ಪರಿಶ್ರಮದಿಂದ ಮಾತ್ರ ಶೈಣಿಕ ಪ್ರಗತಿ

ಹುಲಸೂರು ತಾಲೂಕಿನ ಬೇಲೂರಿನ ಶ್ರೀ ಸಿದ್ಧರಾಮೇಶ್ವರ ಜಾತ್ರೆ ನಿಮಿತ್ತ ಬುಧವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ  ನೀರಾವರಿ ಇಲಾಖೆ ನಿವೃತ್ತ ಎಂಡಿ ಮಲ್ಲಿಕಾರ್ಜುನ ಗುಂಗೆ ಮಾತನಾಡಿದರು. ಶ್ರೀ ಪ್ರಭುಕುಮಾರ ಸ್ವಾಮೀಜಿ, ಡಾ.ವಿಜಯಕುಮಾರ ಅಂತಪ್ಪ, ಡಾ.ಯುವರಾಜ ಬಿರಾದಾರ, ಡಾ.ಪ್ರತಾಪ ಬಿರಾದಾರ, ಪ್ರಕಾಶ ಮೆಂಡೋಳೆ ಇತರರಿದ್ದರು.
ಹುಲಸೂರು ತಾಲೂಕಿನ ಬೇಲೂರಿನ ಶ್ರೀ ಸಿದ್ಧರಾಮೇಶ್ವರ ಜಾತ್ರೆ ನಿಮಿತ್ತ ಬುಧವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ನೀರಾವರಿ ಇಲಾಖೆ ನಿವೃತ್ತ ಎಂಡಿ ಮಲ್ಲಿಕಾರ್ಜುನ ಗುಂಗೆ ಮಾತನಾಡಿದರು. ಶ್ರೀ ಪ್ರಭುಕುಮಾರ ಸ್ವಾಮೀಜಿ, ಡಾ.ವಿಜಯಕುಮಾರ ಅಂತಪ್ಪ, ಡಾ.ಯುವರಾಜ ಬಿರಾದಾರ, ಡಾ.ಪ್ರತಾಪ ಬಿರಾದಾರ, ಪ್ರಕಾಶ ಮೆಂಡೋಳೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಲ್ಲಿಕಾರ್ಜುನ ಗುಂಗೆ ಅಭಿಮತ
  • ಬೇಲೂರಿನಲ್ಲಿ ಧಾರ್ಮಿಕ ಕಾರ್ಯಕ್ರಮ
ಹುಲಸೂರು: ವಿದ್ಯಾರ್ಥಿಗಳು ರ್ನಿಲ್ಯ ಮಾಡದೆ ಸತತ ಪರಿಶ್ರಮ ಮಾಡಿದಾಗ ಮಾತ್ರ ನಮ್ಮ ಭಾಗ ಶೈಣಿಕ ಪ್ರಗತಿ ಹೊಂದಲು ಸಾಧ್ಯ ಎಂದು ನೀರಾವರಿ ಇಲಾಖೆ ನಿವೃತ ಎಂಡಿ ಮಲ್ಲಿಕಾರ್ಜುನ ಗುಂಗೆ ಹೇಳಿದರು.
ಬೇಲೂರು ಗ್ರಾಮದ ಶ್ರೀ ಸಿದ್ಧರಾಮೇಶ್ವರ ಜಾತ್ರೆ ನಿಮಿತ್ತ ಸಿದ್ಧರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪಾಲಕರು ಮಕ್ಕಳ ಶಿಣಕ್ಕೆ ಹೆಚ್ಚು ಒತ್ತು ಕೊಡಬೇಕು. ವಿದ್ಯಾರ್ಥಿಗಳು ಐಎಎಸ್​, ಐಪಿಎಸ್​ ಆಗುವ ಹಂಬಲ ಬೆಳೆಸಿಕೊಳ್ಳಬೇಕು ಎಂದರು.
ದೇಶದಲ್ಲಿಯೇ ಹಿಂದುಳಿದ ರಾಜ್ಯ ಬಿಹಾರದಲ್ಲಿ ಶಿಣಕ್ಕೆ ಹೆಚ್ಚು ಮಹತ್ವ ನೀಡಿ ಪ್ರತಿ ಗ್ರಾಮಗಳಲ್ಲಿ ಐಪಿಎಸ್​ ಅಧಿಕಾರಿಗಳು ಸಿಗುತ್ತಾರೆ. ವಿದ್ಯಾರ್ಥಿಗಳು ಬರೀ ಓದಿದರೆ ಸಾಲದು ಮಹತ್ವದ ಕನಸು ಹೊತ್ತು ಪರಿಶ್ರಮಪಟ್ಟರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.
ಬ್ರಿಮ್ಸ್​ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ವಿಜಯಕುಮಾರ ಅಂತಪ್ಪ ಮಾತನಾಡಿ, ಗ್ರಾಮದಲ್ಲಿ ಜಾತ್ರೆ ನಿಮಿತ್ತ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಮಾಡುತ್ತಿರುವುದು ಸಂತಸ ತಂದಿದೆ. ಪ್ರತಿಯೊಬ್ಬರೂ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದರು.
ದೇವಸ್ಥಾನ ಪಂಚ ಕಮಿಟಿ ಅಧ್ಯ ಪ್ರಕಾಶ ಮೆಂಡೊಳೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಶ್ರೀ ಪ್ರಭುಕುಮಾರ ಸ್ವಾಮೀಜಿ, ಡಾ.ಯುವರಾಜ ಬಿರಾದಾರ, ಡಾ.ಪ್ರತಾಪ ಬಿರಾದಾರ, ಡಾ.ಏಕನಾಥ, ಡಾ.ಶರಣ ಸುಲೇಪೇಟ್​, ಡಾ.ರತ್ನಾ ಮಾಲಿಪಾಟೀಲ, ಡಾ.ಸಚಿನ ಸುಲೇಪೇಟಕರ ಇದ್ದರು. ಶಿವರಾಜ ವೀರಣ್ಣ ನಿರೂಪಣೆ ಮಾಡಿದರು. ರಾಜಕುಮಾರ ಮಲ್ಲಯ್ಯ ವಂದಿಸಿದರು. ಬಸವಕಲ್ಯಾಣದ ಸಪ್ತಗಿರಿ ಆಸ್ಪತ್ರೆಯಿಂದ 250 ಜನರ ಉಚಿತ ಆರೋಗ್ಯ ತಪಾಸಣೆ ಮಾಡಿ ಅಗತ್ಯ ಔಷಧಗಳನ್ನು ಉಚಿತವಾಗಿ ವಿತರಿಸಲಾಯಿತು. ನಂತರ ರಕ್ತದಾನ ಶಿಬಿರ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net