ಓಂ ನಮಃ ಶಿವಾಯ ಒಂದೇ ವೇದ ವಾಕ್ಯ

ಸಿರಿಗೇರಿ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಅಖಂಡ ಸಪ್ತ  ಭಜನೆ ಕಾರ್ಯಕ್ರಮ ಜರುಗಿತು.ದೇವಸ್ಥಾನ ಕಮಿಟಿ ಅಧ್ಯಕ್ಷ ಹೂಗಾರ್ ಬಸವರಾಜ, ಸಿ.ಎಂ. ಬಸವರಾಜ ಸ್ವಾಮಿ, ಕುಂಬಾರ ಶಿವಪ್ಪ, ಸಿ.ಎಂ. ಶಿವಾನಂದಯ್ಯ ಸ್ವಾಮಿ, ಬಳಿಗೇರ್ ವೀರೇಶ, ಎಸ್. ಮಂಜುನಾಥ, ವೈ.ಮಲ್ಲಿಕಾರ್ಜುನ, ಕುಂಬಾರ ನಾಗೇಶ, ವೈ. ವೀರಭದ್ರಗೌಡ, ಕುಂಟನಾಳ ಲಿಂಗಪ್ಪ ಇತರರಿದ್ದರು.

Published on
ಸಿರಿಗೇರಿ: ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಕಮಿಟಿಯಿಂದ ಭಾನುವಾರ ಸಪ್ತ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
 ನಾಡಿನಲ್ಲಿ ಉತ್ತಮ ಮಳೆ, ಬೆಳೆಗಾಗಿ ಭಕ್ತಾದಿಗಳು ಪ್ರಾರ್ಥನೆ ಸಲ್ಲಿಸಿದರು. ಸಿರಿಗೇರಿ, ಹಾವಿನಾಳು, ಮುದ್ದುಟ್ನೂರು, ಎಚ್. ವಿರಾಪುರ, ಸಿದ್ದರಾಂಪುರ, ದಾಸಪುರ, ಕೊಂಚಿಗೇರಿ, ಶಾನವಾಸಪುರ, ಸಿಂಧಿಗೇರಿ, ಗುಂಡಿಗನೂರು ಸೇರಿದಂತೆ ಸುತ್ತಲಿನ ಹಳ್ಳಿಗಳಿಂದ ಭಜನೆ ತಂಡಗಳು ಆಗಮಿಸಿದ್ದವು.
 ಮಡಿ ಸ್ನಾನ ಮಾಡಿ ಮಡಿ ವಸ್ತ್ರದೊಂದಿಗೆ ಓಂ ನಮಃ ಶಿವಾಯ  ಒಂದೇ ವೇದ ವಾಕ್ಯದೊಂದಿಗೆ ಹಗಲು ರಾತ್ರಿ ನಡೆದ ಸಪ್ತ ಭಜನೆಯನ್ನು ಭಕ್ತರು ನೆರವೇರಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net