‘ಅಕ್ಕ- ಸಿನಿಗನ್ನಡ ಸಿನಿಮೋತ್ಸವ’ಕ್ಕೆ ಚಿತ್ರಗಳ ಆಹ್ವಾನ

 ‘ಅಕ್ಕ- ಸಿನಿಗನ್ನಡ ಸಿನಿಮೋತ್ಸವ’
‘ಅಕ್ಕ- ಸಿನಿಗನ್ನಡ ಸಿನಿಮೋತ್ಸವ’
Published on

ಪ್ರಮುಖ ಮುಖ್ಯಾಂಶಗಳು

  • * ಸೆ. 4ರಿಂದ 6ರವರೆಗೆ ಫಿಲಡೆಲ್ಫಿಯಾದಲ್ಲಿ ಆಯೋಜನೆ
  • * ಪ್ರಥಮ ಶ್ರೇಷ್ಠ ಚಿತ್ರಕ್ಕೆ 1 ಲಕ್ಷ ರೂ. ಬಹುಮಾನ
  • * ನಿರ್ದೇಶಕ ಪಿ. ಶೇಷಾದ್ರಿ ಮಾಹಿತಿ
ಬೆಂಗಳೂರು: ರಜತ ಸಂಭ್ರಮದಲ್ಲಿರುವ ‘ಅಕ್ಕ’ (ಅಮೆರಿಕದ ಕನ್ನಡ ಕೂಟಗಳ ಸಂಘ) ಸಂಸ್ಥೆಯು ಫಿಲಡೆಲ್ಫಿಯಾದಲ್ಲಿ ಇದೇ ಮೊದಲ ಬಾರಿಗೆ ‘ಅಕ್ಕ ಸಿನಿಗನ್ನಡ ಚಲನಚಿತ್ರೋತ್ಸವ- 2026’ ಆಯೋಜಿಸಲಿದ್ದು, ಉತ್ಸವದಲ್ಲಿ ಪ್ರದರ್ಶನಗೊಳ್ಳಿರುವ ಚಿತ್ರಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಸೆ. 4ರಿಂದ 6ರವರೆಗೆ ನಡೆಯಲಿರುವ ಸಿನಿಮೋತ್ಸವದಲ್ಲಿ ಕನ್ನಡ, ತುಳು, ಕೊಂಕಣಿ, ಕೊಡವ ಭಾಷೆಗಳ ಚಿತ್ರಗಳನ್ನು ಪ್ರದರ್ಶಿಸುವ ಉದ್ದೇಶ ಹೊಂದಲಾಗಿದೆ. ಈ ಸಂಬಂಧ ಚಿತ್ರಗಳ ಆಯ್ಕೆಗೆ 2025ರ ಜ. 1ರಿಂದ ಡಿ. 31ರ ಅವಧಿಯಲ್ಲಿ ತಯಾರಾಗಿ ಸೆನ್ಸಾರ್ ಪ್ರಮಾಣಪತ್ರ ಪಡೆದ ಚಿತ್ರಗಳನ್ನು ಆಹ್ವಾನಿಸಲಾಗಿದೆ ಎಂದು ನಿರ್ದೇಶಕ ಪಿ. ಶೇಷಾದ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾದ 10 ಚಿತ್ರಗಳಲ್ಲಿ ಪ್ರಥಮ ಶ್ರೇಷ್ಠ ಚಿತ್ರಕ್ಕೆ 1 ಲಕ್ಷ ರೂ., ದ್ವಿತೀಯ ಶ್ರೇಷ್ಠ ಚಿತ್ರಕ್ಕೆ 50 ಸಾವಿರ ರೂ. ಹಾಗೂ ತೃತೀಯ ಶ್ರೇಷ್ಠ ಚಿತ್ರಕ್ಕೆ 25 ಸಾವಿರ ರೂ. ನಗದು, ಲಕ ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ಆಗಸ್ಟ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಆಯ್ಕೆ ಪ್ರಕ್ರಿಯೆ:

ಸುಮಾರು 150 ಚಿತ್ರಗಳು ಸಲ್ಲಿಕೆಯಾಗಬಹುದೆಂಬ ನಿರೀಕ್ಷೆ ಇದ್ದು, 10 ಸದಸ್ಯರುಳ್ಳ ಸಮಿತಿಯು ವೀಕ್ಷಿಸಿ ಉತ್ತಮ ಚಿತ್ರಗಳನ್ನು ನಾಮನಿರ್ದೇಶನ ಮಾಡಲಿವೆ. ಸಮಿತಿಯಿಂದ ಆಯ್ಕೆಯಾದ ಚಿತ್ರಗಳನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಮೂವರು ಚಿತ್ರ ನಿರ್ದೇಶಕರುಳ್ಳ ತೀರ್ಪುಗಾರರ ಸಮಿತಿ ವೀಕ್ಷಿಸಿ ಅಗ್ರ 10 ಚಿತ್ರಗಳನ್ನು ಆಯ್ಕೆ ಮಾಡಲಿದೆ.
ಆಸಕ್ತ ನಿರ್ಮಾಪಕರು, ನಿರ್ದೇಶಕರು ಆ. 15ರೊಳಗೆ ಚಿತ್ರಗಳ ಸಾರಾಂಶ, ನಿರ್ದೇಶಕರ ಪರಿಚಯ ಮತ್ತು ತಾಂತ್ರಿಕ ವಿವರಗಳೊಂದಿಗೆ abgyorventures@gmail.comಗೆ ಕಳುಹಿಸಬಹುದು. https://cinegannadafilmfest.org/ವೆಬ್‌ಸೈಟ್ ಮೂಲಕ ಚಿತ್ರಗಳ ಪ್ರವೇಶ ಸ್ವೀಕರಿಸಲಾಗುವುದು.
ಗೋಷ್ಠಿಯಲ್ಲಿ ನಿರ್ದೇಶಕ ದೇವೇಂದ್ರ ಬಡಿಗೇರ್, ಹಿರಿಯ ಪತ್ರಕರ್ತ ಗೌರೀಶ್ ಅಕ್ಕಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net