ನ್ಯಾಯ ಕೊಡಿಸುವುದೇ ಸಂಘಟನೆ ಗುರಿ

ಯಾದಗಿರಿಯಲ್ಲಿ ಮಂಗಳವಾರ ಸಂಜೆ ನಡೆದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಯಾದಗಿರಿ ವಿಭಾಗದ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಸಂಘಟನೆಯ ಜಾಗೃತಿ ಸಮಾವೇಶದಲ್ಲಿ ಅಧ್ಯಕ್ಷ ಚಂದ್ರಕಾAತ ಗದ್ದಗಿ ಮಾತನಾಡಿದರು. ಸೂರ್ಯಕಾಂತ ಸಿಂಘೆ, ಮಾನಯ್ಯ ಹತ್ತಿಗೂಡುರ, ಎಂ.ಎಚ್. ಬಡಿಗೇರ್, ಚಂದ್ರಶೇಖರ್ ಮುಷ್ಕಹಳ್ಳಿ ಇತರರಿದ್ದರು.
ಯಾದಗಿರಿಯಲ್ಲಿ ಮಂಗಳವಾರ ಸಂಜೆ ನಡೆದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಯಾದಗಿರಿ ವಿಭಾಗದ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಸಂಘಟನೆಯ ಜಾಗೃತಿ ಸಮಾವೇಶದಲ್ಲಿ ಅಧ್ಯಕ್ಷ ಚಂದ್ರಕಾAತ ಗದ್ದಗಿ ಮಾತನಾಡಿದರು. ಸೂರ್ಯಕಾಂತ ಸಿಂಘೆ, ಮಾನಯ್ಯ ಹತ್ತಿಗೂಡುರ, ಎಂ.ಎಚ್. ಬಡಿಗೇರ್, ಚಂದ್ರಶೇಖರ್ ಮುಷ್ಕಹಳ್ಳಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಚಂದ್ರಕಾAತ ಗದ್ದಗಿ ಹೇಳಿಕೆ
  • ಪಜಾ-ಪಪಂ ನೌಕರರ ಸಂಘಟನೆ ಜಾಗೃತಿ ಸಮಾವೇಶ
ಯಾದಗಿರಿ: ಅನ್ಯಾಯಕ್ಕೆ ಒಳಗಾದ ಕಾರ್ಮಿಕರು ಹಾಗೂ ನೌಕರರಿಗೆ ರಕ್ಷಣೆ ಕೊಡುವುದೇ ಸಾರಿಗೆ ಸಂಸ್ಥೆಯ ನಾಲ್ಕು ಸಂಘಟನೆಗಳ ಪ್ರಮುಖ ಗುರಿಯಾಗಿದೆ ಎಂದು ಕೆಕೆಆರ್‌ಟಿಸಿ ಪಜಾ, ಪಪಂ ನೌಕರರ ಸಂಘಟನೆ ಈಶಾನ್ಯ ವಲಯದ ಅಧ್ಯಕ್ಷ ಚಂದ್ರಕಾAತ ಗದ್ದಗಿ ಹೇಳಿದರು.
ಇಲ್ಲಿನ ಹಳೇ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಜೆ ನಡೆದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಯಾದಗಿರಿ ವಿಭಾಗದ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಸಂಘಟನೆ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಜಾತಿ ಕಿರುಕುಳಕ್ಕೆ ಒಳಗಾದವರು, ವರ್ಗಾವಣೆ ಹಾಗೂ ಬಡ್ತಿಯಲ್ಲಿ ಅನ್ಯಾಯವಾದವರಿಗೆ ಮುಂದೆ ನಿಂತು ನ್ಯಾಯ ಕೊಡಿಸುವುದು ಸಂಘಟನೆಯ ನಾಯಕರ ಪ್ರಮುಖ ಕೆಲಸವಾಗಿದೆ ಎಂದು ಹೇಳಿದರು.
ಗುಲಾಮಗಿರಿ, ಚಮಚಾಗಿರಿ ಮಾಡುತ್ತಿದ್ದರೆ ಯಾವುದೇ ಸಂಘಟನೆ ಬೆಳೆಯಲು ಸಾಧ್ಯವಿಲ್ಲ. ಸಂಘದ ತತ್ವಕ್ಕೆ ಬದ್ಧರಾಗಿ ನಡೆಯಬೇಕು ಎಂದು ಅವರು ಸಲಹೆ ನೀಡಿದರು. ಸಂಘಟನೆಯಲ್ಲಿ ಗುರುತಿಸಿಕೊಂಡವರು ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳಬಾರದು. ಡಾ.ಅಂಬೇಡ್ಕರ್ ಅವರು ನೀಡಿರುವ ಧ್ಯೆಯಗಳಾದ ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಹಾದಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕು ಎಂದು ಕಿವಿಮಾತು ಹೇಳಿದರು.
ಸಂಘದ ಸದಸ್ಯರು ಅರ್ಹ, ಚಾಣಾಕ್ಷ, ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ, ತಪ್ಪುಗಳನ್ನು ಸರಿಪಡಿಸಿ ತಿದ್ದಿಕೊಳ್ಳಲು ಅವಕಾಶ ಕೊಡುವಂತಹ ವ್ಯಕ್ತಿಗಳನ್ನು ಪದಾಽಕಾರಿಗಳನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು. ಅಽಕಾರಿಗಳ ಮುಂದೆ ಹಲ್ಲುಗಿಂಜಿ ನಿಂತು ದ್ರೋಹ ಬಗೆಯುವವರ ಬಗ್ಗೆ ಎಚ್ಚರಿಕೆಯಿಂದಿರಬೇಕು. ಗುಲಾಮಗಿರಿ, ಚಮಚಾಗಿರಿ ಮಾಡುತ್ತಿದ್ದರೆ ಯಾವುದೇ ಸಂಘಟನೆ ಬೆಳೆಯುವುದಿಲ್ಲ. ಸಂಘದ ತತ್ವಕ್ಕೆ ಎಲ್ಲರೂ ಬದ್ಧರಾಗಿ ನಡೆಯಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಹೈಯಾಳ್ವರ ಮಾತನಾಡಿ, ಸಂಘಟನೆಯಲ್ಲಿ ಪ್ರತಿಯೊಬ್ಬರಿಗೂ ಅವಕಾಶ ಸಿಗುವಂತಾಗಬೇಕು. ಹೀಗಾಗಿ, ಮುಂದಿನ ಮೂರು ತಿಂಗಳವರೆಗೆ ತಾತ್ಕಾಲಿಕ ತಂಡ ಮಾಡಿಕೊಂಡು ಸಂಘಟನೆ ಮಾಡಬೇಕು. ಹೊಸ ಸದಸ್ಯರನ್ನು ಸೇರ್ಪಡೆ ಮಾಡಿಕೊಂಡು ವ್ಯವಸ್ಥಿತವಾಗಿ ಪದಾಽಕಾರಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಯಾವುದೇ ಅಡೆತಡೆಗಳಿಲ್ಲದೆ ಸಂಘಟನೆಯು ಸುಸೂತ್ರವಾಗಿ ನಡೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಯಾದಗಿರಿ ವಿಭಾಗದ ಅಧ್ಯಕ್ಷ ಮಾನಯ್ಯ ಹತ್ತಿಗೂಡುರ, ವಿಭಾಗದ ಪ್ರಧಾನ ಕಾರ್ಯದರ್ಶಿ ಎಂ.ಎಚ್. ಬಡಿಗೇರ್, ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮುಷ್ಕಹಳ್ಳಿ, ಕಾರ್ಯಧ್ಯಕ್ಷ ಭೀಮಣ್ಣ ರಾಖಂಗೇರ, ಮಹಾಮಂಡಳ ಅಧ್ಯಕ್ಷ ದೇವೇಂದ್ರಪ್ಪ ಮ್ಯಾಗೇರಿ, ವಲಯ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಸಿಂಗೆ, ಸಂಘದ ಕಲಬುರಗಿ ವಿಭಾಗ -೧ ಅಧ್ಯಕ್ಷ ವಿಠಲ ಭೀಮಣ್ಣ, ಪ್ರಧಾನ ಕಾರ್ಯದರ್ಶಿ ದೇವೇಂದ್ರ ಬೇಹರೆ, ಕಲಬುರಗಿ ವಿಭಾಗ-೨ ಅಧ್ಯಕ್ಷ ಶಿವಶರಣಪ್ಪ ದಬರಾಬಾಡಿ, ಪ್ರಧಾನ ಕಾರ್ಯದರ್ಶಿಗಳಾದ ಅಜಯ ಕಪನೂರ, ಸುನಿಲï ಶಾಖಾ, ನಾಗಭೂಷಣ, ಪ್ರಮುಖರಾದ ಮುತ್ತಣ್ಣ, ಭೀಮಣ್ಣ, ಚಂದ¯್ಲÁಪುರ, ಪೋಮ ನಾಯಕ, ಹೊನ್ನಪ್ಪ ದೊಡ್ಕನಿ ಇತರರಿದ್ದರು.
ಮಕ್ಕಳಿಗೆ ಶಿಕ್ಷಣ ಕೊಡಿಸಿ
ಸಾರಿಗೆ ಸಂಸ್ಥೆಯ ಕಾರ್ಮಿಕರು ಮದ್ಯ ಕುಡಿತಕ್ಕೆ ಒಳಗಾಗದೆ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು. ನಾಳೆ ನಮ್ಮಲ್ಲಿನ ಸಂಪತ್ತು ಕಸಿದುಕೊಳ್ಳಬಹುದು. ಆದರೆ, ಕಲಿತ ವಿದ್ಯೆ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಿ ಎಂದು ಚಂದ್ರಕಾAತ ಗದ್ದಗಿ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net