ಕೈವಾರದಲ್ಲಿ ಓಂ ಶಕ್ತಿ ಗಂಜಿ ಪೂಜೆ

ಚಿಂತಾಮಣಿ ತಾಲೂಕಿನ ಕೈವಾರದಲ್ಲಿ ಓಂ ಶಕ್ತಿ ಅಮ್ಮನವರ ಗಂಜಿ ಪೂಜೆಯಲ್ಲಿ ಭಾಗವಹಿಸಿದ್ದ ಭಕ್ತರು.
ಚಿಂತಾಮಣಿ ತಾಲೂಕಿನ ಕೈವಾರದಲ್ಲಿ ಓಂ ಶಕ್ತಿ ಅಮ್ಮನವರ ಗಂಜಿ ಪೂಜೆಯಲ್ಲಿ ಭಾಗವಹಿಸಿದ್ದ ಭಕ್ತರು.
Published on
ಚಿಂತಾಮಣಿ: ತಾಲೂಕಿನ ಚಾರಿತ್ರಿಕ ಹಾಗೂ ಧಾರ್ಮಿಕ ಕ್ಷೇತ್ರ ಕೈವಾರದಲ್ಲಿ ಶ್ರೀ ಓಂ ಶಕ್ತಿ ಅಮ್ಮನವರ ಸಾನ್ನಿಧ್ಯದಲ್ಲಿ ಗಂಜಿ ಪೂಜಾ ಮಹೋತ್ಸವ ನೆರವೇರಿತು.
ಬೆಳಗ್ಗೆಯಿಂದಲೇ ದೇವಿಗೆ ಅಭಿಷೇಕ, ಆರಾಧನೆ ಹಾಗೂ ಪುಷ್ಪಾಲಂಕಾರ ಸೇವೆ ನಡೆಯಿತು.
ಮಡಿಕೆಗಳಲ್ಲಿ ಗಂಜಿ ತಯಾರಿಸಿ, ಬೇವಿನ ಎಲೆಗಳಿಂದ ಕಂಗೊಳಿಸುತ್ತಿದ್ದ ಮಡಿಕೆಯನ್ನು ತಲೆ ಮೇಲೆ ಹೊತ್ತು ಮಹಿಳೆಯರು ದೇವಾಲಯದ ಆವರಣದಲ್ಲಿ ಪ್ರದಕ್ಷಿಣೆ ಹಾಕಿದರು.ಕಳಶ ಹಾಗೂ ಗಂಜಿ ಮಡಿಕೆ ಹೊತ್ತು ಊರಿನ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯ, ತಮಟೆ ಹಾಗೂ ವಾದ್ಯವೃಂದದೊಂದಿಗೆ ಮೆರವಣಿಗೆ ನಡೆಯಿತು.
ಭಕ್ತರು ಭಜನೆ ಹಾಗೂ ಭಕ್ತೀಗಿತೆಗಳಿಗೆ ಹೆಜ್ಜೆ ಹಾಕಿದರು. ನೂರಾರು ಭಕ್ತರಿಗೆ ಗಂಜಿ ಪ್ರಸಾದ ವಿನಿಯೋಗ ಮಾಡಲಾಯಿತು.
ಓಂ ಶಕ್ತಿ ಟ್ರಸ್ಟ್​ನ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಲಕ್ಷ್ಮೀ, ಕಾರ್ಯದರ್ಶಿ ಮುನಿರತ್ನಮ್ಮ, ಖಜಾಂಚಿ ಅನಿಲ್​ ಕುಮಾರ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net