ಯುದ್ಧ ಮುಂದುವರಿದ್ರೆ ತೈಲ ಅಭಾವ ಗ್ಯಾರಂಟಿ development work

ಗುಬ್ಬಿ ತಾಲೂಕಿನ development work ಜವರೇಗೌಡನಪಾಳ್ಯದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್​.ಆರ್​.ಶ್ರೀನಿವಾಸ್​ ಭೂಮಿಪೂಜೆ ನೆರವೇರಿಸಿದರು. ಮುಖಂಡರಾದ ಕೆ.ಆರ್​.ವೆಂಕಟೇಶ್​, ಬುಲೆಟ್​ ಬಸವರಾಜು, ಸಿ.ಜಿ.ಲೋಕೇಶ್​, ಸೋಮಶೇಖರ್​, ರಾಮು, ಶಿವಣ್ಣ, ರಾಜಣ್ಣಗೌಡ ಇದ್ದರು.
ಗುಬ್ಬಿ ತಾಲೂಕಿನ development work ಜವರೇಗೌಡನಪಾಳ್ಯದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್​.ಆರ್​.ಶ್ರೀನಿವಾಸ್​ ಭೂಮಿಪೂಜೆ ನೆರವೇರಿಸಿದರು. ಮುಖಂಡರಾದ ಕೆ.ಆರ್​.ವೆಂಕಟೇಶ್​, ಬುಲೆಟ್​ ಬಸವರಾಜು, ಸಿ.ಜಿ.ಲೋಕೇಶ್​, ಸೋಮಶೇಖರ್​, ರಾಮು, ಶಿವಣ್ಣ, ರಾಜಣ್ಣಗೌಡ ಇದ್ದರು.
Published on
ಗುಬ್ಬಿ: ಸದನದಲ್ಲಿ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರ ಸಿಗಲಿಲ್ಲ ಎಂದು ಶಾಸಕರು ಪ್ರಶ್ನಿಸಿದಾಗ ಸಭಾಪತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೂಡ ಶಾಸಕರ ಪ್ರಶ್ನೆಗೆ ಲಿಖಿತ ಉತ್ತರ ಮೂರು ತಿಂಗಳ ನಂತರ ಬಂದಿದೆ. ತಕ್ಷಣ ಉತ್ತರ ಕೊಡಬೇಕು ಎಂದು ಶಾಸಕರು ಬಯಸಿದ್ದು ಒಳ್ಳೆಯ ಬೆಳವಣಿಗೆ ಎಂದು ಶಾಸಕ ಎಸ್​.ಆರ್​. ಶ್ರೀನಿವಾಸ್​ ತಿಳಿಸಿದರು.
ತಾಲೂಕಿನ ಕಸಬ ಹೋಬಳಿ ನಡುವಲಪಾಳ್ಯ, ಬ್ಯಾಡಿಗೆರೆ ಹಾಗೂ ಜವರೇಗೌಡನಪಾಳ್ಯದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ 5 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, development work ಸಭಾಪತಿಗಳು, ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲ ಸಚಿವರಿಗೆ ಸೂಚನೆ ನೀಡಿದ್ದು, ಮುಂದಿನ ದಿನದಲ್ಲಿ ಸದನದ ಶಾಸಕರ ಪ್ರಶ್ನೆಗೆ ಶೀಘ್ರ ಉತ್ತರ ಕೊಡುವ ಕೆಲಸ ಆಗಲಿದೆ ಎಂದರು.
ಅಡುಗೆ ಅನಿಲ ಕೊರತೆ ದೇಶದೆಲ್ಲೆಡೆ ಕಾಣಸಿಕೊಂಡಿದೆ. ಇರಾನ್​, ಇಸ್ರೇಲ್​ ಯುದ್ಧ ನಮಗೆ ಎಲ್​ಪಿಜಿ ಗ್ಯಾಸ್​ ಸೇರಿದಂತೆ ಪೆಟ್ರೋಲ್​, ಡೀಸೆಲ್​ ತೈಲೋತ್ಪನ್ನಗಳ ಅಭಾವ ಮುಂದಿನ ದಿನದಲ್ಲಿ ಕಾಡಲಿದೆ. ಸದ್ಯಕ್ಕೆ ಕೊರತೆ ದೊಡ್ಡಮಟ್ಟದಲ್ಲಿ ಕಂಡಿಲ್ಲ. ವಿಶ್ವ ಯುದ್ಧವಾಗಿ ಹೀಗೆಯೇ ಮುಂದುವರಿದಲ್ಲಿ ಎಲ್ಲ ದೇಶಗಳಿಗೂ ತೈಲ ಅಭಾವ ದುಷ್ಪರಿಣಾಮ ಕಾಣಲಿದೆ ಎಂದು ಶಾಸಕರು ಹೇಳಿದರು.
ಪೊಲೀಸ್​ ಠಾಣೆಯಲ್ಲಿ ಓರ್ವ ವ್ಯಕ್ತಿ ಸಾವು ಯಾವ ಕಾರಣಕ್ಕೆ ಎಂದು ತನಿಖೆಯಿಂದ ತಿಳಿಯಲಿದೆ. ಪೊಲೀಸರು ಮೊದಲಿನ ರೀತಿ ದಂಡನೆ ನೀಡುತ್ತಿಲ್ಲ. ವಿಚಾರಣೆ ವೇಳೆ ನಡೆದರೆ ಪೊಲೀಸರನ್ನು ದೂರುವುದು ಸಹಜ. ವಿಶೇಷ ತಂಡ ತನಿಖೆ ನಡೆಸಿ ನ್ಯಾಯ ಒದಗಿಸಲಿದ್ದಾರೆ ಎಂದರು.
ಮುಖಂಡರಾದ ನಾಗಣ್ಣ, ಎನ್​.ಜಿ.ಬಸವರಾಜು, ರಮೇಶ್​, ಹರೀಶ್​, ಪವನ, ಜವರೇಗೌಡನಪಾಳ್ಯದ ನರಸಿಂಹಮೂರ್ತಿ, ಹರೀಶ್​, ಗ್ರಾಮೀಣಾಭಿವೃದ್ಧಿ ಇಲಾಖೆಯ ಎಇಇ ಚಂದ್ರಶೇಖರ್​, ಗುತ್ತಿಗೆದಾರರಾದ ರೇಣುಕಪ್ರಸಾದ್​, ಕೇಬಲ್​ ರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net