ವಿಜಯನಗರ ಅಲ್ಲ ಬ್ಯಾನರ್ ನಗರ: 'ಸ್ಥಳೀಯ ಶಾಸಕರಿಗೆ ಯಾವ ರೂಲ್ಸ್ ಅಪ್ಲೈ ಆಗೋಲ್ವಾ?' ಎಂದ ನೆಟ್ಟಿಗರು..Bengaluru

​Vijayanagar Banner Controversy
​Vijayanagar Banner Controversy
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಬ್ಯಾನರ್​ಗಳ ಅಬ್ಬರಕ್ಕೆ ಕೊನೆಯೇ ಇಲ್ವಾ?
  • ಆಳೆತ್ತರದ ಬ್ಯಾನರ್​ಗಳಿಂದ ವಾಹನಸಾವರರು, ಪಾದಚಾರಿಗಳಿಗೆ ಸಮಸ್ಯೆ
  • ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ಗೆ ಒಳಗಾದ ವಿಜಯನಗರ
ಬೆಂಗಳೂರು: ಇತ್ತೀಚೆಗೆ ಇನ್ಸ್ಟಾಗ್ರಾಮ್ ಸೇರಿದಂತೆ ಆನಲೈನ್ ಪ್ಲಾಟ್ ಫಾರ್ಮನಲ್ಲಿ ಬೆಂಗಳೂರಿನ ಸ್ಟೂಡೆಂಟ್ಸ್ ಹಬ್ ಎಂದೇ ಖ್ಯಾತಿ ಪಡೆದ ವಿಜಯನಗರ ವಿಭಿನ್ನವಾಗಿ ಟ್ರೋಲ್​​ ಆಗುತ್ತಿದೆ. ಈ ಪ್ರದೇಶಕ್ಕೆ‌ ಎಂಟ್ರಿ‌ ಕೊಡ್ತಿದ್ದಂತೆ ಕಾಣೋದು ರಸ್ತೆ, ಹೋಟೆಲ್​ ಅಲ್ಲ. ಬದಲಾಗಿ ಆಳೆತ್ತರಕ್ಕೆ ನಿಂತ ಬ್ಯಾನರ್, ಪೋಸ್ಟರ್​ಗಳು ಇದು ವಿಜಯನಗರ(Vijayanagar)ಅಲ್ಲ ಬ್ಯಾನರ್​ನಗರ ಎಂದು ಇಲ್ಲಿನ ನಿವಾಸಿಗಳು ವ್ಯಂಗ್ಯವಾಡುತ್ತಿದ್ದಾರೆ.

ಸಿಎಂ ಡಿಕೆ ಶಿವಕುಮಾರ್​ ವಾರ್ನಿಂಗ್​ಗೆ ಬೆಲೆ ಇಲ್ವಾ?

ಬ್ಯಾನರ್ ಅಳವಡಿಸಿ ಬೆಂಗಳೂರಿನ ಅಂದವನ್ನು ಹಾಳು ಮಾಡಬೇಡಿ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಆದರೆ ಅವರದ್ದೇ ಸರ್ಕಾರದ ಶಾಸಕರು, ಅವರ ಅಭಿಮಾನಿಗಳು ವಾರ್ನಿಂಗ್​ಗೆ ಕ್ಯಾರೆ ಎನ್ನುತ್ತಿಲ್ಲ.

ಇದು ಬ್ಯಾನರ್ ನಗರ

ಯಾವುದೇ ಹಬ್ಬ..ಶಾಸಕರ ಹುಟ್ಟು ಹಬ್ಬ ಬಂದರೆ ಸಾಕು ಶಾಸಕರ ಅಭಿಮಾನಿಗಳು, ಬೆಂಬಲಿಗರು ದೊಡ್ಡ ದೊಡ್ಡ ಪೋಸ್ಟರ್​ಗಳನ್ನು, ಬೃಹತ್ ಗಾತ್ರದ ಬ್ಯಾನರ್ ಹಾಕಿ ವಾಹನ ಸವಾರರಿಗೆ ಹಾಗೂ ಫುಟ್​ಪಾತ್​ನಲ್ಲಿ ಸಂಚರಿಸುವವರಿಗೆ ತೊಂದರೆಗೀಡು ಮಾಡುತ್ತಿದೆ. ಎಲ್ಲಿ ಕಣ್ಣಿಗೆ ಕುಕ್ಕುತ್ತವೆಯೋ, ಎಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೀನೋ ತಲೆ ಮೇಲೆ ಬಿದ್ದು ಏನಾಗುತ್ತೋ ಎನ್ನುವ ಭಯದಲ್ಲಿ ಸಂಚರಿಸುವ ಸ್ಥಿತಿ ಎದುರಾಗಿದೆ.

ನೆಟ್ಟಿಗರು ಏನಂದ್ರು?

ಕನ್ನಡದ ಸ್ಟಾಂಡ್ ಅಪ್ ಕಾಮಿಡಿಯನ್ ರಾಘವೇಂದ್ರ ಆಚಾರ್ಯಾ ಅವರು ಈ ಬಗ್ಗೆ ಹಾಸ್ಯಸ್ಪದವಾಗಿ ಹೇಳಿದ್ದರು. ಏನನ್ನನಾದರೂ ಪ್ರಶ್ನೆ ಮಾಡಿ ಎಂದು ಅಭಿಮಾನಿಗಳಿಗೆ ಕೊಟ್ಟ ಟಾಸ್ಕ್​​ನಲ್ಲಿ, ಇನ್​ಸ್ಟಾಗ್ರಾಮ್​ ಬಳಕೆದಾರನೊಬ್ಬ ನಿಮ್ಮ ವಾಸಸ್ಥಾನ ಎಲ್ಲಿ ಎಂದು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಅವರು, 'ಬೆಂಗಳೂರಲ್ಲಿ ವಿಜಯನಗರ ಇದೆ ಬ್ರೋ ಅಲ್ಲಿ ನನ್ನ ಮನೆ. ವಿಜಯನಗರ ಎಲ್ಲಿ ಬರುತ್ತೆ ಎಂದರೆ ಬ್ರೋ, ನೂರಾರು ಪೋಸ್ಟರ್ಸ್ ಇರತ್ತೆ ಅಣ್ಣನಿಗೆ ಹುಟ್ಟುಹಬ್ಬದ ಶುಭಾಷಯ ಅಂತ ಅಲ್ಲಿ ಸಂಧಿಯಲ್ಲಿ ಸಣ್ಣದೊಂದು ಮನೆ ನಂದು' ಎಂದು ವ್ಯಂಗ್ಯವಾಡಿದ್ದಾರೆ.
ಇದಕ್ಕೆ ಇನ್ ಸ್ಟಾಗ್ರಾಂ ಬಳಕೆದಾರರೊಬ್ಬರು..ನನ್ನ ಮಕ್ಕಳು ಇತ್ತೀಚೆಗೆ ಅವರು ದೇವರು ಎಂದು ಕೈ ಮುಗಿಯಲು ಶುರು ಮಾಡಿದ್ದಾರೆ ಎಂದು ಹೇಳಿದರು. ಇತ್ತೀಚೆಗೆ ಇದನ್ನೆಲ್ಲ ನೋಡಿ ಸಾಕಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.ಟ್ರಾವೆಲ್ ಹ್ಯಾಪಿ ಸೋಲ್ ಎನ್ನುವವರು ಪೋಸ್ಟ್ ಹಂಚಿಕೊಂಡೊದ್ದು, ವಿಜಯನಗರ ಪ್ರವೇಶಿಸುವ ಮುನ್ನ ಇಲ್ಲಿನ ಶಾಸಕರನ್ನು ಮೀಟ್ ಮಾಡಿ ಟ್ರೋಲ್​ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net