ಕಡತಗಳ ನಿರ್ವಹಿಸದ ಅಂಗಡಿಗಳಿಗೆ ನೋಟಿಸ್

ಮುದಗಲ್‌ನಲ್ಲಿ ಶನಿವಾರ ರಸಗೊಬ್ಬರ ಅಂಗಡಿಗಳ ಮೇಲೆ ಸಹಾಯಕ ಕೃಷಿ ಅಧಿಕಾರಿ ಶ್ರೀಶೈಲ ಭೋವಿ ದಾಳಿ ನಡೆಸಿ, ದಾಸ್ತಾನು ಪರಿಶೀಲಿಸಿದರು.
ಮುದಗಲ್‌ನಲ್ಲಿ ಶನಿವಾರ ರಸಗೊಬ್ಬರ ಅಂಗಡಿಗಳ ಮೇಲೆ ಸಹಾಯಕ ಕೃಷಿ ಅಧಿಕಾರಿ ಶ್ರೀಶೈಲ ಭೋವಿ ದಾಳಿ ನಡೆಸಿ, ದಾಸ್ತಾನು ಪರಿಶೀಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಗೊಬ್ಬರ ಮಾರಾಟ ಮಳಿಗೆಗಳ ಮೇಲೆ ಕೃಷಿ ಇಲಾಖೆ ಎಡಿ ದಾಳಿ
ಮುದಗಲ್: ಪಟ್ಟಣದ ವಿವಿಧ ಗೊಬ್ಬರ ಮತ್ತು ಬೀಜ ಮಾರಾಟ ಮಳಿಗೆಗಳ ಮೇಲೆ ಕೃಷಿ ಇಲಾಖೆ ಸಹಾಯಕ ಅಧಿಕಾರಿ ಶ್ರೀಶೈಲ ಭೋವಿ ಶನಿವಾರ ದಿಢೀರ್ ದಾಳಿ ನಡೆಸಿ, ಕಡತಗಳನ್ನು ಪರಿಶೀಲಿಸಿದರು. 
ಸಮರ್ಪಕ ದಾಖಲೆಗಳನ್ನು ಹೊಂದಿರದ ಅಂಗಡಿಗಳಿಗೆ ನೋಟಿಸ್ ನೀಡುವುದರ ಜತೆಗೆ ಅಗತ್ಯ ಎಲ್ಲ ಕಡತಗಳನ್ನು ಒದಗಿಸಬೇಕೆಂದು ಶ್ರೀಶೈಲ ಭೋವಿ ಕಟ್ಟುನಿಟ್ಟಿನ ಆದೇಶ ನೀಡಿದರು. 
ಪರವಾನಗಿ ಇಲ್ಲದ ಗೊಬ್ಬರ, ಬೀಜ ಹಾಗೂ ಕೀಟನಾಶಕಗಳನ್ನು ವಹಿವಾಟು ಮಾಡಬಾರದು.
 ಒಂದು ವೇಳೆ ಅನಧಿಕೃತವಾಗಿ ಮಾರಾಟ ಮಾಡಿದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 
ಗೊಬ್ಬರದ ಕೃತಕ ಅಭಾವ ಸೃಷ್ಟಿ ಅಥವಾ ಹೆಚ್ಚಿನ ಧಾರಣೆಗೆ ಮಾರಾಟ ಮಾಡಬಾರದು. ರೈತರಿಗೆ ಸರಿಯಾದ ಮಾಹಿತಿ ನೀಡಿ ಸಮಪ್ರಮಾಣದಲ್ಲಿ ರೈತರಿಗೆ ಗೊಬ್ಬರ ವಿತರಿಸಬೇಕು. 
ಕಡ್ಡಾಯವಾಗಿ ಎಫ್‌ಐಡಿ ಸಂಖ್ಯೆ ಮೂಲಕವೇ ಯೂರಿಯಾ ಮತ್ತು ಡಿಎಪಿ ಗೊಬ್ಬರ ವಿತರಿಸುವಂತೆ ತಾಕೀತು ಮಾಡಿದರು. ಕೃಷಿ ಇಲಾಖೆ ನೌಕರ ಅಮರೇಶ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net