ಮೇಷ: ಸರ್ಕಾರಿ ಕೆಲಸಗಳಲ್ಲಿ ಚುರುಕು ಕಾಣಿಸಿಕೊಳ್ಳುತ್ತದೆ. ಪ್ರತಿಭೆಗೆ ಹಿರಿಯರ ಮೆಚ್ಚುಗೆ. ಹಣಕಾಸು ವ್ಯವಹಾರದಲ್ಲಿ ಸಣ್ಣ ಲಾಭ. ಶುಭಸಂಖ್ಯೆ: 8.ವೃಷಭ: ಕುಟುಂಬ ವಿಷಯಗಳಲ್ಲಿ ಸಂತೋಷ. ಹೊಸ ವಾಹನ ಖರೀದಿ ಮಾಡುವ ಯೋಚನೆ. ಆರೋಗ್ಯದ ಕಡೆ ಸ್ವಲ್ಪ ಗಮನ ಇರಲಿ. ಶುಭಸಂಖ್ಯೆ: 7.ಮಿಥುನ: ಹೊಸ ಪರಿಚಯಗಳಿಂದ ಪ್ರಯೋಜನ. ಉದ್ಯೋಗದಲ್ಲಿ ಒತ್ತಡ ಕಡಿಮೆಯಾಗುತ್ತದೆ. ಪರ ರಾಜ್ಯಕ್ಕೆ ಪ್ರಯಾಣದ ಸಾಧ್ಯತೆ. ಶುಭಸಂಖ್ಯೆ:2 .ಕಟಕ: ನೆಮ್ಮದಿ ದೊರೆಯುವ ದಿನ. ಹೊಸ ಕಚೇರಿಗೆ ಸಂಬಂಧಿಸಿದ ಕೆಲಸಗಳು ನಿರಾತಂಕವಾಗಿ ನೆರವೇರುತ್ತವೆ. ಖರ್ಚು ನಿಯಂತ್ರಿಸಿ. ಶುಭಸಂಖ್ಯೆ:6 .ಸಿಂಹ: ವಾಣಿಜ್ಯ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಹೊಸವಾಹನ ಮಳಿಗೆ ಆರಂಭಿಸಲು ಶುಭ ಸಮಯ. ಸ್ನೇಹಿತರ ಸಹಾಯ. ಶುಭಸಂಖ್ಯೆ:7 .ಕನ್ಯಾ: ಕೃಷಿಯಲ್ಲಿ ವಿಳಂಬ. ಉದ್ಯೋಗ ಸ್ಥಳದಲ್ಲಿ ಸಹನೆ ಇರಲಿ. ಹಿರಿಯರ ಆರೋಗ್ಯ ಕಾಳಜಿ ಅಗತ್ಯ. ಕುಲದೇವರ ಪೂಜೆ ಶ್ರೇಯಸ್ಕರ. ಶುಭಸಂಖ್ಯೆ: 3 .ತುಲಾ: ಹಣಕಾಸು ವ್ಯವಹಾರಗಳಲ್ಲಿ ಲಾಭ. ಕುಟುಂಬದಲ್ಲಿ ಶುಭ ಸುದ್ದಿ ಬರಲಿದೆ. ಹಳೆಯ ಸಮಸ್ಯೆಗೆ ಕೊನೆಗೂ ಪರಿಹಾರ ಸಿಗುತ್ತದೆ. ಶುಭಸಂಖ್ಯೆ:1 .ವೃಶ್ಚಿಕ: ಕಚೇರಿಯಲ್ಲಿ ನಿಮ್ಮ ಕಾರ್ಯಕ್ಕೆ ಮೆಚ್ಚುಗೆ. ಕಿರುಚಿತ್ರ ನಟರಿಗೆ ಹೊಸ ಅವಕಾಶ ಬರುವುದು. ಮಾತನಾಡುವಾಗ ಎಚ್ಚರ ಇರಲಿ.ಶುಭಸಂಖ್ಯೆ:9.ಧನಸ್ಸು: ವಿದ್ಯಾಭ್ಯಾಸ , ಜ್ಞಾನ ಸಂಬಂಧಿತ ಕಾರ್ಯಗಳಲ್ಲಿ ಯಶಸ್ಸು. ದೂರ ಪ್ರಯಾಣದಿಂದ ಲಾಭ. ಹಿರಿಯ ನಾಗರಿಕರಿಗೆ ಸಂತೋಷ. ಶುಭಸಂಖ್ಯೆ: 8.ಮಕರ: ಅನವಶ್ಯಕವಾಗಿ ಖರ್ಚಾದೀತು. ಕೋರ್ಟ್ ಕೆಲಸದಲ್ಲಿ ಶೀಘ್ರಗತಿ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಧೈರ್ಯದಿಂದ ಮುನ್ನಡೆಯಿರಿ. ಶುಭಸಂಖ್ಯೆ:7.ಕುಂಭ: ಸ್ನೇಹಿತರಿಂದ ಮಗನ ವಿವಾಹಕ್ಕೆ ಸಹಾಯ. ಹೂವು- ಹಣ್ಣು ವ್ಯಾಪಾರದಲ್ಲಿ ಪ್ರಗತಿ. ಕುಟುಂಬದ ಜತೆ ಸಮಯ ಕಳೆಯುವಿರಿ. ಶುಭಸಂಖ್ಯೆ:8 .ಮೀನ: ಪ್ರಮುಖ ಸಮಸ್ಯೆ ಅಂತೂ ಬಗೆಹರಿಯಲಿದೆ. ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತದೆ. ಹೊಸ ಕಾರ್ಯಗಳಿಗೆ ಕುಟುಂಬದಿಂದ ಬೆಂಬಲ. ಶುಭಸಂಖ್ಯೆ:8