ಪ್ರತಿ ಹೋಬಳಿಯಲ್ಲೂ ಮೇವಿನ ಬ್ಯಾಂಕ್​ ತೆರೆಯಿರಿ

Open a fodder bank in every hobli.
Open a fodder bank in every hobli.
Published on
ಶಿಡ್ಲಟ್ಟ: ತಾಲೂಕಿನಲ್ಲಿ ಈ ವರ್ಷ ಮುಂಗಾರು ಅವಧಿಯಲ್ಲಿ ವಾಡಿಕೆ ಮಳೆ ಬೀಳದೆ ಇದುವರೆಗೂ ಬಿತ್ತನೆಕಾರ್ಯ ಆಗಿಲ್ಲ. ಹಾಗಾಗಿ ಸರ್ಕಾರವು ಕೂಡಲೆ ಬರ ೂಷಣೆ ಮಾಡಿ ಬರ ಪರಿಸ್ಥಿತಿ ಎದುರಿಸಲು ಮುಂದಾಗಬೇಕು ಎಂದು ಜೀವಿಕ ಸಂಟನೆಯ ತಾಲೂಕು ಸಂಚಾಲಕ ಪಿ.ಶ್ರೀನಿವಾಸ್​ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಶೇ.70&80 ಮಂದಿ ಕೃಷಿಯನ್ನು ನಂಬಿದ್ದು ಮಳೆಯ ಅಭಾವದಿಂದ ಈ ವರ್ಷ ಬಿತ್ತನೆ ನಡೆದೇ ಇಲ್ಲ. ಇದರಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ರಾಸುಗಳಿಗೆ ಮೇವಿನ ಕೊರತೆ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಾಗಾಗಿ ಬರ ೂಷಣೆ ಮಾಡಿ ಪಹಣಿ ಹೊಂದಿರುವ ಪ್ರತಿ ರೈತನಿಗೂ 50 ಸಾವಿರ ಪರಿಹಾರ ನೀಡಬೇಕು. ಪ್ರತಿ ಗ್ರಾಮದಲ್ಲೂ ತೊಟ್ಟಿ ನಿರ್ಮಿಸಿ ಅದರಲ್ಲಿ ನೀರು ತುಂಬಿಸಿ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು. ರಾಮ್​ಜಿ ನರೇಗಾದಲ್ಲಿ ಕೂಲಿ ದಿನಗಳನ್ನು ಮತ್ತು ಹಣವನ್ನು ಕೂಡ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ನ್ಯಾಯ ಬೆಲೆ ಅಂಗಡಿಗಳ ಮೂಲಕ ಅಕ್ಕಿ,ರಾಗಿ ಮಾತ್ರವಲ್ಲದೆ ದಿನ ನಿತ್ಯ ಬಳಸುವ ದಿನಸಿ ಪದಾರ್ಥಗಳನ್ನು ರಿಯಾಯಿತಿ ದರದಲ್ಲಿ ರೈತರು, ಜನರಿಗೆ ವಿತರಿಸಬೇಕು. ಪ್ರತಿ ಹೋಬಳಿಯಲ್ಲೂ ಮೇವಿನ ಬ್ಯಾಂಕ್​ಗಳನ್ನು ತೆರೆಯಬೇಕು.
ಬೆಳೆ ವಿಮೆ ಬಗ್ಗೆ ರೈತರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಲು ಎಲ್ಲ ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಎಸ್​.ಗೊಲ್ಲಹಳ್ಳಿಯ ನರಸಿಂಹಪ್ಪ, ಲುಂಬಿನಿ ಎಜುಕೇಷನ್​ ಆ್ಯಂಡ್​ ಡೆವಲಪ್​ಮೆಂಟ್​ ಟ್ರಸ್ಟ್​ನ ಅಧ್ಯಕ್ಷ ಮೂರ್ತಿ ಮೈತ್ರಿ, ಜೀವಿಕ ಸಂಟನೆಯ ಮುನಿಯಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net