‘ಹಳೇ ದ್ವೇಷ’ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ

ಕೊಲೆಯಾದ ವ್ಯಕ್ತಿ ಎಲ್.ಆರ್.ಮಹೇಶ್
ಕೊಲೆಯಾದ ವ್ಯಕ್ತಿ ಎಲ್.ಆರ್.ಮಹೇಶ್
Published on
ಪಾಂಡವಪುರ: ತಾಲೂಕಿನ ಅಮೃತಿ ಗ್ರಾಮದ ಸಮೀಪ ಶನಿವಾರ ತಡರಾತ್ರಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕರ ಗುಂಪೊಂದು ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಲೇಟ್ ರಾಮೇಗೌಡರ ಪುತ್ರ ಎಲ್.ಆರ್.ಮಹೇಶ್ (48) ಮೃತ.
ಘಟನೆ ವಿವರ: ಕೊಲೆಯಾದ ವ್ಯಕ್ತಿ ಬೆಂಗಳೂರಿನಲ್ಲಿ ಆಟೋ ಚಾಲನೆ ವೃತ್ತಿ ಮಾಡಿಕೊಂಡಿದ್ದು ಕೆಲಸದ ನಿಮಿತ್ತ ನ.24 ರಂದು ಸ್ವಗ್ರಾಮಕ್ಕೆ ಬಂದಿದ್ದು ಬೆಂಗಳೂರಿಗೆ ವಾಪಸ್ಸಾಗಿರಲಿಲ್ಲ. ಶನಿವಾರ ರಾತ್ರಿ ತನ್ನ ಸ್ನೇಹಿತ ಮರಿಗೌಡ ಎಂಬಾತನೊಂದಿಗೆ ಜಕ್ಕನಹಳ್ಳಿ-ಮೇಲುಕೋಟೆ ಮಾರ್ಗ ಮಧ್ಯದಲ್ಲಿರುವ ಬಾರ್-ರೆಸ್ಟೋರೆಂಟ್‌ವೊಂದರಲ್ಲಿ ಮದ್ಯಪಾನ ಮಾಡುವಾಗ ಅಲ್ಲಿಗೆ ಆಗಮಿಸಿದ್ದ ಕೇಶವ ಮತ್ತು ಸಿದ್ದರಾಜು ಅವರೊಂದಿಗೆ ಹಳೇ ವಿಚಾರವಾಗಿ ಜಗಳ, ಕೂಗಾಟ ನಡೆದಿದೆ. ಬಳಿಕ ಕೇಶವ ಮತ್ತು ಸಿದ್ದರಾಜು ಸ್ಥಳದಿಂದ ತೆರಳಿದರು ಎಂದು ತಿಳಿದುಬಂದಿದೆ.
ಜಗಳ ಮುಗಿದ ಬಳಿಕ ಸ್ಕೂಟರ್‌ನಲ್ಲಿ ತನ್ನ ಸ್ನೇಹಿತ ಮರಿಗೌಡ ಹಾಗೂ ಮತ್ತೊಬ್ಬ ಸ್ನೇಹಿತ ಅಮೃತಿ ಗ್ರಾಮದ ಕಿರಣ ಎಂಬುವವರೊಂದಿಗೆ ಸ್ಕೂಟರ್‌ನಲ್ಲಿ ಹಿಂದಿರುಗುವ ಮಾರ್ಗ ಮಧ್ಯೆ ಕಿರಣ್‌ನನ್ನು ಡ್ರಾಪ್ ಮಾಡಲು ಸ್ಕೂಟರ್ ನಿಲ್ಲಿಸಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಿಂದಿನಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ರಭಸಕ್ಕೆ ನೆಲಕ್ಕೆ ಉರುಳಿ ಬಿದ್ದ ಮಹೇಶ್ ಚೇತರಿಸಿಕೊಂಡು ತಪ್ಪಿಸಿಕೊಳ್ಳಲು ಯತ್ನಸಿದರು ಬೆಂಬಿಡದ ಆರೋಪಿಗಳು ಬೆನ್ನತ್ತಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು ಎನ್ನಲಾಗಿದೆ. ರಕ್ತಸ್ರಾವದಿಂದ ನರಳಾಡುತ್ತಿದ್ದ ಮಹೇಶನನ್ನು ಸ್ನೇಹಿತರು ತಕ್ಷಣ ಪಾಂಡವಪುರ ಉಪವಿಭಾಗೀಯ ಆಸ್ಪತ್ರಗೆ ದಾಖಲಿಸಿ ವೈದ್ಯರ ಸಲಹೆ ಮೇರೆಗೆ ಮಂಡ್ಯ ಮಿಮ್ಸ್ ಆಸ್ಪತ್ರರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ುಧ್ಯೆ ಮೃತಪಟ್ಟಿದ್ದಾರೆ.
ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಮೃತ ಸಹೋದರ ಶಿವಣ್ಣ ನೀಡಿರುವ ದೂರಿನ ಮೇರೆಗೆ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net