

ಜೇವರ್ಗಿ: ರಾಸಣಗಿಯಲ್ಲಿನ ಭೀಮಾ ನದಿ ದಡದಲ್ಲಿರುವ ಶ್ರೀ ಬಲಭೀಮಸೇನ ದೇವರಿಗೆ ಸೋಮವಾರ ಶಾಸೊಕ್ತವಾಗಿ ಹೇರೂರ ಮನೆತನದಿಂದ ಚಮ್ಮಾವುಗೆ (ಪಾದರಕ್ಷೆ) ಸಮರ್ಪಿಸಲಾಯಿತು. ಬೆಳಗ್ಗೆ 8ಕ್ಕೆ ಕಂಟೆಪ್ಪ ಹುಲೆಪ್ಪ ಹೇರೂರ ಹರವಾಳ ಅವರು ಚಮ್ಮಾವುಗೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಸುಮಾರು 4 ಕಿಮೀ. ಪಾದಯಾತ್ರೆ ಮೂಲಕ ರಾಸಣಗಿಯ ಶ್ರೀ ಬಲಭೀಮಸೇನ ದೇವಸ್ಥಾನಕ್ಕೆ ಬಂದರು. ಬಳಿಕ ಅರ್ಚಕ ಗುರುರಾಜ ಕುಲಕರ್ಣಿ ಹರವಾಳ ಅವರು ಶ್ರೀ ಬಲಭೀಮಸೇನ ದೇವರಿಗೆ ಪಂಚಾಂಮೃತ ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ಮಹಾಮಂಗಳಾರತಿ ನೆರವೇರಿಸಿದರು. ಬಳಿಕ ದೇವರಿಗೆ ಚಮ್ಮಾವುಗೆಗಳನ್ನು ಅರ್ಪಿಸಲಾಯಿತು. ರಮೇಶಬಾಬು ವಕೀಲ್, ಎಸ್.ಎಸ್. ಪಾಟೀಲ್, ಬಿ.ಜಿ ಪಾಟೀಲ್, ಶಿವಪುತ್ರಪ್ಪ ರಾಸಣಗಿ, ಅನೀಲ ಮಾಡ್ಯಾಳಕರ್, ಸಂಪತ ಮಾಡ್ಯಾಳಕರ್, ಭೀಮಸೇನ ಜೋಶಿ, ರಾಮು ಕುಲಕರ್ಣಿ, ಸೇತುರಾವ ಹರವಾಳ, ರಾವೇಂದ್ರ ಇನಾಮದಾರ, ವೆಂಕಟೇಶ ಇನಾಮದಾರ, ರಾವೇಂದ್ರ ಕುಲಕರ್ಣಿ, ಅನಂತ ಇನಾಮದಾರ, ಮಲ್ಲಿಕಾರ್ಜುನ ಆದವಾನಿ, ರಾಜು ಪತಂಗೆ, ಮರೆಪ್ಪ ಹಸನಾಪುರ, ಭೀಮರಾಯ ಮಡಿವಾಳಕರ್, ಶಿವಪುತ್ರ ಹೇರೂರ ಹರವಾಳ, ಬಸವಂತರಾಯ ಹೇರೂರ ಇತರರಿದ್ದರು.