ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಬಿಐಎಎಲ್) ಮುಖ್ಯ ಕಾರ್ಯಾಚರಣಾಧಿಕಾರಿ ಗಿರೀಶ್ ನಾಯರ್ ಪ್ರತಿಕ್ರಿಯಿಸಿ, "ಭಾರತದ ಸಿಲಿಕಾನ್ ಸಿಟಿಯನ್ನು ಜಾಗತಿಕ ಆರ್ಥಿಕ ಕೇಂದ್ರವಾದ ಜ್ಯೂರಿಕ್ ಜೊತೆ ಬೆಸೆಯುವ ಈ ಸೇವೆ, ನಮ್ಮ ಮಾರುಕಟ್ಟೆಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ದೇಶದ 78 ನಗರಗಳಿಗೆ ಕನೆಕ್ಷನ್ ಇರುವುದರಿಂದ, ಟಯರ್-2 ಹಾಗೂ ಟಯರ್-3 ನಗರಗಳಿಂದ ಬರುವವರಿಗೂ ಒಂದೇ ಟಿಕೆಟ್‌ನಲ್ಲಿ ಯುರೋಪ್‌ಗೆ ಸುಲಭ ಸಂಪರ್ಕ ಸಿಗಲಿದೆ," ಎಂದರು.