ಹಳೆಯ ನಾಣ್ಯಗಳು ಇತಿಹಾಸಕ್ಕೆ ಸಾಕ್ಷಿ

ಪಾಶ್ಚಾಪುರ ಕಾಲೇಜಿನಲ್ಲಿ ಹಳೆಯ ನಾಣ್ಯಗಳ ಪ್ರದರ್ಶನ
ಪಾಶ್ಚಾಪುರ ಕಾಲೇಜಿನಲ್ಲಿ ಹಳೆಯ ನಾಣ್ಯಗಳ ಪ್ರದರ್ಶನ
Published on

ಪ್ರಮುಖ ಮುಖ್ಯಾಂಶಗಳು

  • ಇತಿಹಾಸಕ್ಕೆ ಹಳೆಯ ನಾಣ್ಯಗಳು ಸಾಕ್ಷಿ
  • ಹಳೆಯ ನಾಣ್ಯ ಸಂಗ್ರಹಕಾರ ಘಸ್ತಿ ಅಭಿಪ್ರಾಯ
  • ಹುಕ್ಕೇರಿ ತಾಲೂಕಿನ ಪಾಶ್ಚಾಪೂರ ಕಾಲೇಜಿನಲ್ಲಿ ಹಳೆಯ ನಾಣ್ಯಗಳ ಪ್ರದರ್ಶನ
ಹಳೆಯ ನಾಣ್ಯಗಳು ಇತಿಹಾಸಕ್ಕೆ ಸಾಕ್ಷಿ
|ಹವ್ಯಾಸಿ ನಾಣ್ಯ ಸಂಗ್ರಹಕಾರ ಲಂಕೇಶ ಗಸ್ತಿ ಅಭಿಪ್ರಾಯ | ಪಾಶ್ಚಾಪುರದಲ್ಲಿ ಹಳೆಯ ನಾಣ್ಯಗಳ ಪ್ರದರ್ಶನ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ಹಳೆಯ ನಾಣ್ಯಗಳು ಇತಿಹಾಸದ ಘಟನೆಗಳಿಗೆ ಸಾಕ್ಷಿಯಾಗಿ ನಿಂತಿವೆ. ವಿದ್ಯಾರ್ಥಿಗಳ ಹಳೆ ಕಾಲದ ನಾಣ್ಯಗಳ ಸಂಗ್ರಹಕ್ಕೆ ಆಸಕ್ತಿ ವಹಿಸಬೇಕು ಎಂದು ಹುಕ್ಕೇರಿ ತಾಲ್ಲೂಕಿನ ನರಸಿಂಗಪುರದ ಹವ್ಯಾಸಿ ನಾಣ್ಯ ಸಂಗ್ರಹಕಾರ ಲಂಕೇಶ ಗಸ್ತಿ ಅಭಿಪ್ರಾಯಪಟ್ಟರು.
ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪುರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಏರ್ಪಡಿಸಿದ್ದ ಹಳೆಯ ನಾಣ್ಯಗಳ ಕಾರ್ಯಕ್ರಮ ಅವರು ಉದ್ಘಾಟಿಸಿದರು.
ಇತಿಹಾಸದ ಕಾಲ ಸೇರಿದಂತೆ ಅನೇಕ ಹಳೆಯ ನಾಣ್ಯಗಳು ಆಧಾರಗಳನ್ನು ಒದಗಿಸುತ್ತವೆ.ನಾಣ್ಯಗಳು ಇತಿಹಾಸದಲ್ಲಿ ಹುದುಗಿ ಹೋದವು ಎಷ್ಟೋ ವಿಷಯಗಳು ತಿಳಿಸುತ್ತವೆ. ಪುರಾತನ ನಾಣ್ಯಗಳು ಅನೇಕ ಘಟನೆಗಳಿಗೆ ಸಾಕ್ಷಿಯಾಗಿ ನಿಂತಿವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಶ್ರೀಧರ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ಹಳೆಯ ನಾಣ್ಯ ಸಂಗ್ರಹಿಸಿ ಅದರ ಬಗ್ಗೆ ಅಮೂಲ್ಯ ಮಾಹಿತಿ ಪಡೆಯಬೇಕು ಎಂದರು.
ಕಾಲೇಜಿನ ಐಕ್ಯೂಎಸಿ ವಿಭಾಗದ ಸಮನ್ವಯಾಧಿಕಾರಿ ಕಲ್ಪನಾ ಪೈನಗೋನಿ, ದೈಹಿಕ ಶಿಕ್ಷಣ ನಿರ್ದೇಶಕ ಎ.ಎ.ನದಾಫ್,ಇತಿಹಾಸ ವಿಭಾಗದ ಮುಖ್ಯಸ್ಥೆ ಮಾನಸಾ ಪೂಜಾರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net