ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ಹಲವು ತಿಂಗಳಿನಿಂದ ಸುರಪುರ&ಹುನಗುಂದ ಮುಖ್ಯ ರಸ್ತೆಯ ಎಸ್ಬಿಐ ವೃತ್ತದ ಕಾಲುವೆ ಸೇತುವೆ ಬಳಿ ಹಣ್ಣಿನ ಅಂಗಡಿಗಳು, ಬೀದಿಬದಿ ವ್ಯಾಪಾರಿಗಳು ಜಾಗ ಅತಿಕ್ರಮಣ ಮಾಡಿದ್ದು ಇದರಿಂದ ಈ ಮುಖ್ಯ ರಸ್ತೆಯಲ್ಲಿ ವಾಹನಗಳು ಸರಾಗವಾಗಿ ಸಂಚರಿಸದೆ ಜನದಟ್ಟನೆಯಾಗುತ್ತಿದೆ. ನಾರಾಯಣಪುರ ಮುಖ್ಯ ಕಾಲುವೆಯ ಪಕ್ಕದ ರಸ್ತೆಯಲ್ಲಿ ಇದೀಗ ಹೊಸದಾಗಿ ಮಾಂಸದಂಗಡಿ ಕೂಡ ತಲೆ ಎತ್ತಿದ್ದು ನಿತ್ಯ ತಮ್ಮ ಹೊಲಗದ್ದೆಗಳಿಗೆ ತಿರುಗಾಡುವ ರೈತರಿಗೆ ಇದರಿಂದ ತೊಂದರೆಯಾಗುತ್ತಿದೆ ಎಂಬ ಮಾತು ಅನ್ನದಾತರಿಂದ ಕೇಳಿ ಬರುತ್ತಿವೆ.