ಲಕ್ಷಾಂತರ ರೂ ಸುರಿದರು ಮುಚ್ಚದ ಗುಂಡಿಗಳು

ಲಕ್ಷಾಂತರ ರೂ.ಸುರಿದರೂ ಮುಚ್ಚದ ಗುಂಡಿ
ಲಕ್ಷಾಂತರ ರೂ.ಸುರಿದರೂ ಮುಚ್ಚದ ಗುಂಡಿ
Published on

ಪ್ರಮುಖ ಮುಖ್ಯಾಂಶಗಳು

  • ಲಕ್ಷಾಂತರ ರೂ ಸುರಿದರೂ ಮುಚ್ಚದ ಗುಂಡಿ!
  • ಗೋಟೂರ ವಿಜಯಪುರ ರಸ್ತೆಯಲ್ಲಿ ಅವಾಂತರ
  • ಗುಂಡಿ ಮುಚ್ಚುವಂತೆ ಸಾರ್ವಜನಿಕ ಒತ್ತಾಯ

ಲಕ್ಷಾಂತರ ರೂ.ಸುರಿದರೂ ತಪ್ಪದ ಗುಂಡಿ ಗೋಳು !
| ಗೋಟೂರ-ವಿಜಯಪುರ ರಸ್ತೆಯಲ್ಲಿ ಅವಾಂತರ | ಸವಾರರಿಗೆ ತಪ್ಪದ ಸಮಸ್ಯೆ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ಇಲ್ಲಿನ ಗೋಟೂರ-ವಿಜಯಪುರ ರಸ್ತೆ ಕಾಮಗಾರಿ ವಿಳಂಬದಿಂದ ವಾಹನ ಸವಾರರಿಗೆ ಈ ರಸ್ತೆಯಲ್ಲಿ ಬಿದ್ದಿರುವ ತಗ್ಗು ಗುಂಡಿಗಳಿಂದ ವಾಹನ ಚಲಾಯಿಸುವುದು ಸವಾಲಿನ ಕೆಲಸ, ದಿನೇ ದಿನ ಅಪಾಯಕಾರಿ ರಸ್ತೆಯಾಗಿ ಮಾರ್ಪಡುತ್ತಿದೆ.
ವಾಹನ ಸವಾರರಿಗೆ ಅನುಕೂಲವಾಗಲೆಂದು ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿ 548ಬಿ ರಸ್ತೆಯಾಗಿ ಮೇಲ್ದರ್ಜೆಗೇರಿಸಿರುವ ಗೋಟೂರ-ವಿಜಯಪುರ ರಸ್ತೆ ಕಾಮಗಾರಿ ಆರಂಭಿಸಿ ಆರು ವರ್ಷಗಳೇ ಕಳೆದಿವೆ.ಒಟ್ಟು 129 ಕಿಮಿ ವ್ಯಾಪ್ತಿಯ ರಸ್ತೆಯು ನಾಲ್ಕು ಕಾಮಗಾರಿ ಸಾವಳಗಿಯಿಂದ ಮುರಗುಂಡಿ ಕಾಮಗಾರಿ ಮಾತ್ರ ನಡೆದಿದ್ದು, ಉಳಿದ ಕಾಮಗಾರಿಯ ಭೂಸ್ವಾಧೀನ ಕಾರ್ಯಕ್ಕೆ ಗ್ರಹಣ ಹಿಡಿದಿದೆ.
ಮುರಗುಂಡಿಯಿಂದ-ಗೋಟೂರದಿಂದ ಚತುಷ್ಪತ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಸ್ವಾದೀನ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗುತ್ತಿದೆ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ರಸ್ತೆ ಅಭಿವೃದ್ದಿಯ ವಿಳಂಬದೊಂದಿಗೆ ಈಗಿರುವ ರಸ್ತೆಯಲ್ಲಿನ ಗುಂಡಿ ಮುಚ್ಚಲು ರಸ್ತೆ ನಿರ್ಮಾಣದ ಹೊಣೆ ಹೊತ್ತಿರುವ ರಾಷ್ಟ್ರೀಯ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಮೀನಾಮೇಷ ಎನ್ನಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಚಿವ,ಸಂಸದೆ ಮಾತಿಗೂ ಡೋಟ್ ಕೇರ್ :
ಹುಕ್ಕೇರಿ ತಾಲೂಕಿನ ಗೋಟೂರದಿಂದ ಚಿಕ್ಕೋಡಿ ನಿರ್ಮಾಣವಾಗಿರುವ ರಸ್ತೆಯಲ್ಲಿ ನಿರ್ಮಾಣವಾಗಿರುವ ಗುಂಡಿಗಳಿಗೆ ಲೆಕ್ಕವೇ ಇಲ್ಲ, ಈ ಬಗ್ಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಮತ್ತು ಚಿಕ್ಕೋಡಿ ಸಂಸದ ಪ್ರಿಯಾಂಕ ಜಾರಕಿಹೊಳಿ ಗುಂಡಿ ಮುಚ್ಚುವಂತೆ ಸೂಚನೆ ನೀಡಿದರೂ, ಅಧಿಕಾರಿಗಳು ಯಾವುದೇ ಕ್ರಮವಹಿಸದೇ, ಕಾಟಾಚಾರಕ್ಕೆ ಒಂದೇರೆಡು ಗುಂಡಿ ಮುಚ್ಚಿ ಸುಮ್ಮನಾಗಿದ್ದಾರೆ.ಪರಿಣಾಮ ಗುಂಡಿಗಳಿಗೆ ನಿತ್ಯ ವಾಹನ ಸವಾರರು ಹೈರಾಣಾಗುತ್ತಿದ್ದಾರೆ.
ಲಕ್ಷಾಂತರ ರೂ.ಸುರಿದರೂ ಮುಚ್ಚದ ಗುಂಡಿಗಳು!
ರಸ್ತೆ ಕಾಮಗಾರಿ ವಿಳಂಬವಾದ ಹಿನ್ನಲೆ ರಸ್ತೆ ಪ್ರಾಲ್ಕ್ಯದಿಂದ ಗುಂಡಿ ಮುಚ್ಚಲು ಒಟ್ಟು 12 ಕೋಟಿ ರೂ.ಗಳ ಗುತ್ತಿಗೆಯ ಟೆಂಡರ್ ಕರೆಯಲು ಯೋಜನೆ ರೂಪಿಸಿದೆ. ಈ ತುರ್ತು ಪರಿಸ್ಥಿತಿ ಎಂದು ಚಿಕ್ಕೋಡಿಯಿಂದ ಗೋಟೂರ ಗ್ರಾಮದವರೆಗೆ ಗುಂಡಿ ಮುಚ್ಚಲು ಗುತ್ತಿಗೆದಾರನಿಗೆ ಟೆಂಡರ್ ನೀಡಲಾಗಿದೆ. ಆದರೆ ಗುಂಡಿಗಳಲ್ಲಿ ಮಣ್ಣು ಮುಚ್ಚಿಹೋಗಿದೆ, ಇದು ಎರಡೇ ದಿನಕ್ಕೆ ಮಣ್ಣು ಕಿತ್ತು ಹೋಗುತ್ತಿದೆ, ಲಕ್ಷಾಂತರ ರೂ.ರಸ್ತೆಯಲ್ಲಿಸುರಿದಂತಾಗಿದೆ.
ಕೋಟ್-
ಮಳೆಗಾಲ ಆರಂಭವಾಗಿದೆ. ಚಿಕ್ಕೋಡಿಯಿಂದ ಗೋಟೂರ ರಸ್ತೆಯಲ್ಲಿ ನಿರ್ಮಾಣವಾಗಿರುವ ಗುಂಡಿಗಳಿಗೇ ಲೆಕ್ಕವಿಲ್ಲ. ಅಲ್ಲಿ ಗುಂಡಿಗಳನ್ನು ನೋಡಿದರೇ ಭಯವಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗುಂಡಿ ಮುಚ್ಚಲು ಮುಂದಾಗಬೇಕು.
ಆನಂದ ಮಾಳಿ
ಬೈಕ್ ಸವಾರ,ಚಿಕ್ಕೋಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net