

ಕುದೂರು :
"ನನ್ನ ಅಂಗಳದಲ್ಲಿ ಒಮ್ಮೆ ಮಕ್ಕಳ ಕಲರವ ಮೊಳಗುತ್ತಿತ್ತು. ಚಿಣ್ಣರ ನಗು, ಶಿಕರ ಪಾಠ, ಪ್ರಾರ್ಥನೆಯ ಧ್ವನಿ, ಪರೀೆಯ ಆತಂಕ, ಗೆಲುವಿನ ಸಂಭ್ರಮ... ಇವೆಲ್ಲವೂ ನನ್ನ ದಿನನಿತ್ಯದ ಬದುಕಾಗಿತ್ತು. ಆದರೆ, ಇಂದು ನನ್ನ ಬಾಗಿಲಿಗೆ ಬೀಗ ಬಿದ್ದಿದೆ. ನನ್ನನ್ನು ನೆಚ್ಚಿಕೊಂಡು ಬಂದಿದ್ದ ಮಕ್ಕಳ ಹೆಜ್ಜೆಗುರುತುಗಳೇ ಕಾಣುತ್ತಿಲ್ಲ. ನೂರಾರು ವರ್ಷಗಳ ನನ್ನ ನೆನಪುಗಳೊಂದಿಗೆ ನಾನು ಒಂಟಿಯಾಗಿ ನಿಂತಿದ್ದೇನೆ'.
ಮಕ್ಕಳ ಕಲರವ ಕೇಳಲಿ
ಶತಮಾನದ ಇತಿಹಾಸ ಹೊಂದಿರುವ, ಸಾವಿರಾರು ವಿದ್ಯಾರ್ಥಿಗಳಿಗೆ ಅರ ದಾನ ಮಾಡಿದ ಇಂತಹ ಶಾಲೆಗೆ ಬೀಗಹಾಕುವುದೆಂದರೆ ಅದು ಬಾಗಿಲಿಗೆ ಬಿದ್ದ ಬೀಗವಲ್ಲ, ತಲೆಮಾರುಗಳ ನೆನಪುಗಳಿಗೆ ಬಿದ್ದ ಬೀಗ. ಹೊಸ ಕಟ್ಟಡದ ನೆಪವೊಡ್ಡಿ ಪಾಳು ಬೀಳದಂತೆ ಬಿಡದೆ, ಶಾಲೆಯನ್ನು ಪುನಶ್ಚೇತನಗೊಳಿಸಿ ಶಾಲೆ ಅಂಗಳದಲ್ಲಿ ಮತ್ತೊಮ್ಮೆ ಮಕ್ಕಳ ಕಲರವ ಕೇಳುವಂತೆ ಮಾಡುವ ಅಗತ್ಯವಿದೆ. ಮಕ್ಕಳ ಚಟುವಟಿಕೆಯ ಕೇಂದ್ರವಾಗಿಯಾದರೂ ಈ ಶಾಲೆಯನ್ನು ರೂಪಿಸುವ ಅಗತ್ಯವಿದೆ ಎಂಬುದು ಹಳೆಯ ವಿದ್ಯಾರ್ಥಿಗಳು, ಪಾಲಕರು, ನಿವೃತ್ತ ಶಿಕರು ಹಾಗೂ ಗ್ರಾಮಸ್ಥರ ಒಕ್ಕೊರಲಿನ ಆಶಯ.
"ಒಂದು ಕಾಲದಲ್ಲಿ ಶಾಲೆಯ ಅಂಗಳಕ್ಕೆ ಕಾಲಿಟ್ಟರೆ ಸಾಕು, ಮಕ್ಕಳ ಕಲರವ ಕಿವಿಗೆ ಬೀಳುತ್ತಿತ್ತು. ಕೊಠಡಿಗಳಲ್ಲಿ ಶಿಕರ ಪಾಠದ ಧ್ವನಿ ಮೊಳಗುತ್ತಿತ್ತು. ಕಪ್ಪು ಹಲಗೆ ಮೇಲೆ ಮೂಡುತ್ತಿದ್ದ ಅರಗಳು, ವಿದ್ಯಾರ್ಥಿಗಳ ವಿವಿಧ ಚಟುವಟಿಕೆಗಳು ಶಾಲೆಯ ಜೀವಂತಿಕೆಗೆ ಸಾಯಾಗಿದ್ದವು.
ಕುದೂರಿನ ಕೆಪಿಎಸ್ ಶಾಲೆಯ ಹಳೆಯ ಕಟ್ಟಡದಲ್ಲಿ 20ಕ್ಕೂ ಹೆಚ್ಚು ಕೊಠಡಿಗಳು ಪಾಳು ಬೀಳುತ್ತಿರುವ ವಿಷಯ ಗಮನಕ್ಕೆ ಬಂದಿದೆ. ತಣವೇ ೇತ್ರ ಶಿಣಾಧಿಕಾರಿ ಜತೆ ಚರ್ಚಿಸಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
— ಸ್ವಾಮಿ, ಡಿಡಿಪಿಐ, ಬೆಂಗಳೂರು ದಣ ಜಿಲ್ಲೆ
ನನ್ನ ಆವರಣದಲ್ಲಿ ಓಡಾಡಿದ ಮಕ್ಕಳು ಬೆಳೆದು ದೊಡ್ಡವರಾಗಿ ವಿವಿಧ ೇತ್ರಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಕೆಲವರು ತಮ್ಮ ಮಕ್ಕಳನ್ನೂ ನನ್ನ ಬಳಿಗೆ ಕರೆತಂದರು. ಒಂದೇ ಕುಟುಂಬದ ಎರಡು&ಮೂರು ತಲೆಮಾರುಗಳಿಗೆ ನಾನು ಅರ ಕಲಿಸಿದ್ದೇನೆ. ಅವರ ಬಾಲ್ಯದ ನೆನಪುಗಳಲ್ಲಿ ನಾನು ಇದ್ದೇನೆ. ಆದರೆ, ಇಂದು ನನ್ನ ಅಂಗಳದಲ್ಲಿ ಮಕ್ಕಳಿಲ್ಲ. ತರಗತಿಗಳಲ್ಲಿ ಪಾಠವಿಲ್ಲ. ಗಂಟೆಯ ಸದ್ದು ಇಲ್ಲ. ಬಾಗಿಲು ತೆರೆದು ಒಳಗೆ ಬರುವ ಶಿಕರ ಹೆಜ್ಜೆಯೂ ಇಲ್ಲ ಎಂಬ ನೋವು ಶಾಲೆಯ ಪ್ರತಿ ಗೋಡೆಯಲ್ಲೂ ಮೂಡಿದಂತಿದೆ.
ಶತಮಾನ ಪೂರೈಸಿದ ಈ ಶಿಣ ಸಂಸ್ಥೆಯ ಐತಿಹಾಸಿಕ ಕಟ್ಟಡವನ್ನು ಹಾಳಾಗಲು ಬಿಡಬಾರದು. ಶಿಣ ಇಲಾಖೆಯು ತಣವೇ ಗಮನಹರಿಸಿ ಕಟ್ಟಡವನ್ನು ರಸಿ, ಮತ್ತೆ ಮಕ್ಕಳ ಕಲರವ ಮೊಳಗುವಂತೆ ಕ್ರಮ ಕೈಗೊಳ್ಳಬೇಕು.
— ಪದ್ಮನಾಭ, ಸ್ಥಳಿಯ ನಾಗರಿಕ, ಕುದೂರು