

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ನಾಡೋಜಸಂತ ಭದ್ರಗಿರಿ ಅಚ್ಯುತದಾಸ ಹಾಗೂಕೀರ್ತನಾಚಾರ್ಯ ಲಕ್ಷ್ಮಣದಾಸವೇಲಣಕರ್ ಸ್ಮರಣಾರ್ಥ ಕಥಾಕೀರ್ತನವೈಭವ-2026ಕಾರ್ಯಕ್ರಮವನ್ನುಆ.29ಕ್ಕೆಹಮ್ಮಿಕೊಳ್ಳಲಾಗಿದೆ.
ಷಡ್ಜಕಲಾ ಕೇಂದ್ರ ಟ್ರಸ್ಟ್ ಹಾಗೂಭಾರತೀಯ ವಿದ್ಯಾಭವನದ ಸಹಯೋಗದಲ್ಲಿನಡೆಯಲಿರುವ ಕಾರ್ಯಕ್ರಮವು ಅಂದುಸಂಜೆ 5.15ಕ್ಕೆಭಾರತೀಯ ವಿದ್ಯಾಭವನದ ಕೆ.ಆರ್.ಜಿ.ಸಭಾಂಗಣದಲ್ಲಿನಡೆಯಲಿದೆ.
ಕಾರ್ಯಕ್ರಮದಲ್ಲಿವಿದ್ವಾನ್ ರಮಾನಂದ ಭಟ್ ಸಾಖಳಕರ್ಹರಿಕಥೆ ನಡೆಸಿಕೊಡಲಿದ್ದಾರೆ. ನಂತರ ನಡೆಯುವಸಭಾ ಕಾರ್ಯಕ್ರಮದಲ್ಲಿ ಶ್ರೀಜಿತಕಾಮಾನಂದಜೀಮಹಾರಾಜ್, ವಿದ್ವಾಂಸಡಾ.ಎಂ.ಸೂರ್ಯಪ್ರಸಾದ್ಭಾಗವಹಿಸಲಿದ್ದು,ಶ್ರೀಮದ್ಬಾಗವತಪ್ರವಚನ ಗ್ರಂಥ ಬಿಡುಗಡೆ ಮಾಡಲಿದ್ದಾರೆ.
ಇದೇವೇಳೆ ಪಂಡಿತ್ ಡಾ.ವಿನಾಯಕತೊರವಿ, ಕಲಾವಿದಎಚ್.ಎನ್.ಸುರೇಶ,ವಿದುಷಿ ನಾರಾಯಣಿದಾಮೋದರ್ ಅವರಿಗೆ ‘ಕೀರ್ತನಸೇವಾರತ್ನ’ ಪ್ರಶಸ್ತಿ ನೀಡಿಗೌರವಿಸಲಾಗುವುದು ಎಂದು ಟ್ರಸ್ಟಿಡಾ. ದತ್ತಾತ್ರೇಯಎಲ್. ವೇಲಣಕರತಿಳಿಸಿದ್ದಾರೆ.