ಎಎಸ್ಐ ಶ್ರೀನಿವಾಸ್ ಮಾತನಾಡಿ, ದೂರು ದಾಖಲಿಸುವ ಬಗ್ಗೆ, ಎಫ್.ಐ.ಆರ್.ಪೋಕ್ಸೋ ಪ್ರಕರಣ, ಪೊಲೀಸ್ ಠಾಣೆಯ ಮಹತ್ವ, ಅದರ ಕಾರ್ಯವೈಖರಿ ಕುರಿತು ಮಾಹಿತಿ ನೀಡಿದರು. ನವ್ಯದಿಶ ಸಂಸ್ಥೆಯ ಅಶ್ವಿನಿ ಮಾತನಡಿ, ಇಂದು ಹದಿಹರೆಯದವರ ರಕ್ಷಣೆಯಲ್ಲಿ ಪೊಲೀಸ್ ಇಲಾಖೆ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಪೋಲಿಸ್ ಇಲಾಖೆ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವುದು ಅಗತ್ಯವಿದೆ. ಹಾಗೆ ಹದಿಹರೆಯದವರು ತಮ್ಮ ರಕ್ಷಣೆಗೆ ತೊಂದರೆ ಆದಾಗ ನಿರ್ಭೀತಿಯಿಂದ ಪೊಲೀಸ್ ಇಲಾಖೆಯ ರಕ್ಷಣೆ ಪಡೆಯಬಹುದು ಎಂದು ತಿಳಿಸಿದರು.ಭೇಟಿಯಲ್ಲಿ ಯುವಜನರು ಪೊಲೀಸ್ ಇಲಾಖೆಗೆ ಸಂಬಂಧಪಟ್ಟಂತೆ ಪರೀೆ ಹಾಗೂ ಕೆಲಸಗಳ ಕುರಿತು ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.