ಕನ್ನಡೇತರ ಕ್ಯಾಬ್ ಚಾಲಕರು ಕನ್ನಡ ಕಲಿಯಲಿ : ಬಿಳಿಮಲೆ ಆಗ್ರಹ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
Published on

ಪ್ರಮುಖ ಮುಖ್ಯಾಂಶಗಳು

  • * ಕನ್ನಡೇತರರಿಗೆ ಕನ್ನಡ ಕಲಿಸಲು ಪ್ರಾಧಿಕಾರ ಸಹಕಾರ
ಬೆಂಗಳೂರು: ಕನ್ನಡೇತರ ಕ್ಯಾಬ್ ಚಾಲಕರು ಕನ್ನಡ ಕಲಿಯಬೇಕು. ಅದಕ್ಕೆ ಪೂರಕವಾಗಿ ಅಗತ್ಯ ಸಹಕಾರ ನೀಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಈ ಸಂಬಂಧ ಸಾರಿಗೆ ಇಲಾಖೆ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಸಾರಿಗೆ ಇಲಾಖೆಯ ಮೋಟಾರು ವಾಹನ ಕಾಯ್ದೆಯಡಿ 2016ರಲ್ಲಿ ಜಾರಿಗೆ ಬಂದಿರುವ ದಿ ಕರ್ನಾಟಕ ಆನ್ ಆ್ಯಂಡ್ ಡಿಮ್ಯಾಂಡ್ ಸಾರಿಗೆ ಸೇವೆಗಳ ತಂತ್ರಜ್ಞಾನ ಸಂಗ್ರಾಹಕ ನಿಯಮಗಳನ್ನು ಸಾರಿಗೆ ಇಲಾಖೆ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಸಾರ್ವಜನಿಕರು ಮತ್ತು ಅನ್ಯ ಭಾಷಾ ಚಾಲಕರ ನಡುವೆ ಕಾಲಕಾಲಕ್ಕೆ ಉಂಟಾಗುವ ಭಾಷಾ ಸಂಘರ್ಷದ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ಸಾರ್ವಜನಿಕ ಸೇವಾ ವಲಯದಲ್ಲಿ ಕಾರ್ಯನಿರ್ವಹಿಸುವಂತಹ ವ್ಯಕ್ತಿಗಳು ಸ್ಥಳೀಯ ಭಾಷೆಯ ಕನಿಷ್ಠ ಜ್ಞಾನ ಹೊಂದಿರುವುದು ಕಡ್ಡಾಯ. ಈ ಕುರಿತು ನಿಯಮಗಳಲ್ಲಿ ಅವಕಾಶವಿದ್ದರೂ ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡದ ಕಾರಣ ಹಲವಾರು ಬಾರಿ ಅನ್ಯಭಾಷಿಕ ವಾಹನ ಚಾಲಕರು ಮತ್ತು ಕನ್ನಡಿಗ ಪ್ರಯಾಣಿಕರ ನಡುವೆ ವಾಗ್ವಾದ ಸಂಭವಿಸುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net