ಮೇಷ: ಸಾಧನೆಗೆ ತಕ್ಕ ಪೋ›ತ್ಸಾಹ. ನೋಂದಣಿ, ಮುದ್ರಾಂಕ ಕೆಲಸಗಾರರಿಗೆ ಮೇಲಧಿಕಾರಿಗಳ ಕಿರಿಕಿರಿ. ಆಸ್ತಿ ಖರೀದಿಯಲ್ಲಿ ಗೊಂದಲ. ಶುಭಸಂಖ್ಯೆ:9 .ವೃಷಭ: ಸಿಹಿ ತಿಂಡಿ ಮಳಿಗೆಯ ಮಾಲೀಕರಿಗೆ ಅಧಿಕ ಲಾಭ. ಸರ್ಕಾರಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವಿರಿ. ಕ್ರೀಡಾಪಟುಗಳಿಗೆ ಶುಭದಿನ. ಶುಭಸಂಖ್ಯೆ: 7 .ಮಿಥುನ: ಯುವ ರಾಜಕಾರಣಿಗಳಿಗೆ ಉತ್ತಮ ಅವಕಾಶ. ಹೈನೋತ್ಪನ್ನ ಮಾರಾಟದಲ್ಲಿ ನಷ್ಟ. ಪೀಠೋಪಕರಣ ಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:9 .ಕಟಕ: ಧಾರ್ವಿುಕ ವೃತ್ತಿಪರರಿಗೆ ಧನ ನಷ್ಟ. ವಾಹನ ದುರಸ್ತಿಗೆ ಹಣ ವೆಚ್ಚವಾಗಲಿದೆ. ರೇಷ್ಮೆ ಸೀರೆ ಮಾರಾಟದಲ್ಲಿ ಲಾಭವಾಗುವುದು. ಶುಭಸಂಖ್ಯೆ:4 .ಸಿಂಹ: ಆಹಾರ ಪದಾರ್ಥಗಳ ಮಾರಾಟದಲ್ಲಿ ಹಣ ಗಳಿಕೆ. ವಿಚ್ಛೇದನ ಕಟ್ಟಳೆ ಇತ್ಯರ್ಥವಾಗಲಿದೆ. ವಕೀಲ ವೃತ್ತಿಯವರಿಗೆ ಹೆಚ್ಚು ಒತ್ತಡ. ಶುಭಸಂಖ್ಯೆ:2 .ಕನ್ಯಾ: ಸೌಂದರ್ಯ ವರ್ಧಕಗಳ ಮಾರಾಟದಲ್ಲಿ ಲಾಭ. ಆಧ್ಯಾತ್ಮಿಕ ಸಾಧನೆಯಿಂದ ತೃಪ್ತಿ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಶುಭಸಂಖ್ಯೆ:9 .ತುಲಾ: ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ವೈದ್ಯಕೀಯ ವೃತ್ತಿಯಲ್ಲಿ ಉತ್ತಮ ಹೆಸರು. ದಿನಾಂತ್ಯದಲ್ಲಿ ಪ್ರಯಾಣ ನಿಗದಿಯಾಗಲಿದೆ. ಶುಭಸಂಖ್ಯೆ:5 .ವೃಶ್ಚಿಕ: ಸ್ನೇಹಿತರೊಂದಿಗೆ ಮೋಜು ಮಸ್ತಿಗೆ ಹಣ ವ್ಯಯವಾಗಲಿದೆ. ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ. ಆತ್ಮೀಯರ ಜತೆಗೆ ಪ್ರವಾಸ. ಶುಭಸಂಖ್ಯೆ: 8 .ಧನಸ್ಸು: ಯಕ್ಷಗಾನ, ನಾಟಕ ಕಲಾವಿದರಿಗೆ ಸಾಮಾಜಿಕವಾಗಿ ಸೂಕ್ತ ಮನ್ನಣೆ ಸಿಗಲಿದೆ. ಹೊಸ ಯೋಜನೆ ಇಂದು ಕಾರ್ಯಗತವಾಗಲಿದೆ. ಶುಭಸಂಖ್ಯೆ:4 .ಮಕರ: ಚಿಕ್ಕ ಪ್ರಯಾಣದ ಸಾದ್ಯತೆ. ಕಿರುಚಿತ್ರ ನಿರ್ದೇಶಕರಿಗೆ ಲಾಭ. ಆತ್ಮೀಯ ಸ್ನೇಹಿತನ ಭೇಟಿ. ವಿದೇಶದಿಂದ ಶುಭ ಸುದ್ದಿ ಸಿಗಲಿದೆ. ಶುಭಸಂಖ್ಯೆ:4 .ಕುಂಭ: ಶುಭ ಸಮಾರಂಭದ ಆಯೋಜಕರಿಗೆ ಧನ ಲಾಭ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಮನೆ ನವೀಕರಣಕ್ಕೆ ಖರ್ಚು. ಶುಭಸಂಖ್ಯೆ:2.ಮೀನ: ಪರಿಚಿತರಿಂದ ಸಹಾಯ ದೊರೆಯಲಿದೆ. ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ. ಪುಸ್ತಕ ವ್ಯಾಪಾರಿಗಳಿಗೆ ಲಾಭ. ಆತ್ಮೀಯರ ಭೇಟಿ. ಶುಭಸಂಖ್ಯೆ:1