ಶ್ರಾವಣ ಮಾಸದ ಪ್ರಯುಕ್ತ ಶ್ರದ್ಧಾಭಕ್ತಿಯಿಂದ ಆಯೋಜಿಸುವ ಓಂ ಶಕ್ತಿ ಗಂಜಿ ಮಹೋತ್ಸವದಲ್ಲಿ ಭಾಗವಹಿಸಿ ದೇರವ ಕೃಪೆಗೆ ಪಾತ್ರರಾದರೆ ಭಕ್ತರಿಗೆ ಮಾನಸಿಕ ನೆಮ್ಮದಿ ಸಿಗಲಿದೆ ಎಂದು ಯುವ ಮುಖಂಡ ವಿನಯ್ ಕುಮಾರ್ ತಿಳಿಸಿದರು.
ಪಟ್ಟಣದ ಹಳೇ ಎಸ್ಬಿಎಂ ರಸ್ತೆಯಲ್ಲಿನ ಓಂ ಶಕ್ತಿ ದೇವಾಲಯದಲ್ಲಿ ಭಕ್ತ ಮಂಡಳಿಯಿಂದ ಆಯೋಜಿಸಿದ್ದ 20ನೇ ವರ್ಷದ ಶ್ರಾವಣ ಮಾಸದ ಗಂಜಿ ಮಹೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದರು.
ಕೆಂಪು ವಸ್ತ್ರ ಧರಿಸಿರುವ ನೂರಾರು ಮಹಿಳಾ ಮಾಲಧಾರೆಗಳು ಮನೆಗಳಲ್ಲಿ ತಯಾರಿಸಿದ ಗಂಜಿ ತುಂಬಿಸಿರುವ ಹೊಸ ಮಡಕೆಯನ್ನು ತಲೆಯ ಮೇಲೆ ಹೊತ್ತುಕೊಂಡು ದೇವಿಯ ನಾಮಸ್ಮರಣೆಗಳೊಂದಿಗೆ ಪ್ರಮುಖ ಬೀದಿಗಳಾದ ಎಸ್. ಬಿ.ಎಂ.ರಸ್ತೆ, ಡಿ.ವಿ.ಜಿ.ಮುಖ್ಯರಸ್ತೆ, ಗಂಗಮ್ಮ ಗುಡಿ ರಸ್ತೆ, ಬಂಗಾರು ಅಂಗಡಿ ರಸ್ತೆಯಲ್ಲಿ ಓಂ.ಶಕ್ತಿ ದೇವಿಯನ್ನು ಮೆರವಣಿಗೆ ನಡೆಸುವುದರ ಮೂಲಕ ಗಂಜಿಪೂಜೆಗೆ ಮೆರುಗು ತಂದು ಭಕ್ತಿ ಭಾವನೆಗಳನ್ನು ಸಾರಿದರು.
ವಿನಯ್ ಕುಮಾರ್ ಮಾತನಾಡಿ, ದೇವರನ್ನು ಪೂಜಿಸಿ ಸಿದ್ಧಪಡಿಸಿದ ಗಂಜಿಯನ್ನು ಸೇವಿಸುವುದರಿಂದ ದೈಹಿಕ ರೋಗಗಳು ವಾಸಿಯಾಗುತ್ತವೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ. ಮಹಿಳೆಯರು ಸಮೂಹ ಪ್ರಾರ್ಥನೆ ಮಾಡಿ ಮಳೆ&ಬೆಳೆ ಚೆನ್ನಾಗಿ ಆಗಲಿ ಹಾಗೂ ಕೌಟುಂಬಿಕ ಸೌಖ್ಯಕ್ಕಾಗಿ ಭಕ್ತರು ಸಾಮೂಹಿಕವಾಗಿ ಗಂಜಿ ಪೂಜೆ ನೆರವೇರಿಸುತ್ತಾರೆ. ಮಕ್ಕಳು ಜಾತಿ, ಮತ, ಭೇದವಿಲ್ಲದೆ ಎಲ್ಲರೂ ಒಂದೇ ಜಾಗದಲ್ಲಿ ಕುಳಿತು ಗಂಜಿ ಪ್ರಸಾದ ಸ್ವೀಕರಿಸುವುದು ಗಂಜಿ ಮಹೋತ್ಸವದ ವಿಶೇಷವಾಗಿದೆ ಎಂದರು.
ದೇಗುಲ ಅರ್ಚಕರಾದ ಅನಿಲ್ ಕುಮಾರ್ ಸ್ವಾಮಿ, ಕಾರ್ತಿಕ್ ಸ್ವಾಮಿ, ಜಯಮ್ಮ ಶ್ರೀನಿವಾಸ್ ನಾಯ್ಡು, ಗಾಯತ್ರಿ ಹರೀಶ್, ಲ್ಮ ವಿನಯ್, ಓಂ ಶಕ್ತಿ ದೇವಾಲಯ ಮಂಡಳಿ ಪದಾಧಿಕಾರಿಗಳಾದ ಪ್ರಮೀಳಾ, ರಾಜರಾಜೇಶ್ವರಿ, ಪ್ರೇಮಾ ನಾಯ್ಡು ಇದ್ದರು.