ಪ್ರತಿ ಠಾಣೆಗೊಂದು ವಾಹನ ಅವಶ್ಯ / DODABALLAPUR

ದೊಡ್ಡಬಳ್ಳಾಪುರದ ಗ್ರಾಮಾಂತರ ಠಾಣಾ ಆವರಣದಲ್ಲಿ ಪೊಲೀಸ್​ ಇಲಾಖೆಗೆ ಶಾಸಕ ಧೀರಜ್​ ಮುನಿರಾಜು ವಾಹನವನ್ನು ಹಸ್ತಾಂತರ ಮಾಡಿದರು. ಡಿವೈಎಸ್ಪಿ ಪಾಂಡುರಂಗ, ಇನ್​ಸ್ಪೆಕ್ಟರ್​ ಎಂ.ಬಿ.ನವೀನ್​ ಕುಮಾರ್​, ಬಿಜೆಪಿ ತಾಲೂಕು ಅಧ್ಯಕ್ಷ ನಾಗೇಶ್​, ನಗರಸಭಾ ಸದಸ್ಯರಾದ ಪದ್ಮನಾಭ, ಬಂತಿ ವೆಂಕಟೇಶ್​, ಹಂಸಪ್ರಿಯಾ ಇದ್ದರು.

Published on
ದೊಡ್ಡಬಳ್ಳಾಪುರ: ನಗರಕ್ಕೆ ಸಂಚಾರಿ ಪೊಲೀಸ್​ ಠಾಣೆ ಮಂಜೂರಾಗಿದೆ. ಆದರೆ, ಇಲ್ಲಿಯವರೆಗೂ ಅನುದಾನ ಬಿಡುಗಡೆ ಮಾಡಿಲ್ಲ. ಠಾಣೆಯ ಜೀಪ್​ಗೂ ಶಾಸಕರ ಅನುದಾನ ಕೊಡಬೇಕಿರುವುದು ಸರ್ಕಾರದ ಆರ್ಥಿಕ ಸ್ಥಿತಿ ಹೇಗಿದೆ ಎಂಬುದನ್ನು ತೋರಿಸುತ್ತಿದೆ ಎಂದು ಶಾಸಕ ಧೀರಜ್​ ಮುನಿರಾಜು ಹೇಳಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಗ್ರಾಮಾಂತರ ಠಾಣೆಗೆ ವಾಹನ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಪೊಲೀಸ್​ ಇಲಾಖೆ ಸಿಬ್ಬಂದಿ ಪಾತ್ರ ಮುಖ್ಯವಾಗಿದೆ. ಅದಕ್ಕಾಗಿ ಸಾರ್ವಜನಿಕರ ಸೇವೆಗಾಗಿ ಪ್ರತಿ ಠಾಣೆಗೊಂದು ವಾಹನ ಅವಶ್ಯವಾಗಿದೆ ಎಂದು ಹಿಂದಿನ ಪೊಲೀಸ್​ ವರಿಷ್ಠಾಧಿಕಾರಿಗಳು ಮನವಿ ಮಾಡಿದ್ದರು. ಹೀಗಾಗಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಇಲಾಖೆಗೆ ವಾಹನ ನಿಡಲಾಗುತ್ತಿದೆ. ಪೊಲೀಸರಿಗೆ ನೈತಿಕ ಬೆಂಬಲ ನೀಡಬೇಕು, ನೆಮ್ಮದಿಯಿಂದ ನಾವು ನಿದ್ರಿಸಲು ಪೊಲೀಸರು ಕಾರಣ. ಅವರು ಪ್ರಾಮಾಣಿಕ ಸೇವೆ ನೀಡುತ್ತಿದ್ದಾರೆ. ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅವರಿಗೆ ಬೆಂಬಲ ನೀಡಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net