ಚಿಂತಾಮಣಿ: ನಗರದ ಎಂ.ಜಿ.ರಸ್ತೆಯ ವಾರ್ಡ್ ನಂ.17ರ ತಪತೇಶ್ವರ ಕಾಲನಿಯಲ್ಲಿ ಶನಿವಾರ ರಾತ್ರಿ ಆಗ ತಾನೇ ಹುಟ್ಟಿದ ನವಜಾತ ಶಿಶುವಿನ ಶವ ಶೌಚಗೃಹದಲ್ಲಿ ಪತ್ತೆಯಾಗಿದೆ. ಕಾಲನಿಯ ನಿವಾಸಿ ನರಸಿಂಹಪ್ಪ ಅವರ ಮನೆಯ ಶೌಚಗೃಹದಲ್ಲಿ ಶಿಶು ಶವವನ್ನು ಕಂಡ ಅಕ್ಕ&ಪಕ್ಕದ ಮನೆಯವರು ಚಿಂತಾಮಣಿ ನಗರಠಾಣೆಗೆ ವಿಷಯ ತಿಳಿಸಿದ್ದು.
ಪಿಎಸ್ಐ ಪದ್ಮಾ, ಬೆರಳಚ್ಚು ತರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮನೆ ಮಾಲೀಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮನೆಯಲ್ಲಿ ಬಾಡಿಗೆಗೆ ಇದ್ದವರನ್ನು ವಿಚಾರಣೆ ನಡೆಸಿದಲ್ಲದೆ ಶಿಶುವಿನ ಕಳೇಬರ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.