ನಿತ್ಯಭವಿಷ್ಯ; ಈ ರಾಶಿಯ ಅವಿವಾಹಿತರಿಗೆ ಸೂಕ್ತ ಸಂಬಂಧ ಕೂಡಿಬರಲಿದೆ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ಮಗಳಿಗೆ ಉದ್ಯೋಗ ಸಿಗುವುದು. ಸಿದ್ಧ ಉಡುಪುಗಳ ತಯಾರಕರಿಗೆ ಲಾಭ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗುವಿರಿ. ಶುಭಸಂಖ್ಯೆ:5

ವೃಷಭ: ಹಣಕಾಸಿನ ಅಡೆತಡೆಗಳ ನಿವಾರಣೆ. ವಾಕ್ಚಾತುರ್ಯದಿಂದ ಸಾರ್ವಜನಿಕವಾಗಿ ಗೆಲುವು. ಸಾಮಾಜಿಕ ಕಾರ್ಯಗಳಿಗೆ ಚಾಲನೆ. ಶುಭಸಂಖ್ಯೆ: 7

ಮಿಥುನ: ಸರ್ಕಾರಿ ಕೆಲಸಗಳಲ್ಲಿ ಆರ್ಥಿಕ ಲಾಭ. ಕುಟುಂಬದಲ್ಲಿ ಶುಭ ಕಾರ್ಯ ಜರುಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಅಧಿಕ ಗಳಿಕೆ. ಶುಭಸಂಖ್ಯೆ: 3

ಕಟಕ: ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ. ವಾಣಿಜ್ಯ ಉದ್ಯೋಗಸ್ಥರಿಗೆ ಆತಂಕ. ಸಂಸ್ಕರಿಸಿದ ನೀರಿನ ವ್ಯಾಪಾರದಲ್ಲಿ ಲಾಭವಾಗಲಿದೆ. ಶುಭಸಂಖ್ಯೆ: 9

ಸಿಂಹ: ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಅಧಿಕಾರಿಗಳಿಂದ ಪ್ರಶಂಸೆ. ಪುಣ್ಯಕ್ಷೇತ್ರ ದರ್ಶನ. ಹಿತಶತ್ರುಗಳನ್ನು ಸಮರ್ಥವಾಗಿ ನಿಗ್ರಹಿಸುವಿರಿ. ಶುಭಸಂಖ್ಯೆ: 9

ಕನ್ಯಾ: ತಂಪು ಪಾನೀಯಗಳ ಮಾರಾಟದಲ್ಲಿ ಧನಲಾಭ, ಅವಿವಾಹಿತರಿಗೆ ಸೂಕ್ತ ಸಂಬಂಧ ಕೂಡಿಬರಲಿದೆ. ವಿದೇಶ ಪ್ರಯಾಣ ವಿಳಂಬ. ಶುಭಸಂಖ್ಯೆ: 4

ತುಲಾ: ಕೃಷಿ ಯಂತ್ರೋಪಕರಣ ವ್ಯಾಪಾರಸ್ಥರಿಗೆ ಶುಭ. ಲೆಕ್ಕ ಪರೀಕ್ಷಕರಿಗೆ ಬೇಡಿಕೆ ಹೆಚ್ಚಲಿದೆ. ಕೃಷಿಕರಿಗೆ ಆರೋಗ್ಯದ ಕಡೆ ಗಮನವಿರಲಿ.ಶುಭಸಂಖ್ಯೆ: 2

ವೃಶ್ಚಿಕ: ಗೃಹಬಳಕೆ ವಸ್ತುಗಳ ಮಾರಾಟದಲ್ಲಿ ಲಾಭ. ಆಸ್ತಿ ವಿಚಾರದಲ್ಲಿ ದುಡುಕಿನ ನಿರ್ಧಾರ ಬೇಡ. ಕುಸುರಿ ಕಲಾವಿದರಿಗೆ ಧನ ಲಾಭ. ಶುಭಸಂಖ್ಯೆ: 6

ಧನಸ್ಸು: ಅಪರಿಚಿತರ ಬಗ್ಗೆ ಎಚ್ಚರವಿರಲಿ. ವಿದೇಶದಲ್ಲಿರುವ ಮಗನಿಂದ ಶುಭವಾರ್ತೆ. ವೈರಿಗಳಿಂದ ದೂರವಿರಿ. ಬಾಳೆ ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 1

ಮಕರ: ಧಾರ್ವಿುಕ ಕ್ಷೇತ್ರಗಳಿಗ ಮುಖಂಡರಿಗೆ ಗೌರವ ಮನ್ನಣೆ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು ನಿವಾರಣೆ. ನಿಮ್ಮ ಕಲೆಗೆ ಮೆಚ್ಚುಗೆ. ಶುಭಸಂಖ್ಯೆ: 4

ಕುಂಭ: ಅರಣ್ಯ ಇಲಾಖೆಯ ನೌಕರರಿಗೆ ವರ್ಗಾವಣೆ ಸಾಧ್ಯತೆ. ಕುಟುಂಬದ ಆಸ್ತಿ ವಿಚಾರಕ್ಕೆ ಪರಸ್ಪರ ಸಹಕಾರದಿಂದ ಅಂತಿಮ ರೂಪ. ಶುಭಸಂಖ್ಯೆ:1

ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ ಸಿಗಲಿದೆ. ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು. ಹಣ್ಣು, ತರಕಾರಿ ಕೃಷಿಕರಿಗೆ ಅಧಿಕ ಧನ ಲಾಭ.ಶುಭಸಂಖ್ಯೆ:7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net