ಒಂದು ದೇಶ ಒಂದು ಚುನಾವಣೆ ಪದವಿ ವಿದ್ಯಾರ್ಥಿಗಳ ಮಧ್ಯೆ ಚರ್ಚೆಯಾಗುತ್ತಿರುವುದು ಸೂಕ್ತದಾಯಕವಾಗಿದೆ. ಏಕೆಂದರೆ, ಭವಿಷ್ಯದಲ್ಲಿ ದೇಶವನ್ನು ಕಟ್ಟುವ ತರುಣರು ಒಂದು ದೇಶ ಒಂದು ಚುನಾವಣೆ ಬಗ್ಗೆ ತಿಳಿದುಕೊಳ್ಳಲೇಬೇಕು. ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಮತದಾನದ ಮೂಲಕವೇ ಬದಲಾವಣೆ ತರಲಾಗುತ್ತಿದೆ. ಹೀಗಾಗಿ, ದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆಗಳಿಗೆ ಒಂದೇ ಸಮಯದಲ್ಲಿ ಚುನಾವಣೆ ನಡೆದರೆ, ಏಕಕಾಲಕ್ಕೆ ಬದಲಾವಣೆ ತರಬಹುದು ಎಂದು ಚಿತ್ರದುರ್ಗ-ದಾವಣಗೆರೆ ವಿಧಾನ ಪರಿಷತ್ ಸದಸ್ಯ ಕೆಎಸ್ ನವೀನ್ ಹೇಳಿದರು.