೆ.ನಾಗರಾಜು, ಕರವೇ ಮುಖಂಡ ಟೆಂಟ್ ಸುರೇಶ್, ಚಿಂದಗಿರಿಕೊಪ್ಪಲು ಸಿ.ಸ್ವಾಮಿಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net