ಆನೇಕಲ್ : ಕೊಲೆ, ಸುಲಿಗೆ ಸೇರಿ 60 ಪ್ರಕರಣದಲ್ಲಿ ಆರೋಪಿಯಾಗಿದ್ದ, ನಾಲ್ಕು ರಾಜ್ಯಗಳಿಗೆ ಬೇಕಾಗಿದ್ದ ಕುಖ್ಯಾತ ಅಂತಾರಾಜ್ಯ ಕಳ್ಳನನ್ನು ಜಿಗಣಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.
ಕನಕಪುರ ತಾಲೂಕಿನ ಮುಳ್ಳಳ್ಳಿ ನಿವಾಸಿ ಶಿವಕುಮಾರ್ (35) ಬಂಧಿತ. ಆರೋಪಿಯಿಂದ 3 ಬೈಕ್ ಹಾಗೂ 130 ಗ್ರಾಂ. ಚಿನ್ನವನ್ನು ವಶ ಪಡಿಸಿಕೊಳ್ಳಲಾಗಿದೆ. ಸೆಪ್ಟೆಂಬರ್ನಲ್ಲಿ ಜಿಗಣಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣದ ತನಿಖೆ ವೇಳೆ ಸಿಸಿಟಿವಿ ಪರಿಶೀಲನೆಯಿಂದ ಆರೋಪಿ ಚಲನವಲನ ಪತ್ತೆಯಾಗಿತ್ತು. ಶಿವಕುಮಾರ್ ಅಕ್ಕನ ಮನೆಗೆ ಬರುತ್ತಿದ್ದ ಮಾಹಿತಿ ಪಡೆದ ಪೊಲೀಸರು, ಸಮೀಪದ ಮನೆಯೊಂದನ್ನು ಬಾಡಿಗೆ ಪಡೆದು, ಆತನ ಮೇಲೆ ಕಣ್ಣಿಟ್ಟಿದ್ದರು.
ಆರೋಪಿ ಪ್ರತಿ ಬಾರಿ ಬರುವ ವಿಷಯವನ್ನು ಅಕ್ಕನಿಗೆ ಕರೆ ಮಾಡಿ ತಿಳಿಸುತ್ತಿದ್ದ. ಮನೆ ಬಳಿ ಬರುತ್ತಿದ್ದಂತೆ ಆತನ ಅಕ್ಕ ಮತ್ತು ಆಕೆಯ ಮಕ್ಕಳು ರಸ್ತೆ ಬಳಿ ನಿಂತು ಯಾರೂ ಆತನನ್ನು ನೋಡದಂತೆ ನಿಗಾ ವಹಿಸುತ್ತಿದ್ದರು. ಶಿವಕುಮಾರ್ ಅಗತ್ಯ ವಸ್ತುಗಳನ್ನು ಅಕ್ಕನಿಂದ ಪಡೆದು, ಕದ್ದ ವಸ್ತುಗಳನ್ನು ಆಕೆಗೆ ನೀಡಿ ಪರಾರಿಯಾಗುತ್ತಿದ್ದ ಎನ್ನುವುದು ತನಿಖೆಯಲ್ಲಿ ತಿಳಿದು ಬಂದಿದೆ. ಜಿಗಣಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ಕೆಂ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಲ್ಕು ರಾಜ್ಯಕ್ಕೆ ಬೇಕಿದ್ದ ಖದೀಮ : ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಕಳ್ಳತನ ಮಾಡಿ, ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ. ಈತನ ಮೇಲೆ ಬೆಂಗಳೂರು ನಗರ ಹಾಗೂ ಜಿಗಣಿ ಠಾಣಾ ವ್ಯಾಪ್ತಿಯಲ್ಲೆ 13 ಪ್ರಕರಣಗಳು ದಾಖಲಾಗಿವೆ.
ಕಳ್ಳತನಕ್ಕೆ ಪ್ಲ್ಯಾನ್ ! : ಕದ್ದ ಬೈಕ್ನಲ್ಲಿ ಶಿವಕುಮಾರ್ ಚೈನ್ ಸ್ನಾ$್ಯಚಿಂಗ್, ಮನೆಗಳ್ಳತನ ಮಾಡುತ್ತಿದ್ದ. ಬೆಂಗಳೂರಿನ ಶಿವಾಜಿ ನಗರದಲ್ಲಿ ಮ್ಯಾನೇಜ್ಮೆಂಟ್ ಆ್ ನೆಟ್ವರ್ಕಿಂಗ್ ಅಡ್ಮಿನಿಸ್ಟ್ರೆಷನ್ ಕೋರ್ಸ್ ಮಾಡಿದ್ದ ಈತ ತಾಂತ್ರಿಕವಾಗಿ ಕೃತ್ಯವೆಸಗುತ್ತಿದ್ದ ಎನ್ನುವುದು ಜಿಗಣಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.