ಸೋಲನ್ನು ಸಮಾನವಾಗಿ ಸ್ವೀಕರಿಸಲು ಸಿದ್ಧರಿಸಬೇಕು dignity

ಸೋಲನ್ನು ಸಮಾನವಾಗಿ ಸ್ವೀಕರಿಸಲು ಸಿದ್ಧರಿಸಬೇಕು dignity
ಸೋಲನ್ನು ಸಮಾನವಾಗಿ ಸ್ವೀಕರಿಸಲು ಸಿದ್ಧರಿಸಬೇಕು dignity
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಮೃದ್ಧಿ ವಿ.ಮಂಜುನಾಥ್​ ಹೇಳಿಕೆ
ಮುಳಬಾಗಿಲು: ರಾಜಕೀಯ ಪ್ರವೇಶ ಮಾಡುವಾಗ ಗುರುಗಳೊಬ್ಬರು ರಾಜಕೀಯಕ್ಕೆ ಹೋದರೆ ಮಾನ, ಮರಿಯಾದೆ ಎರಡನ್ನೂ ಬಿಡಬೇಕೆಂದು ಹೇಳಿದ್ದರು. ಆದ್ದರಿಂದ ನಾನು ರಾಜಕೀಯ ಪ್ರವೇಶ ಮುನ್ನವೇ ಅವನ್ನು ಬಿಟ್ಟು ಬಂದಿದ್ದೇನೆ ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್​ ತಮ್ಮ ರಾಜಕೀಯ ವಿರೋಧಿಗಳಿಗೆ ಪರೋ ಸಂದೇಶ ರವಾನಿಸಿದರು.accept defeat with equal dignity
ನಗರದ ಕುರುಬರಪೇಟೆಯಲ್ಲಿ ಹಾಲುಮತ ಸಮುದಾಯದಿಂದ ಶನಿವಾರ ರಾತ್ರಿ ಏರ್ಪಡಿಸಿದ್ದ ಗೌರಿದೇವಿ ದೀಪೋತ್ಸವ ಮತ್ತು ಪೌರಾಣಿಕ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿ, ಮಾನ, ಮರಿಯಾದೆ ಎಂದರೆ ಯಾರೂ ಸಹ ಅನ್ಯತಾ ಭಾವಿಸಬಾರದು. ಹಿಂದೆ ಮಾತನಾಡುವುದು, ಪರೋವಾಗಿ ಕಾಲು ಎಳೆಯುವುದು, ಅಪಮಾನ, ಹೀಯಾಳಿಸುವಿಕೆ, ಸೋಲುನ್ನು ಸಮಾನವಾಗಿ ಸ್ವೀಕರಿಸುವುದಕ್ಕೆ ಮಾನ, ಮರ್ಯಾದೆ ಬಿಡಬೇಕು ಎಂದರ್ಥ ಎಂದು ಸ್ಪಷ್ಟಪಡಿಸಿದರು.
ಮುಳಬಾಗಿಲಿನ ಕನಕ ಸಮುದಾಯದ ಭವನಕ್ಕೆ ಸಚಿವ ಬೈರತಿ ಸುರೇಶ್​ಗೆ 2 ಕೋಟಿ ರೂ. ಅನುದಾನ ನೀಡುವಂತೆ ಭಿಕನಂತೆ ಅವರ ಕಚೇರಿಗೆ ಅಲೆದಾಡಿದ ಉದಾಹರಣೆಗಳಿವೆ. ಆದರೆ, ನನ್ನನ್ನೇ ಬಿಟ್ಟು ಸಮುದಾಯದ ಭವನ ಉದ್ಘಾಟನೆಯಾಯಿತು ಎಂದರು.
ಯುವ ಮುಖಂಡ ಸಂಗೊಳ್ಳಿ ವೆಂಕಟೇಶ್​ ಮಾತನಾಡಿ, ಹಾಲುಮತ ಜನಾಂಗದ ಜನರಿಗೆ ಗೌರಿ ಹಬ್ಬ ತುಂಬಾ ಪ್ರಾಮುಖ್ಯ, ಆದ್ದರಿಂದ ಈ ಹಬ್ಬಕ್ಕೆ ಪೌರಾಣಿಕ ನಾಟಕ ಏರ್ಪಡಿಸಲಾಗಿದೆ. ಸತ್ಯ ಹರಿಶ್ಚಂದ್ರ ನಾಟಕ ಮಾಡುತ್ತಿರುವುದು ಶ್ಲಾನೀಯ ಎಂದರು.
ಕನಕ ನೌಕರರ ಸಂದ ತಾಲೂಕು ಅಧ್ಯ ಎಸ್​.ಆರ್​.ವೆಂಕಟೇಶಪ್ಪ ಮಾತನಾಡಿ, ಶಾಸಕರಿಗೆ ನಮ್ಮ ಸಮುದಾಯದಿಂದ ಸಣ್ಣದಾದ ತಪ್ಪು ಮಾಡಲಾಗಿದೆ. ಇದಕ್ಕೆ ಸಮುದಾಯದ ಜನರಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ಆದ್ದರಿಂದ ಹಾಲುಮತ ಸಮುದಾಯದ ಬಡ ವರ್ಗದ ಜನರು ಶಾಸಕರ ಬಳಿ ಸಹಾಯಕ್ಕೆ ಬಂದರೆ ಯಾವುದನ್ನೂ ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಸಹಕಾರ ಮಾಡಬೇಕು. ಹಾಲುಮತ ಸಮುದಾಯದ ಜನರು ನಿಮ್ಮ ಹಿಂದೆ ಇರುತ್ತಾರೆ ಎಂದು ಹೇಳಿದರು.
ಕಾವೇರಿ ಸುರೇಶ್​, ನಗರಸಭೆ ಮಾಜಿ ಸದಸ್ಯ ಜಬೀವುಲ್ಲಾ, ಬಿಜೆಪಿ ಒಬಿಸಿ ಜಿಲ್ಲಾ ಮಾಜಿ ಅಧ್ಯ ಕೋಳಿ ನಾಗರಾಜ್​, ಹಾಲುಮತ ಮುಖಂಡರಾದ ಗೌಡರ ಶಿವಣ್ಣ, ಬಾಬು, ಹಾಲು ಡೇರಿ ಸುಬ್ರಮಣಿ, ಗಣೇಶ್​, ರಾಜು, ಮಂಜುನಾಥ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net