ಹಾಗಲವಾಡಿ ಕೆರೆ ಕಾಮಗಾರಿಗೆ ವಿಷ್ನ ನಿವಾರಣೆ

ಗುಬ್ಬಿ ತಾಲೂಕು ಹಾಗಲವಾಡಿ ಕೆರೆಗೆ ಹೇಮಾವತಿ ನೀರು ಹರಿಸುವ ಯೋಜನೆಗೆ ಅಡ್ಡಿ ಪಡಿಸಿದ ಯಕ್ಕಲ್ಲಕಟ್ಟೆ ಅಪ್ಪಣನಹಳ್ಳಿ ರೈತರ ಜಮೀನಿಗೆ ಶುಕ್ರವಾರ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಶಂಕರನಂದ್ ಕಾಮಗಾರಿಗೆ ಚಾಲನೆ ನೀಡಿದರು. ತೆಂಗು ನಾರು ಮಂಡಳಿ ಮಾಜಿ ನಿರ್ದೇಶಕ ಸಣ್ಣರಂಗಯ್ಯ, ಹೇಮಾವತಿ ಎಇಇ ಮಹೇಶ್, ಇಂಜಿನಿಯರ್ ಭರತ್ ಕುಮಾರ್, ಕಂದಾಯ ತನಿಖಾಧಿಕಾರಿ ಗುರುಪ್ರಸಾದ್, ತಾಲೂಕು ಸರ್ವೆಯರ್ ವೀರೂಪಾಕ್ಷ, ರೈತರಾದ ಅಪ್ಪಣ್ಣ, ಸಿದ್ದಯ್ಯ, ಮುಖಂಡರಾದ ಪ್ರಸನ್ನಕುಮಾರ್, ಬಸವರಾಜ್ ಇತರರು ಇದ್ದರು.

Published on

ಎಂ.ಎನ್.ಕೋಟೆ :

ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಹಾಗಲವಾಡಿ ಕೆರೆಗೆ ಹೇಮಾವತಿ ನೀರು ಹರಿಸುವ ಯೋಜನೆ ಚಾಲನೆಗೆ ಕೊನೆಗೂ ರೈತರು ಅವಕಾಶ ಮಾಡಿಕೊಟ್ಟಿದ್ದಾರೆ.

ಯಕ್ಕಲಕಟ್ಟೆ ಸರ್ವೇ ನಂ.58ರಲ್ಲಿ ಅಣ್ಣತಮ್ಮಂದಿರ ಜಗಳದಿಂದ ರಾಜಕೀಯ ನಾಯಕರು, ಅಧಿಕಾರಿಗಳು ನೀರು ಹರಿಸಲು ಹರಸಾಹಸ ಪಟ್ಟರೂ ಕೊಟ್ಯಾಂತರ ರೂ. ವೆಚ್ಚದ ಕಾಮಗಾರಿ ಸುಮಾರು ದಶಕಗಳಿಂದ ಸ್ಥಗಿತವಾಗಿತ್ತು. ಕೊನೆಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ, ಶಾಸಕ ಶ್ರೀನಿವಾಸ್ ಸಹಕಾರದೊಂದಿಗೆ ತುಮಕೂರು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಂಕರಾನಂದ ನೇತೃತ್ವದಲ್ಲಿ ಗುರುವಾರ ರೈತರಾದ ಅಪ್ಪಣ್ಣ ಮತ್ತು ಚಿತ್ತಯ್ಯ ಅವರೊಂದಿಗೆ ರಾಜಿ ಸಂಧಾನ ಮೂಲಕ ಸಮಸ್ಯೆ ಬಗೆಹರಿಸಿ ದೀರ್ಘ ಕಾಲದಿಂದ ನಿಂತಿದ್ದ ಕಾಮಗಾರಿ ಮುಂದುವರಿಸಲು ಮನವೊಲಿಸಲಾಯಿತು.
ಶಂಕರಾನಂದ ಮಾತನಾಡಿ, ಹಾಗಲವಾಡಿ ಕೆರೆಗೆ ನೀರು ಹರಿಸುವಲ್ಲಿ ಶಾಸಕರು ಆದ್ಯತೆ ನೀಡಿದ್ದು, ಪ್ರಸ್ತುತ ವರ್ಷ ಕಾಮಗಾರಿ ಮಾಡಿಯೇ ತೀರುತ್ತೇವೆ. ಹಾಗಲವಾಡಿ ಕೆರೆಗೆ ನೀರು ಹರಿದರೇ ಅಪ್ಪಣ್ಣನಹಳ್ಳಿ, ಕಲ್ಲಹರದಗೆರೆ, ಮತ್ತಿಕೆರೆ, ಶಿವಪುರ ಭಾಗಗಳಿಗೆ ಅನುಕೂಲವಾಗಲಿದೆ ಎಂದರು.
ತೆಂಗು ನಾರು ಮಂಡಳಿಯ ಮಾಜಿ ನಿರ್ದೇಶಕ ಸಣ್ಣರಂಗಯ್ಯ ಮಾತನಾಡಿ, ಕೆನಾಲ್ ಕಾಮಗಾರಿ ಅಂತ್ಯಗೊಂಡಿದ್ದರೂ, ಕೇವಲ 300 ಮೀಟರ್ ಕಾಮಗಾರಿಗೆ ತೊಂದರೆಯಾಗಿತ್ತು. ಶಾಸಕರು ಸಮಸ್ಯೆ ತಿಳಿದು ಬಗೆಹರಿಸಲು ಹೇಳಿದ್ದರಿಂದ ರೈತರ ಮನವೊಲಿಸಿದ್ದೇವೆ. ನಾಳೆಯಿಂದಲೇ ಕಾಮಗಾರಿ ಪ್ರಾರಂಭಿಸಿ ತೊಂದರೆ ನೀಡುವುದಿಲ್ಲವೆಂದು ಅಪ್ಪಣ್ಣ ಹಾಗೂ ಚಿತ್ತಣ್ಣ ಹೇಳಿದ್ದಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net