ಶಾಸಕರ ಸೂಚನೆಗೂ ಮನ್ನಣೆ ನೀಡದ ಅಧಿಕಾರಿಗಳು

ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದ ಮುಳಗಡೆ ಸಂತ್ರಸ್ತರಿಗೆ ಶಿಥಿಲಗೊಂಡ ಶೆಡ್ ಪುನರ್ನಿರ್ಮಾಣ ಸೇರಿ ವಿವಿಧ ಬೇಡಿಕೆ  ಆಗ್ರಹಿಸಿ ನಡೆಸುತ್ತಿರುವ ಧರಣಿ 18ನೇ ದಿನಕ್ಕೆ ಮುಂದುವರಿಯಿತು. ಶರಣಪ್ಪ ಮುಳ್ಳುರ, ಬಸವರಾಜ ಮುಳ್ಳುರ, ಕಲ್ಲಪ್ಪ ಆನೇಹೊಸೂರ, ಭೀಮಪ್ಪ ಅಡಿವಿಹಾಳ, ಮಹಾಂತೇಶ ಆನೆಹೊಸೂರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಇದ್ದಲಗಿ ಮುಳುಗಡೆ ಸಂತ್ರಸ್ತರ ಧರಣಿ ಮುಂದುವರಿಕೆ
  • ಹಕ್ಕು ಪತ್ರ ವಿತರಣೆಗೆ ವಿಳಂಬ
ಹುನಗುಂದ: ತಾಲೂಕಿನ ಇದ್ದಲಗಿ ಗ್ರಾಮದ ಮುಳುಗಡೆ ಸಂತ್ರಸ್ತರು ಶಿಥಿಲಗೊಂಡ ಶೆಡ್ ಪುನರ್ನಿರ್ಮಾಣ ಸೇರಿ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ನಡೆಸುತ್ತಿರುವ ಧರಣಿ ಶನಿವಾರ 18ನೇ ದಿನ ಪೂರೈಸಿತು.
14ನೇ ದಿನದ ಧರಣಿ ಸ್ಥಳಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಆಗಮಿಸಿ, ಒಂದು ವಾರದಲ್ಲಿಯೇ ಉಳಿದ ಸಂತ್ರಸ್ತ ಕುಟುಂಬಗಳಿಗೆ ಹಕ್ಕು ಪತ್ರ ನೀಡುವಂತೆ ಪುನರ್ವಸತಿ ಮತ್ತು ಪುನರ್ನಿರ್ಮಾಣ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು.
ಆದರೆ, ಶಾಸಕರು ಹೇಳಿ ಹೋಗಿ ಐದು ದಿನಗಳಾದರೂ ಹಕ್ಕು ಪತ್ರ ವಿತರಿಸುವುದಿರಲಿ ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ. ಸಂತ್ರಸ್ತರು ಶಾಸಕರ ಮಾತಿಗೆ ಒಪ್ಪಿಕೊಳ್ಳದೆ ಧರಣಿ ಮುಂದವರಿಸಿದ್ದಕ್ಕೆ ಹಕ್ಕು ಪತ್ರ ಕೊಡಲು ಅಧಿಕಾರಿಗಳು ಗ್ರಾಮಕ್ಕೆ ಬಂದಿಲ್ಲವೇನೋ? ಎನ್ನುವ ಅನುಮಾನ ಸಂತ್ರಸ್ತರದಾಗಿದೆ.
ಶರಣಪ್ಪ ಮುಳ್ಳುರ, ಬಸವರಾಜ ಮುಳ್ಳುರ, ಕಲ್ಲಪ್ಪ ಆನೇಹೊಸೂರ, ಭೀಮಪ್ಪ ಅಡಿವಿಹಾಳ, ಮಹಾಂತೇಶ ಆನೆಹೊಸೂರ, ಪರಸಪ್ಪ ಬೇನಾಳ, ಹಬೀರಸಾಬ ಮುಲ್ಲಾ, ಶರಣಪ್ಪ ಹಳಪೇಟಿ, ಸರೋಜಮ್ಮ ಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net