ರೈತರಿಗೆ ಕಾಳ ಸಂತೆಯಲ್ಲಿ ಡಿಎಪಿ ರಸಗೊಬ್ಬರ ಮಾರಾಟ ಮೌನ ತಾಳಿದ ಅಧಿಕಾರಿಗಳು

ಬಸವರಾಜ ಕೇರಳ್ಳಿ
ಬಸವರಾಜ ಕೇರಳ್ಳಿ
Published on
ಚಿಂಚೋಳಿ: ದೇಶದ ಬೆನ್ನೆಲುಬು ರೈತ ಆದರೆ ರೈತನ ಬದುಕಿನೊಂದಿಗೆ ಪ್ರಕೃತಿ, ಸರಕಾರಗಳು ಸೂಕ್ತ ನ್ಯಾಯ ಕಲ್ಪಿಸುವಲ್ಲಿ ಇಂದಿಗೂ ಪಾರದರ್ಶಕವಿಲ್ಲ. ಇದೀಗ ರೋಹಿಣಿ ಮುಂಗಾರು ಮಳೆ ಪ್ರಾರಂಭ ಕೃಷಿ ಚಟುವಟಿಕೆಗೆ ಸಿದ್ದತೆಯ ವೇಳೆ ಹಳ್ಳಿ, ಹಳ್ಳಿಗಳಲ್ಲಿ ಖಾಸಗಿ ಕೃಷಿ ಮಳಿಗೆಗಳಲ್ಲಿ ಡಿಎಪಿ ಕೃತಕ ಅಭಾವ ಸೃಷ್ಟಿಸಿ ದುಬಾರಿ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಮಾಜಿ ಪಿಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ ಕೇರಳ್ಳಿ ಗಂಭೀರವಾಗಿ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಶುಕ್ರವಾರದಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರತಿಯೊಂದು ಡಿಎಪಿ ಗೊಬ್ಬರದ ಚೀಲಕ್ಕೆ 1800 ರಿಂದ 2500 ರೂ. ಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದು, ಈಗಾಗಲೇ ಯುದ್ಧದಿಂದ ರಸ ಗೊಬ್ಬರ ಆಮದು ಆಗಿಲ್ಲ. ಆದ್ದರಿಂದ ದಾಸ್ತಾನು ಕಡಿಮೆ ವಿರುವ ಕಾರಣ ರಸ ಗೊಬ್ಬರವೇ ದೊರೆಯುವುದಿಲ್ಲ. ಎಂಬ ವದಂತಿ ಹರಡಿಸಿ ಹಳ್ಳಿ, ಹಳ್ಳಿಗಳಲ್ಲಿ ಡಿಎಪಿ ದುಬಾರಿಗೆ ಮಾರಾಟ ಮಾಡಲಾಗುತ್ತಿದ್ದು, ಅಧಿಕಾರಿಗಳ ಗಮನಕ್ಕೆ ತಂದರೆ ರಶೀದಿ ನೀಡಿ, ಯಾರು ಮಾರಾಟ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿ ಕ್ರಮ ಜರುಗಿಸಲಾಗುವುದು ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಕೃಷಿ ನಿರ್ದೆಶಕರು ಜಂಟಿ ಹೇಳಿಕೆ ನೀಡಿದ್ದು, ಬಿಟ್ಟರೇ ಯಾವುದೆ ಗಡಿಯಲ್ಲಿ ಚೆಕ್ ಪೋಸ್ಟ್ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಕಂದಾಯ, ಕೃಷಿ ಸಿಬ್ಬಂದಿಗಳು ಯಾವುದೇ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ. ರೈತರಿಗೆ ನ್ಯಾಯ ಕಲ್ಪಿಸಬೇಕಾದ ಅಧಿಕಾರಿಗಳೆ ಮೌನವಾಗಿದ್ದರೇ ರೈತರಿಗೆ ನ್ಯಾಯ ಕಲ್ಪಿಸುವವರು ಯಾರು? ಕೂಡಲೇ ವಿವಿಧ ಇಲಾಖೆಗಳ ಜಂಟಿ ಕಾರ್ಯಚರಣೆ ಮೂಲಕ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಡಿಎಪಿ ರಸ ಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕಿ ಸರಳವಾಗಿ ಸರಕಾರದ ಬೆಂಬಲ ಬೆಲೆಗೆ ರೈತರಿಗೆ ರಸಗೊಬ್ಬರ ಸಿಗುವಂತಾಗಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net