ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಆಧರಿಸಿ ತಾಲೂಕು ಆರೋಗ್ಯ ಅಧಿಕಾರಿ ಆರ್.ಎಸ್. ಇಂಗಳೆ ಬಬಲಾದ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಟಿಎಚ್‌ಒ ಡಾ. ಇಂಗಳೆ ಎಚ್ಚರಿಕೆ
ಬಬಲಾದ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಭೇಟಿ
ಇಂಡಿ : ಬಬಲಾದ ಗ್ರಾಮದಲ್ಲಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಹಿನ್ನೆಲೆ ಅವರಿಗೆ ನೋಟಿಸ್ ನೀಡಿ ಉತ್ತರಿಸುವಂತೆ ಟಿಎಚ್‌ಒ ಡಾ. ಇಂಗಳೆ ಎಚ್ಚರಿಕೆ ಸೂಚನೆ ನೀಡಿದ್ದಾರೆ.
ಖಾಯಂ ವೈದ್ಯರಿಲ್ಲದ ಬಗ್ಗೆ ‘ವಿಜಯವಾಣಿ’ ಪತ್ರಿಕೆ ಜು. 10ರಂದು ‘ಕಾರ್ಯರೂಪಕ್ಕೆ ಬಾರದ ಬಬಲಾದ ಆಸ್ಪತ್ರೆ ಸಿಬ್ಬಂದಿ ಸೇವೆ’ ಎಂಬ ಶಿರೋನಾಮೆಯಡಿ ಪ್ರಕಟವಾದ ವರದಿ ಆಧರಿಸಿ ತಾಲೂಕು ಆರೋಗ್ಯ ಅಧಿಕಾರಿ ಆರ್.ಎಸ್. ಇಂಗಳೆ ಬಬಲಾದ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎಂಬಿಬಿಎಸ್ ಮುಗಿಸಿದ ಹೊಸ ವೈದ್ಯರನ್ನು ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಿ ಸ್ಥಳದಲ್ಲೇ ಅವರನ್ನು ಕರೆಸಿದರು.
ಹಾಜರಾತಿಯ ಗಡುವು: ಆಸ್ಪತ್ರೆಯ ವೈದ್ಯರು ಮತ್ತು ನಿಯೋಜಿತ ಇತರೆ ಸಿಬ್ಬಂದಿ ಪ್ರತಿದಿನ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಕಡ್ಡಾಯವಾಗಿ ಹಾಜರಿರಬೇಕು. ಇದರಲ್ಲಿ ಯಾವುದೇ ರೀತಿಯ ವಿಳಂಬ ಧೋರಣೆಯನ್ನು ಸಹಿಸುವುದಿಲ್ಲ ಎಂದು ಟಿಎಚ್‌ಒ ಡಾ. ಇಂಗಳೆ ಎಚ್ಚರಿಕೆ ನೀಡಿದ್ದಾರೆ.
ಬಬಲಾದ ಆರೋಗ್ಯ ಕೇಂದ್ರಕ್ಕೆ ಬರುವ ಬಡ ರೋಗಿಗಳಿಗೆ ಇಲ್ಲೇ ಪ್ರಥಮ ಚಿಕಿತ್ಸೆ ಒದಗಿಸಬೇಕು. ಒಂದು ವೇಳೆ ಇಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದರೆ, ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸದೆ ತಕ್ಷಣವೇ ಇಂಡಿ ಸರ್ಕಾರಿ ಆಸ್ಪತ್ರೆ ಅಥವಾ ಹೊರ್ತಿ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಉಲ್ಲೇಖಿಸಿ ಕಳುಹಿಸಿ ಕೊಡಲು ತಿಳಿಸಿದರು.
ಇನ್ನೆರಡು ದಿನದಲ್ಲಿ ಹೊರ್ತಿ ಪಿಹೆಚ್‌ಸಿಯಿಂದ ಎರಡು ಬೆಡ್ ಹಾಗೂ ಕಾಟ್ ವ್ಯವಸ್ಥೆ ಮಾಡಲಾಗುತ್ತದೆ ಎಂದು
ಗ್ರಾಮಸ್ಥರಿಗೆ ಭರವಸೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದರಿಂದ ಗ್ರಾಮಸ್ಥರಲ್ಲಿ ಮತ್ತು ರೋಗಿಗಳಲ್ಲಿ ಹೊಸ ಭರವಸೆ ಮೂಡಿದೆ.