ಪಾವಗಡದ ಸರ್ಕಾರಿ ಶಾಲೆಗಳಲ್ಲಿಲ್ಲ ಶಿಕ್ಷಕರು

No teachers in Pavagada's government schools.
No teachers in Pavagada's government schools.
Published on
ಪಾವಗಡ: ತಾಲೂಕಿನ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲದೆ ಮಕ್ಕಳು ಶಿಕ್ಷಣದಿಂದ ವಂಚಿರಾಗುತ್ತಿದ್ದು, ವಿದ್ಯಾಥಿಗಳ ಶೈಕ್ಷಣಿಕ ದೃಷ್ಟಿಯಿಂದ ತಕ್ಷಣ ಶಿಕ್ಷಕರನ್ನು ನೇಮಿಸಬೇಕು ಎಂದು ಬಿಜೆಪಿ ಮಧುಗಿರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾವಗಡ ರವಿ ಒತ್ತಾಯಿಸಿದರು.
ತಾಲೂಕು ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ತಾಲೂಕೆಂದು ಅಣೆಪಟ್ಟಿ ಪಡೆದಿರುವ ಪಾವಗಡದ ಪ್ರಾಥಮಿಕ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆಯಿದ್ದು, ಬಿ.ಹೊಸಹಳ್ಳಿಯಲ್ಲಿ 102 ಮಕ್ಕಳಿದ್ದರೂ ಒಬ್ಬರೂ ಕಾಯಂ ಶಿಕ್ಷಕರಿಲ್ಲ. ನಿಯೋಜನಗೊಂಡ ಒಬ್ಬ ಶಿಕ್ಷಕ ಅಡುಗೆ ಇನ್ನಿತರ ಕಾರ್ಯಗಳನ್ನು ಹೇಗೆ ಪರಿಪೂರ್ಣಗೊಳಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ತಾಲೂಕಿನ 32 ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದು, ಒಂದು ಶಾಲೆಗೆ ಒಬ್ಬ ಶಿಕ್ಷಕನನ್ನು ಎರಡ್ಮೂರು ದಿನ ನಿಯೋಜನೆಗೊಳಿಸಿದರೆ ಉಳಿದ ದಿನಗಳ ಕರ್ತವ್ಯ ನಿಭಾಯಿಸುವವರು ಯಾರು?. ಕೆಲವು ಶಾಲೆಗಳಲ್ಲಿ ಬಿಸಿಯೂಟಕ್ಕೆ ಆಹಾರ ಧಾನ್ಯಗಳ ಸರಬರಾಜು ಕೂಡ ಆಗಿಲ್ಲ. ಕನ್ನಡ ಶಾಲೆಗಳು ಅವನತಿಯ ಹಾದಿ ಹಿಡಿದಿವೆ ಎಂದರು.
ಬಿಜೆಪಿ ರಾಜ್ಯ ಕಾರ್ಯಕರಣಿ ಸದಸ್ಯ ಡಾ.ಜಿ.ವೆಂಕಟರಾಮಯ್ಯ ಮಾತನಾಡಿ, ತಾಲೂಕಿನ ಬಡಮಕ್ಕಳಿಗೆ ಸರ್ಕಾರಿ ಶಾಲೆಗಳೇ ಶಿಕ್ಷಣದ ಆಧಾರ ಸ್ತಂಭವಾಗಿವೆ. ಆದರೆ ಈ ಮಕ್ಕಳು ಓದುವ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದಂತಾದರೆ ಅವರಿಗೆ ಶಿಕ್ಷಣ ನೀಡುವವರು ಯಾರು ಎಂದು ಪ್ರಶ್ನಿಸಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ್​, ತಾಲೂಕು ಘಟಕದ ಖಜಾಂಚಿ ಪುನೀತ್​, ಒಬಿಸಿ ತಾಲೂಕು ಘಟಕದ ಮುಖಂಡ ರಂಗನಾಥ್​, ಎಸ್​ಸಿ ಮೋರ್ಚಾದ ಕಾರ್ಯದರ್ಶಿ ಶಂಕರ್​ ನಾಯ್ಕ, ಪ್ರಭಾಕರ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net