ಅಸಮಾಧಾನವಿಲ್ಲ, ಸ್ವಲ್ಪ ಬೇಸರವಿದೆ

Not upset, just a little bored.
Not upset, just a little bored.
Published on

ಪ್ರಾದೇಶಿಕ ಒತ್ತಡ ಹಾಗೂ ಸಾಮಾಜಿಕ ನ್ಯಾಯ ನೀಡುವ ವಿಚಾರದಲ್ಲಿ ಈ ಬಾರಿಯ ಸಚಿವ ಸಂಪುಟವನ್ನು ಹೈಕಮಾಂಡ್​ ತೀರ್ಮಾನಿಸಿದೆ. ಇದರಿಂದ ನನಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಅಸಮಾಧಾನವಿಲ್ಲ, ಆದರೆ ಮನುಷ್ಯನಾದ ನನಗೆ ಸಹಜವಾಗಿ ಸ್ವಲ್ಪ ಬೇಸರ ಇದೆ ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು.

ನಗರದ ಶಾಸಕರ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮನಸ್ಸಿನ ಮಾತು ಬಿಚ್ಚಿಟ್ಟ ಶಾಸಕರು, ಪಕ್ಷದಲ್ಲಿ ಲಾಬಿ ಅಂತ ನಡೆದಿಲ್ಲ, 40 ಕ್ಕೂ ಹೆಚ್ಚು ಶಾಸಕರು ಈ ಬಾರಿ ಆಕಾಂಗಳ ಪ್ರಯತ್ನ ಮಾಡಿದ್ದು ನಿಜ. ಅದರಲ್ಲಿ ಕೆಲವರಿಕೆ ಕೈ ತಪ್ಪಿರುವುದು ಸಹಜವಾಗಿದೆ ಎಂದರು,

ವರಿಷ್ಟರ ಬಳಿ ಚರ್ಚೆ

ವರಿಷ್ಠರ ಬಳಿ ಚರ್ಚೆ ಆಗಿದೆ, ಮುಂದಿನ ದಿನಗಳಲ್ಲಿ ಬೇರೆ ರೀತಿ ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದಾರೆ. ಇದೇ ರೀತಿ 4, 5 ಹಾಗೂ 6 ಬಾರಿ ಗೆದ್ದವರನ್ನು ಆಯ್ಕೆ ಮಾಡಿರುವುದು ಸಂತಸ ಇದೆ. ಅವರೊಟ್ಟಿಗೆ ಮುಂದುವರೆಯುತ್ತೇವೆ ಎಂದು ಶಾಸಕರು ತಿಳಿಸಿದರು. ಸಚಿವ ಸ್ಥಾನ ಕುರಿತು ಸಿಎಂ ಜತೆ ಮಾತುಕತೆ ನೆಡೆದಿತ್ತು, ಅಲ್ಲಿಯೂ ಭರವಸೆ ಇತ್ತು, ಆದರೆ ಹಿರಿಯರು, ಪ್ರದೇಶವಾರು, ಜಾತಿವಾರು ಸಮತೋಲನದಿಂದ ಸಚಿವ ಸ್ಥಾನ ಕೈತಪ್ಪಿರಬಹುದು ಎಂದರು. ನಿಗಮ ಮಂಡಳಿಯಲ್ಲಿ ಮುಂದುವರೆಯುವ ಬಗ್ಗೆ ಹಾಗೂ ಕಿಯೋನಿಕ್ಸ್​ ಸಂಸ್ಥೆ ಬದಲಿಗೆ ಬೇರೆ ಸಂಸ್ಥೆಯ ಅಧ್ಯಕ್ಷರಾಗುವ ಬಗ್ಗೆ ಈವರೆಗೆ ಚರ್ಚೆ ಆಗಿಲ್ಲ, ಮುಖ್ಯಮಂತ್ರಿಯವರುನೂತನವಾಗಿ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡುವುದಾಗಿ ಹೇಳಿದ್ದಾರೆ, ಕಿಯೋನಿಕ್ಸ್​ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ, ಈ ಬಾರಿ ಬೇರೆ ಯುವ ಶಾಸಕರಿಗೆ ಅವಕಾಶ ನೀಡಲಿ, ನನಗೆ ಬೇರೆ ಜವಾಬ್ದಾರಿ ನೀಡಲಿ ಅಥವಾ ಪಕ್ಷ ಸಂಟನೆಯ ಹೊಣೆಯನ್ನಾದರೂ ನೀಡಲಿ ನಿಷ್ಠೆಯಿಂದ ಮಾಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net