ಜಲಮೂಲ ಸಂರಕ್ಷಣೆಗೆ ಅಧಿಕಾರಿಗಳ ರ್ನಿಲಕ್ಷ್ಯ / ANEKAL

ಆನೇಕಲ್​ ತಾಲೂಕಿನ ಇಂಡ್ಲವಾಡಿ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸಭೆಯನ್ನು ಆಡಳಿತಾಧಿಕಾರಿ ರುಕ್ಕು ಉದ್ಘಾಟಿಸಿದರು. ಗ್ರಾಪಂ ಆಡಳಿತಾಧಿಕಾರಿ ರುಕ್ಕು, ತಾಪಂ ಮಾಜಿ ಸದಸ್ಯ ಮಹದೇವಯ್ಯ, ತಾಪಂ ಚಾಂದ್​ ಪಾಷಾ, ಲೆಕ್ಕ ಸಹಾಯಕ ನಾಗಪ್ಪ, ಮುಖಂಡರಾದ ಅಶ್ವತ್ಥಪ್ಪ ಇತರರು ಇದ್ದರು.
ಆನೇಕಲ್​ ತಾಲೂಕಿನ ಇಂಡ್ಲವಾಡಿ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸಭೆಯನ್ನು ಆಡಳಿತಾಧಿಕಾರಿ ರುಕ್ಕು ಉದ್ಘಾಟಿಸಿದರು. ಗ್ರಾಪಂ ಆಡಳಿತಾಧಿಕಾರಿ ರುಕ್ಕು, ತಾಪಂ ಮಾಜಿ ಸದಸ್ಯ ಮಹದೇವಯ್ಯ, ತಾಪಂ ಚಾಂದ್​ ಪಾಷಾ, ಲೆಕ್ಕ ಸಹಾಯಕ ನಾಗಪ್ಪ, ಮುಖಂಡರಾದ ಅಶ್ವತ್ಥಪ್ಪ ಇತರರು ಇದ್ದರು.
Published on
ಆನೇಕಲ್​ : ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮದಲ್ಲಿ ನಿರಂತರವಾಗಿ ನೀರಿನ ಸಮಸ್ಯೆ ಇದ್ದು, ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಆರೋಪಿಸಿದರು.
ಇಂಡ್ಲವಾಡಿಯಲ್ಲಿ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಒಕ್ಕೋರಲ ಮನವಿ ಸಲ್ಲಿಸಿದರು. ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಗೆಹರಿಸಬೇಕು. ಕೆರೆಗಳು ಮುಚ್ಚಿಕೊಳ್ಳುತ್ತಿದ್ದು, ಅಭಿವೃದ್ಧಿ ಆಗಬೇಕು. ಹಾಗೇ ಕೆರೆ ಸುತ್ತಮುತ್ತ ಒತ್ತುವರಿಯಾಗಿದ್ದರೆ ಸರ್ವೇ ಮಾಡಿಸಿ, ಕೆರೆ ವಿಸ್ತೀರ್ಣದ ಬಗ್ಗೆ ಪಂಚಾಯಿತಿಯಲ್ಲಿ ಮಾಹಿತಿ ಇರಬೇಕು. ಚಿಕ್ಕ ಹೊಸಹಳ್ಳಿ,ಇಂಡ್ಲವಾಡಿ ಕೆರೆ ಒತ್ತುವರಿ ಆಗಿದ್ದು, ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಜಲಮೂಲ ಸಂರಕ್ಷಣೆಗೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜು, ಕೆರೆ ಒತ್ತುವರಿ ತೆರವಿಗೆ ಸಂಬಂಧಪಟ್ಟ ಇಲಾಖೆಗೆ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ನಂತರ ಕೆರೆಗಳಿಗೆ ತಂತಿಬೇಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಪಂಚಾಯಿತಿ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಕುರಿತು ನೀಡಿರುವ ದೂರುಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ರಸ್ತೆ, ಕುಡಿಯುವ ನೀರು, ಬೀದಿದೀಪ, ಚರಂಡಿ ಸೇರಿ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಇಲಾಖೆ ಅಧಿಕಾರಿಗಳು ವಿವಿಧ ಇಲಾಖೆಗಳಿಂದ ಹಾಗೂ ಸರ್ಕಾರದಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net