ದಾದಿಯರ ಸೇವೆ ಪ್ರಶಂಸನೀಯ

ದಾದಿಯರ ದಿನ ಆಚರಣೆ
ದಾದಿಯರ ದಿನ ಆಚರಣೆ
Published on

ಪ್ರಮುಖ ಮುಖ್ಯಾಂಶಗಳು

  • ದಾದಿಯರ ಸೇವೆ ಪ್ರಶಂಸನೀಯ
  • ಕೆಎಲ್ಇ ಆಸ್ಪತ್ರೆಯಲ್ಲಿ ದಾದಿಯರ ದಿನ ಆಚರಣೆ
  • ದಾದಿಯರ ಕಾರ್ಯ ಶ್ಲಾಘಿಸಿದ ಗಣ್ಯರು

ದಾದಿಯರ ವೃತ್ತಿ ಪ್ರಶಂಸನೀಯ
| ಫೇರೋಕಾಸ್ಟನ ನಿರ್ದೇಶಕ ಸಚಿನ ಅಭಿಮತ | ವಿಶ್ವ ದಾದಿಯರ ದಿನಾಚರಣೆ
ವಿಜಯವಾಣಿ ಸುದ್ದಿಜಾಲ ಬೆಳಗಾವಿ:
ಸ್ವ ಹಿತಾಸಕ್ತಿಯನ್ನು ಬದಿಗಿರಿಸಿ ಪರರ ಆರೋಗ್ಯ ಕಾಳಜಿವಹಿಸುವ ದಾಾದಿಯರ ವೃತ್ತಿಯು ನಿಜವಾಗಿಯೂ ಪ್ರಶಂಸನೀಯ ಎಂದು ಬೆಳಗಂ ಫೇರೊಕಾಸ್ಟನ ನಿರ್ದೇಶಕ ಸಚಿನ ಸಬನಿಸ್ ಅಭಿಮತ ವ್ಯಕ್ತ ಪಡಿಸಿದರು.
ನಗರದ ಯಳ್ಳೂರ ರಸ್ತೆಯ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಈಚೆಗೆ ನಡೆದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬ ದಾದಿಯು(ನರ್ಸ್) ಯಾವುದೇ ರೀತಿಯ ಸಂಬಂಧವಿಲ್ಲದಿದ್ದರೂ ಅನಾಮಿಕನನ್ನು ತನ್ನ ಮಗುವಿನಂತೆಯೇ ಕಾಳಜಿಯಿಂದ ನೋಡಿಕೊಂಡು,ಆತನು ಆರೋಗ್ಯಹೊಂದಿ ಸಂತಸದ ಜೀವನ ನಡೆಸುವಂತೆ ಮಾಡುವಲ್ಲಿ ದಾದಿಯ ಪಾತ್ರವು ಮುಖ್ಯವಾದುದು ಎಂದು ಶ್ಲಾಘೀಸಿದರು.
ಯುಎಸ್‌ಡಿ ಎಂ ಕೆಎಲ್‌ಇ ನಿರ್ದೇಶಕ ಡಾ.ಎಚ್.ಬಿ ರಾಜಶೇಖರ ಮಾತನಾಡಿದರು.
ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಎನ್ ಮಾತನಾಡಿ,ಆಸ್ಪತ್ರೆಯ ಸೇವಾ ವ್ಯವಸ್ಥೆಯಲ್ಲಿ ದಾದಿಯರ ಪಾತ್ರ ಅತ್ಯಂತ ಹೆಚ್ಚು ಮಹತ್ವದಾಗಿದ್ದರೆ, ದಿನದ ೨೪ ಗಂಟೆಗಳ ಸೇವೆಯಲ್ಲಿ ನರ್ಸಸ್‌ಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದರು, ಆರೋಗ್ಯ ಸೇವೆ ಬೆನ್ನೆಲುಬಾಗಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಸಂಜಯ ಕಂಬಾರ ಮಾತನಾಡಿ, ಆಸ್ಪತ್ರೆಯಲ್ಲಿ ನರ್ಸಿಂಗ್ ಸೇವೆ ಅತ್ಯಂತ ಪ್ರಮುಖ, ಜವಾಬ್ದಾರಿಯುತ ಹಾಗೂ ಸೂಕ್ಷ್ಮವಾದ ಕರ್ತವ್ಯವಾಗಿದೆ ಎಂದು ಹೇಳಿದರು.
ನರಸಿಂಗ ಅಧೀಕ್ಷಕಿ ಶರೀಫ ಸಯ್ಯದ,ಉಪ ಅಧೀಕ್ಷಕಿ ಭಾರತಿ ಲಿಂಗಾಯತ, ದ್ರಾಕ್ಷಾಯಿಣಿ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net